ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಂಗಭೂಮಿ ಕಲಾವಿದ “ಶ್ರೀಕಾಂತ ಬಿಲಕೇರಿಗೆ” ಗೌರವ ಸನ್ಮಾನ

ಬಾಗಲಕೋಟೆ-/ಮುಧೋಳ : ದಿ .20/07/25]
ಹಳ್ಳಿ ಹಳ್ಳಿಯಲ್ಲಿ ಸಂಚರಿಸಿ ನಮ್ಮಜನಪದ ಸಂಸ್ಕೃತಿ ಯನ್ನು ಬಿಂಬಿಸುವ ಮೂಲ ಜನಪದ ಕಲೆಗಳು ಉಳಿಯಬೇಕೆಂದು ” ಎಲ್ಲಾ ಕಲಾವಿದರು” ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಜನಪದರನ್ನು ಗುರುತಿಸುತ್ತಿರುವ ರಂಗಭೂಮಿ ಕಲಾವಿದ ಬೇವೂರಿನ ಶ್ರೀಕಾಂತ ಬಿಲಕೇರಿ ಅವರ ಕಾಯ೯ ಶ್ಲಾಘನೀಯ ಎಂದು ಪ.ಪೂ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇಂದು ರವಿವಾರದ 106ನೇ ಸತ್ಸಂಗದಲ್ಲಿ ರಂಗಭೂಮಿ ಕಲಾವಿದ ಶ್ರೀಕಾಂತ್ ಬಿಲಕೇರಿ ಅವರನ್ನು ಗೌರವಿಸಿ ಮಾತನಾಡುತ್ತಾ ಅಂತ:ಕರಣವನ್ನು ಶುದ್ದಿಗೊಳಿಸುವ ಶಕ್ತಿ ಜನಪದಕ್ಕಿದೆ ಜಗತ್ತು ಇರುವವರೆಗೂ ಜನಪದ ಇರುತ್ತದೆ. ಸತ್ವಯುತವಾದ ಜನಪದ ಉಳಿಯಬೇಕು ಜನಪದ ತತ್ವ ಮುಂದಿನ ಪೀಳಿಗೆಗೆ ಉಳಿಯಲು ಸಮಾಜ ಮತ್ತು ಸಕಾ೯ರ ಸಕಾರಾತ್ಮಕವಾಗಿ ಕೈಜೋಡಿಸಬೇಕೆಂದರು.
“ಲೋಕನಾಯಕಿ” ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶಾಮಲಾ, ಆಶ್ರಮದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಉಪಸ್ಥಿತರಿದ್ದರು.
ಶ್ರೀ ಸಿದ್ಧಾರೂಢರ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಿದ್ಧಾರೂಢರ ಆರನೇ ಅಧ್ಯಾಯದ ಪಾರಾಯಣ ಮಂಗಲ, ಪ್ರಸಾದ ಜರುಗಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!