ಬೆಂಗಳೂರಿನ ಚೈತನ್ಯ ಅಂತರ ರಾಷ್ಟ್ರೀಯ ಫೌಂಡೇಷನ್ ಸಂಸ್ಥೆಯು ಇಂದು ನಡೆಸಿದ ರಾಜ್ಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತ, ಪರಿಸರ ಪ್ರೇಮಿ ಭೇರ್ಯ ರಾಮಕುಮಾರ್ ಅವರಿಗೆ ಸಾಹಿತ್ಯ, ಪರಿಸರ ಸೇವೆ ಹಾಗೂ ಗ್ರಾಮೀಣ ಸೇವೆಗಾಗಿ ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯ್ತು.
ಈ ಸಂದರ್ಭದಲ್ಲಿ ಹಿರಿಯ ಸಂಘಟಕ ನೀಲಕಂಠ ಆಡಿಗ, ಸಮಾಜ ಸೇವಕಿ ಡಾ. ಸೌಜನ್ಯ ಶರತ್, ಸಾಹಿತಿ ಡಾ. ವಸುಧ ಶ್ರೀನಿವಾಸ್, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಳೆದ 40 ವರ್ಷಗಳಲ್ಲಿ 365 ಸಾಹಿತ್ಯ ಕಾರ್ಯಕ್ರಮಗಳ ಸಂಘಟನೆ, ಹತ್ತು ಸಾವಿರಕ್ಕೂ ಹೆಚ್ಚು ಸಸಿಗಳ ವಿತರಣೆ, ಐದು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರಾಧಾನಕ್ಕೆ ಮನವೊಲಿಸುವಿಕೆ,
ಸ್ವತಹ ದೇಹದಾನ, ಕನ್ನಡ ಪರ ಜಾಗೃತಿ ಕಾರ್ಯ ಗಳನ್ನು ಪರಿಗಣಿಸಿ ಭೇರ್ಯ ರಾಮಕುಮಾರ್ ಅವರನ್ನು ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ಥಿ ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ವಸುದ ಶ್ರೀನಿವಾಸ್ ಸಭೆಯಲ್ಲಿ ತಿಳಿಸಿದರು.
- ಕರುನಾಡ ಕಂದ



















