ಬಾಗಲಕೋಟೆ: ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ವಿರೋಧ ಪಕ್ಷದ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟು ಹಬ್ಬವನ್ನು ಬಾಗಲಕೋಟೆ ಬ್ಲಾಕ್ ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅದ್ದೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ವಿವಿಧ ಮುಖಂಡರುಗಳು ಮಾತನಾಡಿ “ ಡಾ| ಮಲ್ಲಿಕಾರ್ಜುನ ಖರ್ಗೆ ಅವರು ಸರಳ ಸಜ್ಜನ ವ್ಯಕ್ತಿ. ಸದಾ ದೀನದಲಿತರ, ಬಡವರ, ರೈತರ, ಕಾರ್ಮಿಕರ ಪರವಾಗಿ ಧ್ವನಿ ಎತ್ತುವ ನಾಯಕರು. ಇಂತಹ ಮಹಾನ್ ನಾಯಕರ ಹುಟ್ಟು ಹಬ್ಬವನ್ನು ಇಂದು ನಾವು ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಿದ್ದೇವೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪ್ರಧಾನಿಯಾಗಬೇಕೆಂದು ನಮ್ಮೆಲ್ಲರ ಆಶಯ. ದೇವರು ಅವರಿಗೆ ಉತ್ತಮ ಆಯುರ್ ಆರೋಗ್ಯವನ್ನು ನೀಡಿ ಕಾಪಾಡಲಿ” ಎಂದು ಹಾರೈಸಿದರು
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಯಲ್ಲಿ ಮೇಟಿ, ಮಲ್ಲಿಕಾರ್ಜುನ ಮೇಟಿ, ಶಫೀಕ ಜಾಮದಾರ, ಈರಣ್ಣ ಹುಂಡೇಕಾರ, ಮನೋಹರ್ ಕದಂ, ರಾಜು ನಾಯ್ಕರ, ದ್ಯಾಮಣ್ಣ ಸುಣಗಾರ, ರಾಜು ಮಣ್ಣಿಕೇರಿ, ಮಹೇಶ ಬೀಳಗಿ, ಪ್ರೇಮನಾಥ ಗರಸಂಗಿ, ಸದಾಶಿವ ಕೊಡಬಾಗಿ, ಗಸ್ತಿ ವಕೀಲರು, ಮನೋಹರ ಗರಸಂಗಿ, ವಿಜಯಕಾಂತ ನೀಲನಾಯಕ, ಪರಶುರಾಮ ನಾರಾಯಣಿ, ಶ್ರವಣ ಖಾತೆದಾರ, ಶ್ರೀಧರ ನೀಲನಾಯಕ, ಬ್ರಹ್ಮಾನಂದ ಕಾಂಬಳೆ, ಕಲಾವತಿ ಬಣಸೋಡೆ, ಸೀತಾದೇವಿ ಗೆಜ್ಜಿಗಡ್ಡಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಅಫ್ತಾಬ ಸರಮುಲ್ಲಾ



















