ಕಠಿಣ ಕ್ರಮಕ್ಕೆ ಮುಂದಾದ ಪುರಸಭೆ ಆಡಳಿತ ಮಂಡಳಿಯವರು
ಬಳ್ಳಾರಿ/ ಕಂಪ್ಲಿ : ಪುರಸಭೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಸರ್ಕಾರದಿಂದ 7.50ಕೋಟಿ ಅನುದಾನ ಬಂದಿದ್ದು, ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಬಿಎಸ್ವಿ ಶಾಲಾ ಆಡಳಿತ ಮಂಡಳಿಯವರು ಕೇಸ್ ವಾಪಸ್ಸು ಪಡೆದುಕೊಳ್ಳದೇ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಆದ್ದರಿಂದ ಅಗಸ್ಟ್ 11ರಂದು ಕೇಸ್ ವಾಪಸ್ಸು ಪಡೆದುಕೊಂಡು, ನೀಡಿದ ಗಡವಿನೊಳಗೆ ಶಾಲೆ ತೆರವು ಮಾಡಿ, ಪುರಸಭೆಗೆ ಹಸ್ತಾಂಸ್ಥರಿಸಬೇಕೆಂದು ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಹೌದು. ಇಲ್ಲಿನ ಸಭೆಯಲ್ಲಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಬಿಎಸ್ವಿ ಶಾಲಾ ಆಡಳಿತ ಮಂಡಳಿಯವರನ್ನು ಕರೆಸಿ, ಅಂದಿನ ಮಾತಿನಂತೆ ಕೇಸ್ ವಾಪಸ್ಸು ಪಡೆದಿಲ್ಲ. ಇದರಿಂದ ಅಭಿವೃದ್ಧಿಗಾಗಿ ಬಂದಿರುವ ಕೋಟ್ಯಾಂತರ ಅನುದಾನವು ಹಿಂದಕ್ಕೆ ಹೋಗಲಿದೆ. ಆದ್ದರಿಂದ ಕೇಸು ವಾಪಸ್ಸು ಪಡೆದು, ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಲ್ಲವಾದಲ್ಲಿ ಎಲ್ಲಾ ಸದಸ್ಯರ ಒಮ್ಮತದಂತೆ ಶಾಲೆ ತೆರವಿಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ತಿಳಿಸಿದರು.
ನಂತರ ಸಭೆಯುದ್ಧಕ್ಕೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಅಸ್ತು ಎನ್ನಲಾಯಿತು. ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿರುವ ಅಂಗನವಾಡಿ ಕೇಂದ್ರಳಿಗೆ ಹೊಸ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸಲು ಒಪ್ಪಿಗೆ ನೀಡಲಾಯಿತು. ಈ ಹಿಂದೆ ಕೆಲಸ ಮಾಡಿದ್ದ ಹೆಲ್ಪರ್ ಮತ್ತು ವಾಟರ್ ಸಪ್ಲೇ ಮಾಲ್ ಮ್ಯಾನ್ಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಬೇಕು. ಇಲ್ಲಿನ ಪುರಸಭೆಗೆ ಒಳಪಟ್ಟಿರುವವನ್ನು ಮಾತ್ರ ತೆಗೆದುಕೊಳ್ಳಬೇಕು. ಬೇರೆ ಊರಿನವರಿಗೆ ಅವಕಾಶ ನೀಡಬಾರದು ಕೆಲ ಸದಸ್ಯರು ಖಡಕ್ಕಾಗಿ ತಿಳಿಸಿದರು.
2925-26ನೇ ಸಾಲಿನ ಎಸ್ಎಫ್ಸಿ 15ನೇ ಹಣಕಾಸು ಮತ್ತು ಪುರಸಭೆ ನಿಧಿ ಶೇ.24.10%, 7.25%ರ ಯೋಜನೆ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ತಯಾರಿರುವ ಅಂದಾಜುಪಟ್ಟಿಗೆ ಅನುಮೋದನೆ ನೀಡಲಾಯಿತು. ಹಾಗೂ ಅಂಬೇಡ್ಕರ್ ವೃತ್ತ, ವಾಲ್ಮೀಕಿ, ಕನಕದಾಸ, ಬಸವೇಶ್ವರ, ಅಬ್ದುಲ್ ಕಲಾಂ ಆಜಾದ್ ವೃತ್ತಗಳನ್ನು ನಿರ್ಮಿಸಿ ಪುತ್ಥಳಿ ಅನಾವರಣ ಮಾಡಲು ಒಪ್ಪಿಗೆ ನೀಡಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಮೋದನೆಗೆ ಒಪ್ಪಿಗೆ ಸೂಚಿಸಿದರು.
ತದ ನಂತರ ಪುರಸಭೆ ಕಛೇರಿಯಲ್ಲಿ ಫಾರಂ 3ಗೆ ಜನರು ರೋಸಿ ಹೋಗಿದ್ದು, ದಲ್ಲಾಳಿಗೆ ಮಾತ್ರ ಇಲ್ಲಿ ಬೆಲೆ ಇದೆ. ಜನರನ್ನು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಆದ್ದರಿಂದ ಇದರಲ್ಲಿ ಕಠಿಣ ಬದಲಾವಣೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಸುಶೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಡಾ.ವಿ.ಎಲ್.ಬಾಬು, ಸಿ.ಆರ್.ಹನುಮಂತ, ರಾಮಾಂಜಿನೇಯಲು, ಟಿ.ವಿ.ಸುದರ್ಶನರೆಡ್ಡಿ, ಲೊಡ್ಡು ಹೊನ್ನೂರವಲಿ, ವೀರಾಂಜಿನೀಯಲು, ಹೂಗಾರ ರಮೇಶ, ಆರ್.ಆಂಜನೇಯ, ಮೌಲಾ, ಗುಡದಮ್ಮ ಶ್ರೀನಿವಾಸ, ಸುಮಾ ರಘು, ನಾಗಮ್ಮ ಸತ್ಯಪ್ಪ, ನಾಮ ನಿರ್ದೇಶನ ಸದಸ್ಯರಾದ ಡಿ.ಮೌನೇಶ, ವಿರುಪಾಕ್ಷಿ, ಕೃಷ್ಣ ಸೇರಿದಂತೆ ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















