ಬಳ್ಳಾರಿ / ಕಂಪ್ಲಿ : ಗ್ರಾಮದ ಶ್ರೀ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಧರ್ಮಸ್ಥಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ವತಿಯಿಂದ ಮಕ್ಕಳ ಶಿಕ್ಷಣದಲ್ಲಿ ತಾಯಂದಿರ ಪಾತ್ರ ಅರಿವು ಕುರಿತು ಕಾರ್ಯಕ್ರಮ ಜರಗಿತು.
ಈ ವೇಳೆ ಸಮನ್ವಯ ಅಧಿಕಾರಿ ರೇಖಾ ಮಾತನಾಡಿ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ ಪ್ರತಿಯೊಬ್ಬರೂ ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರಗತಿಯನ್ನು ಹೊಂದಬೇಕು ಎಂದರು.
ನಂತರ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಎಸ್. ರಾಮಪ್ಪ ಮಾತನಾಡಿ ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರು ಎನ್ನುವಂತೆ ಮಗುವಿನ ಬೆಳವಣಿಗೆಯಲ್ಲಿ ತಾಯಿ ಪತ್ರ ಬಹಳಷ್ಟು ಮುಖ್ಯವಾಗಿದೆ ಶಿಕ್ಷಣದ ಜೊತೆಗೆ ಮಾನವ ಮೌಲ್ಯಗಳನ್ನು ಬಳಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಅಲ್ಲದೆ ಸಾಮಾಜಿಕ ಜಾಲತಾಣಗಳಿಂದ ಮಕ್ಕಳನ್ನು ದೂರ ಇಡುವ ಮೂಲಕ ಭವಿಷ್ಯದ ಶಿಕ್ಷಣಕ್ಕೆ ಅವರನ್ನು ಅಣಿಗೊಳಿಸುವುದು ತಾಯಂದಿರ ಜೊತೆಗೆ ಸಮಾಜದ ಪ್ರತಿಯೊಬ್ಬರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುನೀತಾ ಶಿಕ್ಷಕ ಪ್ರಹ್ಲಾದ ರಾವ್, ವೀಣಾ, ಶರಣಬಸವ, ಗಂಗಮ್ಮ, ಜಯಶ್ರೀ, ಸೇರಿದಂತೆ ಮಕ್ಕಳು ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















