ಬಳ್ಳಾರಿ/ ಕಂಪ್ಲಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಎಮ್ಮಿಗನೂರು ಗ್ರಾಮದ ಮಲ್ಲಯ್ಯ ತಾತ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಐವತ್ತು ಸಾವಿರ ಮೊತ್ತದ ಡಿ. ಡಿ. ಯನ್ನು ವಿತರಿಸಲಾಯಿತು.
ಈ ವೇಳೆ ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ ಸಂಸ್ಥೆಯು ರಾಜ್ಯದ ವಿವಿಧ ದೇವಸ್ಥಾನಗಳ ಅಭಿವೃದ್ಧಿ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರು sಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.
ನಂತರ ಎಚ್. ವೀರಾಪುರದ ಜ್ಞಾನಜೋತಿ ಶಿವಲಿಂಗ ಮಂದಿರದ ಜಡೇಶ ತಾತನವರು ಮಾತನಾಡಿ ಧರ್ಮಸ್ಥಳ ಹಲವಾರು ದಾನಗಳಿಗೆ ಹೆಸರಾಗಿದ್ದು ನಾಡಿನ ಜನರ ನೋವನ್ನು ದೂರ ಮಾಡುವ ಧಾರ್ಮಿಕ ಕ್ಷೇತ್ರವಾಗಿದೆ ಅವರ ಸಾಮಾಜಿಕ ಕಾರ್ಯಗಳು ಇನ್ನಷ್ಟು ರಾಜ್ಯಾದ್ಯಂತ ಪಸರಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕ ಮಂಜುನಾಥ ಶಿಕ್ಷಕ ಎಸ್. ರಾಮಪ್ಪ ಮಲ್ಲಯ್ಯ ತಾತ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಕಾಗಿ ಈರಣ್ಣ, ಮೀನಿಕೆರೆ ಶೇಖಣ್ಣ, ಕೋಳೂರು ಜಡಪ್ಪ, ಸುಣ್ಣದಾರ ಜಡೇಪ್ಪ, ಹನುಮಂತರೆಡ್ಡಿ, ಜಡೆಸಿದ್ದಸ್ವಾಮಿ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















