ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನ್ಯಾಯ, ನಿಷ್ಠುರತೆಗೆ ಹೆಸರುವಾಸಿಯಾದ ನ್ಯಾಯಾಧೀಶ ವಿ ಜಿ ಸಭಾಹಿತ- ರಾಮಾ ಜೋಶಿ

ಶಿರಸಿಯ ಹಿರಿಯ ನ್ಯಾಯವಾದಿ ರಾಮಾ ಜೋಷಿ ಅವರು, ವಿ ಜಿ ಸಭಾಹಿತರು ನ್ಯಾಯವಾದಿಯಾಗಿ, ನ್ಯಾಯಾಧೀಶರಾಗಿ, ನ್ಯಾಯಮೂರ್ತಿಯಾಗಿ ಬಹಳ ಉತ್ತಮ ಕೆಲಸ ನಿರ್ವಹಿಸಿದ್ದಾರೆ, ಅವರ ತಾಳ್ಮೆ, ಪರಿಶ್ರಮ ಹಾಗೂ ಅವರು ನೀಡಿದ ತೀರ್ಪುಗಳು ಐತಿಹಾಸಿಕವಾದುದು, ಅವರು ಸತತ ಅಭ್ಯಾಸಿಗಳಾಗಿ, ಅತ್ಯುತ್ತಮವಾದ ನಿರ್ಣಯಗಳನ್ನು ನೀಡಿದ್ದಾರೆ ಎಂದು, ಮಹತ್ವದ ಪ್ರಕರಣ ಒಂದರಲ್ಲಿ ದ್ವಿ ಸದಸ್ಯ ಪೀಠದಿಂದ ಇವರ ಏಕ ಸದಸ್ಯ ಪೀಠಕ್ಕೆ ಪ್ರಕರಣ ವರ್ಗಾವಣೆಗೊಂಡಿರುವುದು ಇವರ ಕರ್ತತ್ವ ಶಕ್ತಿಗೆ ಸಾಕ್ಷಿಯಾಗಿದೆ ಎಂದು ಕೊಂಡಾಡಿದರು. ಅವರು ಶಿರಸಿಯಲ್ಲಿ ಜರುಗಿದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಸ್ಟಿಸ್ ಜಿ ಎನ್ ಸಭಾಹಿತ ಹಾಗೂ ಜಸ್ಟಿಸ್ ವಿ ಜಿ ಸಭಾಹಿತ ಅವರ ಸ್ಮರಣೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಶಿರಸಿಯ ಕಾನೂನು ಮಹಾವಿದ್ಯಾಲಯದ ಅಸಿಸ್ಟೆಂಟ್ ಪ್ರೊಫೆಸರ್ ಪ್ರಮಥ ಅಡಿಗ ಮಾತನಾಡುತ್ತಾ , ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳೂ ಬಹಳ ಪ್ರಾಮುಖ್ಯತೆಯನ್ನು ಹೊಂದಿವೆ; ಭಾರತೀಯ ನಾಗರಿಕರಿಗೆ ತಮ್ಮ ಜೀವನದಲ್ಲಿ ದೇಶಪ್ರೇಮ, ರಾಷ್ಟ್ರೀಯ ಸಾರ್ವಭೌಮತ್ವ , ಏಕತೆ ಮತ್ತು ಅಖಂಡತೆ ಮಹಿಳೆಯರಿಗೆ ಗೌರವ ನೀಡುವಿಕೆ, ಪರಿಸರ ಸಂರಕ್ಷಣೆ, ಅಹಿಂಸೆ, ಭವ್ಯ ಭಾರತದ ಪರಂಪರೆ ಹಾಗೂ ಶ್ರೀಮಂತ ಸಂಸ್ಕೃತಿಗಳನ್ನು ಪಾಲಸುವುದರೊಂದಿಗೆ ದೇಶದ ಸರ್ವತೋಮುಖ ಪ್ರಗತಿಗೆ, ಸರ್ವವ್ಯಾಪಿ ಕೊಡುಗೆಯನ್ನು ನೀಡಲು ಪ್ರೇರೇಪಿಸುತ್ತದೆ ಎಂದು ಹೇಳಿದರು. ಮುಂದುವರಿದು ಅವರು, ಮೂಲಭೂತ ಕರ್ತವ್ಯಗಳನ್ನು ಪ್ರತಿಯೊಬ್ಬ ಭಾರತೀಯ ನಾಗರಿಕನು ಸ್ವಯಂ ಪ್ರೇರಣೆಯಿಂದಲೇ ತನ್ನ ದೈನಂದಿನ ಕಾರ್ಯದಲ್ಲಿ ಅಳವಡಿಸಿಕೊಳ್ಳಲು ಕಟಿಬದ್ಧರಾಗಬೇಕೆಂದು ಆಶಿಸುತ್ತದೆ. ಭಾರತೀಯ ನಾಗರಿಕರು ದೇಶದ ಅಭಿವೃದ್ಧಿಗೆ ಕಾರಣೀಕರ್ತನಾಗುವುದಲ್ಲದೆ ರಾಷ್ಟ್ರದ ವೈಜ್ಞಾನಿಕ ಪ್ರಗತಿಗೆ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗೆ ಸಮರ್ಪಣಾ ಮನೋಭಾವನೆಯನ್ನು ಹೊಂದಿರಬೇಕು. ಪ್ರತಿಯೊಬ್ಬ ನಾಗರೀಕನು ತನ್ನ ಅಸ್ತಿತ್ವವು ಕೇವಲ ಹಕ್ಕುಗಳ ಪ್ರತಿಪಾದನೆಗಷ್ಟೇ ಸೀಮಿತವಾಗಿ ಇರದೇ ಅದಕ್ಕೆ ಅವಿಭಾಜ್ಯ ಅಂಗವಾಗಿರುವ ಕರ್ತವ್ಯಗಳು ಕೂಡ ಅದರಲ್ಲಿ ಅವಿರ್ಭೂತವಾಗಿದೆಯೆ0ದು ತನ್ನ ಮನದಾಳದಲ್ಲಿ ಭಾವಿಸಬೇಕು ಎಂದು ಬಹಳ ಸೊಗಸಾದ ಉಪನ್ಯಾಸ ನೀಡುತ್ತಾ ಬಳಗದ ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ಶ್ಲಾಘಿಸಿದರು.

ಕು.ಮನಸ್ವಿ ಭಂಡಾರಿ ಪಠಿಸಿದ ಲಲಿತಾ ಸಹಸ್ರನಾಮದ ಶ್ಲೋಕಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿತು. ಶಾಂತಿ ಭಟ್ಟ ಸ್ವಾಗತಿಸಿ, ಪ್ರಸ್ತಾವನೆ ಮಾಡಿ, ಉಪನ್ಯಾಸಕರನ್ನು ಪರಿಚಯಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆ ಮಾತನಾಡಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು ಪತ್ರಿಕೆಗಳಿಗೆ ಪತ್ರಕರ್ತರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿ, ಉಪನ್ಯಾಸಕರಿಗೆ, ಮುಖ್ಯ ಅತಿಥಿಗಳಿಗೆ ಗೌರವಾರ್ಪಣೆ ಸಲ್ಲಿಸಿ ಸಭಿಕರೆಲ್ಲರಿಗೂ ವಂದಿಸಿದರು.
ಸಭೆಯಲ್ಲಿ ನಾರಾಯಣ ಪುರಾಣಿಕ, ಶಂಕರ ಹೆಗಡೆ ಭದ್ರನ್, ಕೃಷ್ಣವೇಣಿ ಹೆಗಡೆ, ಎಸ್ ವಿ ಹೆಗಡೆ, ರಾಮನಬೈಲ್, ಎಸ್ ಎಸ್ ಹೆಗಡೆ, ಪಿ ಆರ್ ಹೆಗಡೆ, ದಾಮೋದರ ಭಂಡಾರಿ, ಸಂಧ್ಯಾ ಭಂಡಾರಿ ,ಸುರೇಶ ಹೆಗಡೆ ಸಂಕೊಳ್ಳಿ, ವಿ ವಿ ಭಟ್ಟ, ವಿ ಡಿ ಶೆಟ್ಟಿ ,ಕಮಲಾ ಭಟ್ಟ ,ಆಶಾ ಸಭಾಹಿತ, ಶೈಲಾ ಜೋಶಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಕೊಡಕ್ಕಲ್ ಶಿವಪ್ರಸಾದ, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!