ಬಳ್ಳಾರಿ/ ಕಂಪ್ಲಿ : ಆಸ್ತಿ, ಸರ್ಕಾರಿ ಉದ್ಯೋಗಿಗಿಂತ ಸಂಸ್ಕಾರವಂತ ವಧು-ವರರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಪೋಷಕರು ನಿಗಾ ವಹಿಸಬೇಕು ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಉಚಿತ ವಧು-ವರರ ಮಾಹಿತಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಆದಾಯ ಗಳಿಸುವ ವಧು ವರರ ಶ್ರೇಷ್ಠ ಅನ್ವಯಿಸುವುದು ಬಹುದೊಡ್ಡ ಸಮಸ್ಯೆ ಅಂತಾಗಿದೆ ಮಹಿಳಾ ಮಂಡಳಿಯವರು ಉಚಿತ ವಧು ವರರ ಕೇಂದ್ರ ಆರಂಭಿಸಿದ್ದರಿಂದ ಆರ್ಥಿಕವಾಗಿ ಹಿಂದುಳಿದ ವಧು ವರರಿಗೆ ಅನುಕೂಲವಾಗಿದ್ದು ಸಮಾಜವಾದವರು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳಿಗೆ ಲಿಂಗ ತಾರತಮ್ಯ ಮಾಡದೆ ಉತ್ತಮ ಶಿಕ್ಷಣ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಬಿ. ಎಂ. ಪುಷ್ಪಾ ಮಾತನಾಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ವೀರಶೈವ ಲಿಂಗಾಯತ ಸಮುದಾಯದ ವಧು-ವರರ ಹೆಸರುಗಳನ್ನು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ನೋಂದಾಯಿಸಿ ಸೂಕ್ತ ಮಾಹಿತಿ ಪಡೆದುಕೊಳ್ಳಬಹುದು.
ವಧು ವರರ ಹೆಸರು ನೋಂದಣಿ ಮಾಹಿತಿಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆ ತನಕ ನೊಂದಾವಣಿ ಈ ಕೆಳಕಂಡ ಮೊಬೈಲ್ ಸಂಖ್ಯೆಗಳಿಗೆ 8310990272, 9986789272, 9663917729 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಡಳಿ ಅಧ್ಯಕ್ಷರಾದ ಮುಕುಂದ ಶಿವಗಮ್ಮ, ಪದಾಧಿಕಾರಿಗಳಾದ ಡಾ. ಶಾರದಾ ಹಿರೇಮಠ, ವಾಲಿ ಶಕುಂತಲಾ ಸೇರದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ



















