ಬಳ್ಳಾರಿ / ಕಂಪ್ಲಿ : ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಜರಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಯೋಜನೆಯು ಕಂಪ್ಲಿ ತಾಲೂಕಿನಲ್ಲಿ ಸುಮಾರು 11 ವರ್ಷದಿಂದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಸಮಾಜಮುಖಿ, ಜನಪರ ಸೇವಾ ಕಾರ್ಯವನ್ನು ಅತ್ಯುತ್ತಮವಾಗಿ ಮಾಡಿಕೊಂಡು ಬರುತ್ತಿದ್ದು ತಾಲೂಕಿನಲ್ಲಿ ಇವರೆಗೂ ಒಟ್ಟು 2593 ಸ್ವ- ಸಹಾಯ ತಂಡಗಳ ರಚನೆ ಮಾಡಿ, ಒಟ್ಟು 22913 ಸದಸ್ಯರುಗಳಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಳ ಮೂಲಕ ಆರ್ಥಿಕ ಸೌಲಭ್ಯ ಒದಗಿಸಿಕೊಡುವುದರ ಜೊತೆಗೆ ಯೋಜನೆಯ ವಿವಿಧ ಸೌಲಭ್ಯಗಳು ಮತ್ತು ಸಹಾಯಧನವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಎಲ್ಲಾ ಕುಟುಂಬಗಳಿಗೆ ಯೋಜನೆಯಿಂದ ಕೃಷಿಗಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಗಿ ಮಹಿಳೆಯರ ಸಬಲೀಕರಣಕ್ಕೆ ಬೇಕಾದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತೀದೆ ಪ್ರಸ್ತುತ ಆರ್ಥಿಕ ವರ್ಷದ ಜುಲೈ ತಿಂಗಳಲ್ಲಿ ಸ್ವ – ಸಹಾಯ ತಂಡಗಳಿಗೆ ಹೊಸದಾಗಿ 1006 ಸದಸ್ಯರನ್ನು ಅಭಿಯಾನ ರೂಪದಲ್ಲಿ ಸೇರ್ಪಡೆ ಮಾಡಿಸಲಾಯಿತು. ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರು ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳ ಸಭೆ ನಡೆಸಿ 1006 ಹೊಸ ಸದಸ್ಯರ ಸೇರ್ಪಡೆ ಅಭಿಯಾನವನ್ನು ಅತ್ಯುತ್ತಮವಾಗಿ ಸಾಧನೆ ಮಾಡಿರುವುದನ್ನು ಗುರುತಿಸಿ ಸಂತೋಷ ವ್ಯಕ್ತಪಡಿಸಿ ಎಲ್ಲಾ ಕಾರ್ಯಕರ್ತರಿಗೆ ಶುಭ ಹಾರೈಸಿ ಸದರಿ ಸದಸ್ಯರಿಗೆ ಯೋಜನೆಯ ವಿವಿಧ ಸೌಲಭ್ಯಗಳು, CSC ಕಾರ್ಯಕ್ರಮ ಗಳು ಕೃಷಿ ಕಾರ್ಯಕ್ರಮಗಳು ಸರಿಯಾಗಿ ಮಾಹಿತಿ ನೀಡಿ ಜನರನ್ನು ಮುಖ್ಯವಾಹಿನಿಗೆ ತರುವಂತೆ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು ಸಭೆಯಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ ಅವರು ಜಿಲ್ಲಾ ನಿರ್ದೇಶಕರನ್ನು ಸ್ವಾಗತಿಸಿಕೊಂಡು 1006 ಸದಸ್ಯರ ಸೇರ್ಪಡೆ ಮಾಡಿರುವ ದಾಖಲಾತಿಗಳನ್ನು ಹಸ್ತಾಂತರಿಸಿದರು.
ಈ ಸಭೆಯಲ್ಲಿ ಕೃಷಿ ಅಧಿಕಾರಿ ಸಂಜುಕುಮಾರ್, ತಾಲೂಕಿನ ವಿಚಕ್ಷಣಾಧಿಕಾರಿ ಶ್ರೀಶೈಲ, ಕಚೇರಿಯ ಹಣಕಾಸು ಪ್ರಬಂಧಕರಾದ ಮುರಗೇಶ್, ಮೇಲ್ವಿಚಾರಕರುಗಳಾದ, ರಾಜು, ಪ್ರಭು, ಮಂಜುನಾಥ, ಮಂಜುಳಾ, ಜಯಲಕ್ಷ್ಮಿ, ಅವಿನಾಶ, ಮಹಾಂತೇಶ, ವೀರಯ್ಯ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















