ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಗೀತೆ ಬಿಡುಗಡೆ

ಬಾಗಲಕೋಟೆ/ ಇಳಕಲ್: ದುಶ್ಚಟಗಳಿಂದ ವ್ಯಕ್ತಿಯ ಆರೋಗ್ಯ ಕೆಡುವುದಲ್ಲದೇ ಕುಟುಂಬ ಬೀದಿ ಪಾಲಾಗುತ್ತದೆ, ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ ಅದಕ್ಕಾಗಿ ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು ಅದರಿಂದುಂಟಾಗುವ ದುಷ್ಕರ್ಮಿಗಳ ಕುರಿತ ಜಾಗೃತಿ ಮೂಡಿಸಬೇಕು ಎಂದು ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಮ ನಿ ಪ್ರ ಗುರು ಮಹಾಂತ ಸ್ವಾಮಿಜಿಯವರು ನುಡಿದರು.
ಅವರು ಸಮೀಪದ ಹಿರೇಸಿಂಗನಗುತ್ತಿಯ ಕವಿ ಕಲಾವಿದ ಚಿತ್ರಕಲಾ ಶಿಕ್ಷಕ ಬಿ. ತಿರುಪತಿ ಶಿವನಗುತ್ತಿ ಅವರು ವ್ಯಸನ ಮುಕ್ತ ದಿನಾಚರಣೆಯ ಪ್ರಯುಕ್ತ ರಚಿಸಿ ಹಾಡಿದ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಗೀತೆಯ ವಿಡಿಯೋ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀಗಳು ತಿರುಪತಿ ಶಿವನಗುತ್ತಿ ಅವರು ತುಂಬಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು ಅಪಾರವಾದ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದಾರೆ. ಈಗಾಗಲೇ ಇವರ ಮತದಾನದ ಮಹತ್ವದ ಬಗ್ಗೆ, ಸರಕಾರಿ ಶಾಲೆಗಳ ವಿಶೇಷತೆ ಬಗ್ಗೆ ಪರಿಸರದ ಬಗ್ಗೆ ರಚಿಸಿ ಹಾಡಿದ ಜಾಗೃತಿ ಗೀತೆಗಳು ಜನಪ್ರಿಯವಾಗಿವೆ ಅದರಂತೆ ಈ ಹಾಡು ಸಹಿತ ಜನರಲ್ಲಿ ಜಾಗೃತಿ ಮೂಡಿಸಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಹಜ ಸ್ಥಿತಿಯೋಗದ ಗುರುಗಳಾದ ವಿರುಪಾಕ್ಷ ಗುರೂಜಿ ಯವರು ಮಾತನಾಡಿ ನಮ್ಮ ಆರೋಗ್ಯ ಎಲ್ಲಾ ಸಂಪತ್ತಿಗಿಂತಲೂ ಮಿಗಿಲು ಆರೋಗ್ಯ ಕೆಟ್ಟ ಮೇಲೆ ಪರಿತಪಿಸುವದಕಿಂತ ಜಾಗೃತಿ ವಹಿಸಿ ಸ್ವಾಸ್ಥ್ಯ ಕಾಪಾಡಿಕೊಳ್ಳುವುದೇ ಮೇಲು ಎಂದರು
ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯರಾದ ವೆಂಕಟೇಶ್ ಬಡಿಗೇರ ಚಂದ್ರಕಾಂತ ಸರೋಧೆ ಹಿರಿಯ ಪತ್ರಕರ್ತ ಶಾಂತಣ್ಣ ಸರಗಣಾಚಾರಿ ಬಸವರಾಜ ಮಠದ ಯುವ ಉದ್ಯಮಿ ಪ್ರಫುಲ್ ಪಟೇಲ್ ಕಲಾವಿದ ಶಿಕ್ಷಕ ಶ್ರೀಶೈಲ ಧೋತ್ರೆ ಶಿಕ್ಷಕರಾದ ಬಸವರಾಜ ಅಂಗಡಿ ಗುಂಡಪ್ಪ ಕುರಿ ಸಂಗಮೇಶ ತೆಗ್ಗಿನಮನಿ ಹಾಗೂ ಅನ್ವರ್ ತಾಳಿಕೋಟಿ ಉಪಸ್ಥಿತರಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!