
ಯುವ ಪೀಳಿಗೆ ವ್ಯಸನ ಮುಕ್ತರಾಗಿ ಸುಂದರ ಜೀವನ ರೂಪಿಸಿಕೊಳ್ಳಿ- ಜ್ಯೋತಿಲತಾ ಉಪನ್ಯಾಸಕರು.
ಯಾದಗಿರಿ/ ಗುರುಮಠಕಲ್: ಪಟ್ಟಣದ ಪೂಜ್ಯ ಶ್ರೀ ಶ್ರೀ ಶ್ರೀ ಮ.ನಿ.ಪ್ರ. ಡಾ|| ಮಹಾಂತ ಶಿವಯೋಗಿ ಸ್ವಾಮಿಜಿ ಅವರ ಜನ್ಮ ದಿನದ ಪ್ರಯುಕ್ತ ಇಂದು ತಹಸೀಲ್ದಾರ್ ಕಛೇರಿ ಗುರುಮಠಕಲ್ ದಿಂದ
ಬಸ್ ನಿಲ್ದಾಣ ಮಾರ್ಗದಿಂದ ಬಸವೇಶ್ವರ ವೃತ್ತದ ವರೆಗೆ ತಾಲೂಕ ಆಡಳಿತ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ವೈದ್ಯಕೀಯ ಇಲಾಖೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಾಗೂ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ವ್ಯಸನ ಮುಕ್ತ ದಿನಾಚರಣೆಯ ಜಾಥಾ ಕಾರ್ಯಕ್ರಮದ ಜೊತೆಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜರುಗಿತು.
ತಹಶೀಲ್ದಾರ್ ಶಾಂತಗೌಡ ಬೀರಾದರ ವ್ಯಸನದಿಂದ ದೂರ ಉಳಿಯಲು ಅಲ್ಲಿ ನೇರದಿರುವವರಿಗೆ ಪ್ರತಿಜ್ಞೆ ಮಾಡಿಸಿದರು, ಜ್ಯೋತಿಲತಾ ಉಪನ್ಯಾಸಕರು ಮಹಾಂತ ಶಿವಯೋಗಿಗಳು ತಮ್ಮ ಜೋಳಿಗೆ ಹಿಡಿದು ಜನರಲ್ಲಿ ದುಷ್ಚಟಗಳನ್ನು ಬಿಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ, ಆವರ ಮಾರ್ಗದಲ್ಲಿ ಯುವ ಪೀಳಿಗೆ ಮುಂದೆ ಸಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಾಂತಗೌಡ ಬಿರಾದಾರ, ಉಪ ತಹಶೀಲ್ದಾರ್ ನರಸಿಂಹಮೂರ್ತಿ, ಉಪ ತಹಶೀಲ್ದಾರ್ ಬಸವರಾಜ್ ಸಜ್ಜನ್, ಸೋಮಶೇಖರ್ ಪತ್ತರ, ಶಿವ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಭಾರತೀ ದಂಡೋತಿ, ರಾಮಚಂದ್ರಪ್ಪ, ಮಹಿಪಾಲರೆಡ್ಡಿ,ಇನ್ನುಳಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















