ಬೀದರ್/ ಬಸವಕಲ್ಯಾಣ : ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭವನ್ನು ಎಲ್ಲ ಯುವಕರು ಸೇರಿ ಐತಿಹಾಸಿಕ ಹಾಗೂ ಅರ್ಥಪೂರ್ಣ ನೆರವೇರಿಸಬೇಕು ಎಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭದ ಮಾರ್ಗದರ್ಶಕರು ಹಾಗೂ ಮೆಹಕರ ತಡೋಳಾದ ಪೂಜ್ಯಶ್ರೀ ಷ. ಬ್ರ. ರಾಜೇಶ್ವರ ಶಿವಾಚಾರ್ಯರು ನುಡಿದರು.
ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ಹಾಗೂ ದಸರಾ ದರ್ಬಾರ್ ಸ್ವಾಗತ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಉಪನ್ಯಾಸ ಮಾಲೆ, ಪತ್ರಿಕಾ ದಿನಾಚರಣೆಯ ಮತ್ತು ದಸರಾ ದರ್ಬಾರ್ ಯುವಘಟಕ ಉದ್ಘಾಟನೆ ಸಮಾರಂಭ ದ ದಿವ್ಯಸಾನಿಧ್ಯ ವಹಿಸಿ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯವನ್ನು ಭಕ್ತರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ ಯುವಕರು ಸಮಾಜದ ದೊಡ್ಡ ಶಕ್ತಿಯಾಗಿದ್ದು ಯುವಕರಿಗೆ ಧರ್ಮ ಸಂಸ್ಕಾರ ಅವಶ್ಯವಾಗಿದ್ದು, ಮುಂಬರುವ ನವರಾತ್ರಿ ದಸರಾ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭವನ್ನು ಶ್ರದ್ಧಾ ಭಕ್ತಿಯಿಂದ ಸೇವೆ ಗೈದು ಯಶಸ್ವಿ ಗೊಳಿಸಬೇಕೆಂದು ಯುವಕರಿಗೆ ಕರೆ ನೀಡಿದರು.
ದಸರಾ ದರ್ಬಾರ್ ಸಮಾರಂಭದ ಇನ್ನೋರ್ವ ಮಾರ್ಗದರ್ಶಕರಾದ ಸಂಸ್ಥಾನ ಗವಿಮಠದ ಪೂಜ್ಯಶ್ರೀ ಷ. ಬ್ರ ಡಾ. ಅಭಿನವ ಘನಲಿಂಗ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಚಂದ್ರಕಾಂತ ಹಾಲಣ್ಣ ಅಧ್ಯಕ್ಷತೆ ವಹಿಸಿದ್ದರು. ಡಾ. ಸಾಗರ ತುತಾರೆ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಸಮಿತಿಯ ಸುನೀಲ ಪಾಟೀಲ ರಾಮಚಂದ್ರ ಹುಡುಗೆ, ವೇದಿಕೆ ಮೇಲಿದ್ದರು.
ಪತ್ರಕರ್ತರಿಗೆ ಗೌರವ ಸನ್ಮಾನ ಬಸವಕಲ್ಯಾಣದ ಗವಿಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಗವಿಮಠ ಟ್ರಸ್ಟ್ ಹಾಗೂ ದಸರಾ ದರ್ಬಾರ್ ಸಮಿತಿ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೆಹಕರ ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು, ಗವಿಮಠದ ಶ್ರೀ ಡಾ. ಅಭಿನವ ಘನಲಿಂಗ ಶಿವಾಚಾರ್ಯರು ಕಾರ್ಯನಿರತ ಪತ್ರಕರ್ತ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ಸಮಿತಿಯ, ಸೋಮಶೇಖರ ವಸ್ತ್ರದ, ಬಸವಂತಪ್ಪ ಲವಾರೆ, ಎ. ಜಿ. ಪಾಟೀಲ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ಮಲ್ಲಿಕಾರ್ಜುನ ಅಲುಗಡೆ, ಚಂದ್ರಶೇಖರ್ ಲಾತುರೆ, ರಾಕೇಶ ಪುರವಂತ, ಮಲ್ಲಿಕಾರ್ಜುನ ನಂದಿ, ರೇವಣಸಿದ್ದಯ್ಯ ಮಠಪತಿ, ಶ್ರೀಶೈಲ ವಾತಡೆ ಇದ್ದರು. ಈರಣ್ಣ ಶೀಲವಂತ ಪ್ರಾರ್ಥನಗೀತೆ ಹಾಡಿದರು. ಪ್ರೊ. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು. ರಮೇಶ ರಾಜೋಳೆ ಸಂಚಾಲನೆ ಮಾಡಿದರು. ಶಕುಂತಲಾ ಮಠ ಮಂಗಲ ಗೀತೆ ಹಾಡಿದರು.
ವರದಿ: ಶ್ರೀನಿವಾಸ ಬಿರಾದಾರ



















