ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ್ಪೊರೇಟ್ ಸಾಹಿತ್ಯದಲ್ಲಿ ಕಾವ್ಯ ಕಡಿಮೆ..

ಕನ್ನಡ ಸಾಹಿತ್ಯವು ಮಗ್ಗಲು ಬದಲಿಸಿದಂತೆಲ್ಲಾ ಹೊಸ ಕಾವ್ಯ ಪ್ರಕಾರಗಳು ಸೃಷ್ಟಿಗೊಂಡವು. ಛಂದಸ್ಸು ವ್ಯಾಕರಣಗಳಿಂದ ಸಂಕೀರ್ಣವಾದ ಸಾಹಿತ್ಯವು ಕಾಲಕ್ರಮೇಣ ಅವುಗಳನ್ನೆಲ್ಲ ಬಿಡಿಸಿಕೊಂಡು ಎಲ್ಲರಿಗೂ ಕೈಗೆಟಕುವಂತೆ ಸಮಾಜದ ಅಂಗಳದಲ್ಲಿ ಬಂದು ನಿಂತವು. ನಂತರ ನವ್ಯ, ಬಂಡಾಯ, ನವೋದಯ, ಪ್ರಗತಿಶೀಲ ಹೀಗೆ ಹಲವು ಪ್ರಕಾರಗಳ ಸಾಹಿತ್ಯವು ತನ್ನ ಸ್ವರೂಪವನ್ನು ಬದಲಿಸಿಕೊಂಡು ಬಂದಿತ್ತು. 30 – 40ರ ದಶಕದಲ್ಲಿ ಕುವೆಂಪು ಅವರು ಬರೆಯುತ್ತಿದ್ದ ಪದ್ಯಗಳು ಪುಸ್ತಕಗಳು ಆ ಕಾಲದ ಓದುಗರಿಗೆ ಅರ್ಥೈಸಿಕೊಳ್ಳಲು ಅಷ್ಟೇನೂ ಸಮಯ ತೆಗೆದುಕೊಳ್ಳುತ್ತಿರಲಿಲ್ಲ. ಅದೇ ಕುವೆಂಪುರವರ ಸಾಹಿತ್ಯವನ್ನು ನಾವು ಇಂದು ಓದಬೇಕಾದರೆ ಕನ್ನಡ ನಿಘಂಟನ್ನು ಪಕ್ಕದಲ್ಲಿ ಇಟ್ಟುಕೊಂಡಿರಬೇಕು. ರಾಮಾಯಣ ದರ್ಶನಂ ಓದುವಾಗ ಎಷ್ಟೋ ಪದಗಳು ನಾವು ಕೇಳೇ ಇರುವುದಿಲ್ಲ. ನಾವು ಧಾರವಾಡ ಸೀಮೆಯಲ್ಲೆಲ್ಲಾ ತಿರುಗಿದರೂ ಸಹ ಬೇಂದ್ರೆಯವರ ಕನ್ನಡವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತೇವೆ, ಕರಾವಳಿಯ ಸೌಂದರ್ಯ ಸಂಸ್ಕೃತಿಯನ್ನು ಅನುಭವಿಸಿದರೂ ಸಹ ಕಾರಂತರ ಕಾದಂಬರಿಗಳು ಆಳಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಮಾಸ್ತಿಯವರು ಮೂಲತಃ ತಮಿಳರಾಗಿದ್ದರು ಅವರ ಅಚ್ಚ ಕನ್ನಡಕ್ಕೆ ಕನ್ನಡಿ ಹಿಡಿದಂತಿತ್ತು ಅವರ ಕನ್ನಡ. ಇನ್ನು ಗೋಕಾಕರು ಸಹ ಅಷ್ಟೇ ಅಧ್ಯಯನದ ತಳ ಮುಟ್ಟಿ ಸಾಹಿತ್ಯಕ್ಕೆ ಹೊಸ ರೂಪವನ್ನು ಕೊಟ್ಟರು. ಅನಂತಮೂರ್ತಿಯವರು, ಕಾರ್ನಾಡರು, ಕಂಬಾರರ ಕಾಲಾವಧಿಗಳಲ್ಲಿ ನಾವು ಇದ್ದಿದ್ದರಿಂದ ಅವರ ಸಾಹಿತ್ಯವನ್ನು ಜೀರ್ಣಿಸಿಕೊಳ್ಳಲು ಅಷ್ಟೇನೇ ಕಷ್ಟವಾಗಲಿಲ್ಲ. ದೇವನೂರು ಮಹಾದೇವರು, ಸಿದ್ದಲಿಂಗಯ್ಯನವರು ಶೋಷಣೆಯ ಸುಳಿಯಲ್ಲಿ ಸಿಲುಕಿ ಬಳಲಿದವರ ಬದುಕನ್ನು ಸಾಹಿತ್ಯದಲ್ಲಿ ಸೂರೆಗೊಳಿಸಿದರು, ಬಟ್ಟೆಯ ಕೊಳೆಯನ್ನು ತಿಕ್ಕಲಷ್ಟೇ ಮಹಿಳೆ ಎಂದು ಮೂದಲಿಸುತ್ತಿದ್ದ ಸಮಾಜಕ್ಕೆ ಮಹಿಳೆಯರ ಘನತೆ ಮತ್ತು ಸ್ಥಾನಮಾನವನ್ನು ಅನೇಕ ಮಹಿಳಾ ಸಾಹಿತಿಗಳು ತಮ್ಮ ಅಂಕಣ, ಕೃತಿಗಳಲ್ಲಿ ಚರ್ಚಿಸಿದ್ದಾರೆ.
ಬದುಕಿನಲ್ಲಿ ಕರುಣೆಗಿಂತ ಬವಣೆಗಳು ಹೆಚ್ಚೆಂದು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಸಾಬೀತುಪಡಿಸಿದ್ದಾರೆ.
ಲೇಖನಿಗಳ ಮೂಲಕವೇ ಆಳುವವರಿಗೆ ಅಂಕುಶವಾಕಿದ ಲಂಕೇಶ್, ರವಿಬೆಳಗೆರೆಯವರು. ಕವನಗಳ ಮೂಲಕವೇ ಮನೆ ಮನೆ ಮಾತದ ಒಲವಿನ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ಪದ್ಯಗಳು. ನಾಟಕಗಳ ಮೂಲಕವೇ ನಾಡಿನ ಪರಂಪರೆ ಸಾರಿದ ಹ ಮಹಾನಾಯಕರು, ಸಮಾಜದ ಎದುರು ಸರ್ಕಾರಗಳನ್ನು ಬೆತ್ತಲು ಮಾಡುತ್ತಿದ್ದ ಹಿರಣ್ಣಯ್ಯ ರವರ ನಾಟಕಗಳು, ಹೀಗೆ ನಮ್ಮ ನಾಡಿನ ಸಾಹಿತ್ಯ ಸಮೃದ್ಧದ ಸುಪ್ಪತ್ತಿಗೆಯಲ್ಲಿ ಇತ್ತು, ಆದರೆ ಇಂದು ಇದೆಯೇ, ಈ ಪ್ರಶ್ನೆಯನ್ನು ನಾವೆಲ್ಲಾ ಈಗ ಕೇಳಿಕೊಳ್ಳಬೇಕು ನಿಜ ದೊಡ್ಡ ದೊಡ್ಡ ಪುಸ್ತಕಗಳನ್ನು ಓದುವಷ್ಟು ವ್ಯವಧಾನ ಇಂದಿನ ಪೀಳಿಗೆಗೆ ಇಲ್ಲ ಅವರಿಗೆಲ್ಲ ರೀಲ್ ಸ್ಕ್ರೋಲ್ ಮಾಡಿದಂತೆ ಪೇಜನ್ನು ಟರ್ನ್ ಮಾಡಬೇಕು, ಅರ್ಥವಾಗದಿದ್ದರೆ ಓದುವುದೇ ವ್ಯರ್ಥವೆಂದು ತೀರ್ಮಾನಿಸುತ್ತಾರೆ, ಸಾಹಿತ್ಯವೆಂಬುದು ನಿಂತ ನೀರಲ್ಲ ಓದುಗ ಕೇಳುಗನಿದ್ದಾಗಲೇ ಕವಿಗೆ, ಲೇಖಕನಿಗೆ ಅಸ್ತಿತ್ವ ಇಂದಿನ ಜನಕ್ಕೆ ಏನು ಬೇಕು ಅದನ್ನೇ ಇಂದಿನ ಲೇಖಕರು ನೀಡುತ್ತಿದ್ದಾರೆ. ಅಂಕಣ ಪುಸ್ತಕಗಳನ್ನು ಕನ್ನಡದಲ್ಲಿ ಬರೆಯುತ್ತೇವೆ ಅದರಲ್ಲಿ ಎಷ್ಟು ಕನ್ನಡ ಶಬ್ದಗಳನ್ನು ಬೆಳೆಸುತ್ತೇವೆ, ಹತ್ತಾರು ಪುಸ್ತಕಗಳು ಹಸ್ತಪ್ರತಿಗಳಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಆದರೆ ಆಸಕ್ತಿಯಿಂದ ಎಷ್ಟು ಓದುತ್ತಿದ್ದೇವೆ?
ಓದು ಎಂಬುದು ಮನಸ್ಸು ಚಪ್ಪರಿಸುವಂತೆ ಇರಬೇಕು ಅಲಂಕಾರಗಳು, ಪ್ರಾಸಗಳು ಪದಗಳ ಬಳಕೆ ಎಲ್ಲವೂ ಬಂದೂಕಿನ ನಳಿಕೆಯಿಂದ ಬಂದಂತೆ ಇರಬೇಕು. ಆದರೆ ಇಂದು ನಮ್ಮ ಸಾಹಿತ್ಯಗಳು ಹಾಗೆ ಇದ್ದಾವೆಯೇ.. ಉದಾಹರಣೆಗೆ ” ನಾನು ಮೈಸೂರಿನಿಂದ ಬೆಂಗಳೂರಿಗೆ ಟ್ರೈನಿನಲ್ಲಿ ಹೋದೆ, ರೈಲ್ವೆ ಸ್ಟೇಷನ್ ಇಂದ ಮೆಟ್ರೋ ಸ್ಟೇಷನ್ ಗೆ ನಡೆದು, ಮೆಟ್ರೋ ಹತ್ತಿ ಇಳಿದು ಮನೆಗೆ ಹೋಗಿ ಮಲಗಿದೆ “
ಮತ್ತೊಂದು ಉದಾಹರಣೆ ನೋಡಿ. ” ಪ್ರತಿ ಬಾರಿಯೂ ರೈಲಿನಲ್ಲಿ ಹೋಗುವಾಗ ವ್ಯವಸ್ಥೆ ಯಾಕಿಂಗಿದೆ ಎನಿಸುತ್ತದೆ, ಯೋಚಿಸಲು ಕ್ಷಣವಿಲ್ಲದಂತೆ ದುಡಿಯಲು ಹಪಹಪಿಸುವ ಅಸಂಖ್ಯಾರ ನಡುವೆ ನಾನೊಬ್ಬ, ಪ್ರತಿ ಬಾರಿಯೂ ಮೆಟ್ರೋದಲ್ಲಿ ಹೋಗುವಾಗ ಜೀವಂತ ಶವ ಪೆಟ್ಟಿಗೆಯಲ್ಲಿ ಸಾಗುತ್ತಿರುವೆ ಎಂಬ ಭಾವ, ಮುಖ ನೋಡಿ ಮುಗುಳ್ನಗಲು ಸಹ ವ್ಯವಧಾನ ಇಲ್ಲದವರ ನಡುವೆ ಅವಧಾನದ ಅರ್ಥ ತಿಳಿಸುವುದು ಸಹ ವ್ಯರ್ಥವೆಂದು ಹೊರ ನಡೆದೆ” ಭಾವನೆಗಳು ಭಾಷೆಯಲ್ಲಿ ನಳನಳಿಸಬೇಕು ಪತ್ರಕರ್ತರು ವರದಿ ಸಿದ್ದ ಮಾಡಿದಂತೆ ಸಾಹಿತ್ಯವನ್ನು ಸಿದ್ಧಪಡಿಸಿದರೆ ಕಾರ್ಪೊರೇಟ್ ಲೈಫ್ ಗೆ ಸಾಹಿತಿಗಳು ಸಾಗುವಳಿ ಮಾಡುತ್ತಿದ್ದಾರೆ ಎನಿಸುತ್ತದೆ. ಅದಕ್ಕೆ ನಾನು ಹೇಳಿದ್ದು ಕಾರ್ಪೊರೇಟ್ ಸಾಹಿತ್ಯದಲ್ಲಿ ಕಾವ್ಯ ಕಡಿಮೆ ಎಂದು..

✍🏼 ತರುಣ್ ಕುಮಾರ್ ಡಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!