ಬೀದರ್ ಜಿಲ್ಲಾ ಔರಾದ ತಾಲೂಕಿನ ಔರಾದ್ ಪಟ್ಟಣದ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಸಾಗರ್ ಖoಡ್ರೆ ಭೇಟಿ ನೀಡಿದರು. ಪವಿತ್ರ ಶ್ರಾವಣ ಮಾಸದ ಎರಡನೇ ಸೋಮವಾರದ ಅಂಗವಾಗಿ ಬೀದರ್ ಲೋಕಸಭಾ ಕ್ಷೇತ್ರದ ಔರಾದ್ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಮರೇಶ್ವರ ಉದ್ಭವ ಲಿಂಗ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಆಶೀರ್ವಾದ ಪಡೆದು ಈ ಸಂದರ್ಭದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ದೇವಸ್ಥಾನದ ಮಹಾದಾರ ನಿರ್ಮಾಣಕ್ಕಾಗಿ ತಮ್ಮ ಸಂಸದರ ಹಾಗೂ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಒಂದು ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು ಬಸವರಾಜ ದೇಶಮುಖ್ ಕುಮಾರ ದೇಶಮುಖ್ ರಾಜಕುಮಾರ್ ಶರಣಪ್ಪ ನೆಹರು ಪಾಟೀಲ್ ಪ್ರಕಾಶ್ ನಿರ್ಮಲ ಉಪಸ್ಥಿತರಿದ್ದರು.
ವರದಿ ಸಂಗಮೇಶ ಚಿದ್ರೆ



















