ಬಳ್ಳಾರಿ / ಕಂಪ್ಲಿ : ಕಂಪ್ಲಿ-ಗಂಗಾವತಿ ಸಂಪರ್ಕದ ತುಂಗಭದ್ರಾ ನದಿಯಲ್ಲಿ ಅಧಿಕ ನೀರು ಹರಿದ ಬಂದ ಹಿನ್ನಲೆ ಸತತ ಎರಡು ದಿನ ಸೇತುವೆ ಮುಳುಗಿದ ಪರಿಣಾಮ ಸಾರ್ವಜನಿಕ ಮತ್ತು ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ, ಭಾನುವಾರದಿಂದ ಸೇತುವೆ ಮೇಲಿನ ಸಾರಿಗೆ ಬಸ್ ಸಂಚಾರಕ್ಕೆ ಗಂಗಾವತಿ ಲೋಕೋಪಯೋಗಿ ಅವಕಾಶ ಮಾಡಿಕೊಟ್ಟಿದೆ.
ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಗೆ ರೈತರ ಜೀವನಾಡಿ ತುಂಗಭದ್ರಾ ಜಲಾಶಯವು ಸುಮಾರು 80 ಟಿಎಂಸಿ ನೀರು ಸಂಗ್ರಹಿಸಿ, ಉಳಿದ ನೀರನ್ನು ನದಿಗೆ ಹರಿದ ಹಿನ್ನಲೆ ಕಂಪ್ಲಿ ಸೇತುವೆಯು ಜು.27ರಿಂದ 30ರವೆಗೆ ಮುಳಿಗಿದೆ. ಇದರಿಂದ ಇಲ್ಲಿನ ಸಂಚಾರಕ್ಕೆ ನಿಷೇಧ ಏರಲಾಗಿತ್ತು. ನಂತರ ಜು.30ರಂದು ಮಧ್ಯಾಹ್ನದಿಂದಲೇ ನದಿಯಲ್ಲಿ ನೀರು ಇಳಿ ಮುಖವಾಗಿದ್ದರಿಂದ ಸೇತುವೆ ಲಘು ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಬಸ್ ಸಂಚಾರಕ್ಕೆ ಅನುಮತಿ ದೊರತಿದ್ದಿಲ್ಲ. ಸೋಮವಾರ ಬೆಳಿಗ್ಗೆಯಿಂದಲೇ ಸಾರಿಗೆ ಬಸ್ ಗಳು ಓಡಾಟ ಆರಂಭಿಸಿದವು. ಇದರಿಂದ ಇಲ್ಲಿನ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಪ್ರಯಾಣಿಕರಿಗೆ ಅನುಕೂಲವಾಗಿದೆ. ಪ್ರತಿ ವರ್ಷವು ನದಿ ಪ್ರವಾಹಕ್ಕೆ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಅಡಚಣೆಯಾಗುವುದು ಪ್ರತಿಯೊಬ್ಬರಿಗೂ ತೊಂದರೆ ಉಂಟಾಗಿದೆ. ಆದ್ದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ವಹಿಸಿ, ಹೊಸ ಸೇತುವೆಗೆ ನಾಂದಿಯಾಡಬೇಕೆಂದು ಜನರ ಆಶಯವಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















