ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬ್ಯಾಂಕ್ ಪ್ರಗತಿಗೆ ಶೇರುದಾರರ ಸಹಕಾರ ಕಾರಣ: ಖಾಂಜಾದೆ

ವಿಜಯಪುರ/ ತಾಳಿಕೋಟೆ : ಕಳೆದ 89 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮುದಾಯದ ಪ್ರತಿಷ್ಠಿತ ಈ ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.42.45 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಕಳಕಳಿ ಗ್ರಾಹಕರ ಸಹಕಾರ ಮತ್ತು ಬ್ಯಾಂಕ್ ಸಿಬ್ಬಂದಿಗಳ ಪ್ರಾಮಾಣಿಕ ಸೇವೆ ಪ್ರಮುಖ ಕಾರಣವಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಚಂದಾಹುಸೇನ ಖಾಂಜಾದೆ ಹೇಳಿದರು. ಪಟ್ಟಣದ ಈದ್ಗಾ ಶಾದಿ ಮಹಲ್ ದಲ್ಲಿ ರವಿವಾರ ಹಮ್ಮಿಕೊಂಡ ಬ್ಯಾಂಕ್ ನ 89ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಈ ಬ್ಯಾಂಕು ಕೇವಲ ಒಂದು ಹಣಕಾಸಿನ ಸಂಸ್ಥೆಯಾಗಿರದೆ ಸಮುದಾಯದ ಆಧಾರ ಸ್ತಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಬ್ಯಾಂಕಿನ ಶೇರು ಬಂಡವಾಳ, ಸದಸ್ಯರ ಸಂಖ್ಯೆ, ಠೇವುಗಳ ಸಂಗ್ರಹ, ಸಾಲ ಹಾಗೂ ಮುಂಗಡಗಳು ವಿಸ್ತರಿಸಿದ್ದು ಅನುತ್ಪಾದಕ ಆಸ್ತಿಗಳ ಪ್ರಮಾಣ ಕೇವಲ ಶೇ.2 ರಷ್ಟಿದೆ, ಶೇರುದಾರರ ಪ್ರೋತ್ಸಾಹ ದೊಂದಿಗೆ ಲಾಭದಲ್ಲಿ ಸಾಗುತ್ತಿರುವ ಈ ಬ್ಯಾಂಕ್ ಭವಿಷ್ಯದಲ್ಲಿ ಇನ್ನೂ ಹಲವಾರು ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ಕೊಡಲು ಯೋಜನೆ ರೂಪಿಸಿದೆ ಎಂದರು.
ನಿರ್ದೇಶಕರಾದ ಇಬ್ರಾಹಿಂ ಮನ್ಸೂರ್ ಹಾಗೂ ಮುನ್ನಾ ಅರ್ಜುಣಗಿ ಮಾತನಾಡಿ 89 ವರ್ಷಗಳಿಂದ ಮುನ್ನಡೆಯುತ್ತಿರುವ ಸಮುದಾಯದ ಈ ಪ್ರತಿಷ್ಠಿತ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆಯಲು ಇದರ ಸಂಸ್ಥಾಪಕ ಸದಸ್ಯರೇ ಕಾರಣ ಅವರ ಪರಿಶ್ರಮ ತ್ಯಾಗದ ಫಲವಾಗಿ ಇಂದು ಈ ಬ್ಯಾಂಕು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ. ಇದನ್ನು ಇನ್ನಷ್ಟು ಪ್ರಗತಿಯತ್ತ ತೆಗೆದುಕೊಂಡು ಹೋಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ, ಸಹಕಾರಿ ಸಂಘ ಸಂಸ್ಥೆಗಳು ಪರಸ್ಪರ ಸಹಕಾರದಿಂದ ನಡೆಯುತ್ತವೆ ಸಾಲ ತೆಗೆದುಕೊಂಡವರು ಸಕಾಲಕ್ಕೆ ಸಾಲ ಮರುಪಾವತಿಸಲು ಪ್ರಯತ್ನಿಸಬೇಕು ಇದು ಬ್ಯಾಂಕಿನ ಬೆಳವಣಿಗೆಗೆ ಅಗತ್ಯವಾಗಿದೆ, ನೀವು ಕೊಟ್ಟ ಸಲಹೆಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಇಟ್ಟು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ವ್ಯವಸ್ಥಾಪಕ ಎಲ್.ಆರ್. ನಾಗೂರ ಮಾತನಾಡಿ 2025-26 ನೇ ಸಾಲಿನ ಅಂದಾಜು ಆಯವ್ಯಯದ ಮುಂಗಡ ಪತ್ರ, ನಿವ್ವಳ ಲಾಭದ ವಿಲೇವಾರಿ ಮತ್ತು ಸನ್ನದು ಲೆಕ್ಕಪರಿಶೋಧಕರ ನೇಮಕಾತಿಗಾಗಿ ಸಭೆಗೆ ವಿಷಯ ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಶೇರುದಾರರಿಗೆ, ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನಿಸಿ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಶೇರುದಾರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ರಫೀಕ್ ಬೇಪಾರಿ, ನಿರ್ದೇಶಕರಾದ ಮೆಹಬೂಬ ಕೆಂಭಾವಿ, ಫಯಾಜ್ ಉತ್ನಾಳ, ಮಹಮ್ಮದ್ ಇಸ್ಮಾಯಿಲ್ ಮನಗೂಳಿ, ಸಿಕಂದರಬಾಷಾ ಡೋಣಿ, ದಾದಾಪೀರ ಚೌದ್ರಿ, ಮೊಹಮ್ಮದ್ ಶಫೀಕ ಇನಾಮದಾರ, ಎಂ.ಎ.ಅರ್ಜುಣಗಿ, ಮಹಮ್ಮದ್ ಆದಮ ಅತ್ತಾರ,ಸಕೀನಾಬಿ ಲಾಹೋರಿ, ಮಾಜಾನಬಿ ಚೆನ್ನೂರ, ಸಿಬ್ಬಂದಿಗಳಾದ ಎಚ್.ಎಮ್. ಹಂಡೆಬಾಗ, ಟಿ.ಎ.ನಮಾಜಕಟ್ಟಿ, ಆರ್‌.ಕೆ. ನಡುವಿನಮನಿ, ಎಸ್.ಡಿ.ರಂಜಣಗಿ, ಎಸ್. ಎಮ್.ನಮಾಜಕಟ್ಟಿ ಎಂ.ಜೆ.ಪಟೇಲ, ಬಿ.ಎ.ಬೀಳಗಿ, ಶಮ್ಮು ಮಕಾಂದಾರ ಪಿಗ್ಮಿ ಏಜೆಂಟರಾದ ಎಂ.ಎ.ಮುಲ್ಲಾ, ಎಂ.ಝಡ್ ಲಾಹೋರಿ ಹಾಗೂ ಶೇರುದಾರರು ಭಾಗವಹಿಸಿದ್ದರು.

ವರದಿ ನಜೀರ ಅಹಮದ ಚೋರಗಸ್ತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!