ಬಾಗಲಕೋಟೆ/ ಹುನಗುಂದ : ಪೊಲೀಸ್ ಸ್ಟೇಷನ್ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಮಾಡಿ ಮಾನ್ಯ IGP ಹಾಗೂ DG ಯವರು ನೀಡಿದ ಸೂಚನೆಗಳ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಸಾರ್ವಜನಿಕರಿಗೆ ಹಾಗೂ ಎಲ್ಲಾ ಸಮುದಾಯದ ಮುಖಂಡರಿಗೆ ಹಬ್ಬವನ್ನು ಸೌಹಾರ್ದತೆಯ ಮೂಲಕ ಆಚರಿಸುವಂತೆ ತಿಳುವಳಿಕೆಯನ್ನು ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ಅವರಣದಲ್ಲಿ ದಿನಾಂಕ 11 .08 .2025 ರಂದು ಸೋಮವಾರ ಪೂರ್ವಭಾವಿ ಸಭೆಯನ್ನು ಹುನಗುಂದ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಿದ್ದು ಕೌಲಗಿ ತಿಳುವಳಿಕೆ ನೀಡಿ ಮಾತನಾಡಿ ಸನಾತನ ಪರಂಪರೆಯಲ್ಲಿ ಗಣೇಶ ಹಬ್ಬವು ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ಕೂಡಿಸಲು ಬಾಲ್ ಗಂಗಾಧರ್ ತಿಲಕರು ಕರೆಯ ಮೇರೆಗೆ ಗಣೇಶ ಹಬ್ಬವನ್ನು ಪ್ರತಿಷ್ಠಾಪಿಸಿದರು ಆದರೆ ಅಂದು ಸೌಹಾರ್ದತೆಯಿಂದ ಕೂಡಿತ್ತು ಇಂದು ಹಬ್ಬದ ಹೆಸರಿನಲ್ಲಿ ಗಲಭೆಗಳಾಗುತ್ತಿರುವುದು ವಿಷಾದನೀಯ ಸಂಗತಿ ಅಂತ ಆಸ್ಪದಗಳಿಗೆ ಅವಕಾಶ ನೀಡದೆ ಸೌಹಾರ್ದತವಾಗಿ ಗಣೇಶ್ ಹಬ್ಬವನ್ನು ಆಚರಿಸುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಪೇದೆ ನಾಗರಾಜ್ ಕುಂದರಗಿ ಹಾಜರಿದ್ದರು. ಪೂರ್ವಭಾವಿ ಸಭೆಯಲ್ಲಿ ಶಿವನಗೌಡ ಹನುಮ ಗೌಡ್ರು ಶಂಕರಗೌಡ ರಂಗನಗೌಡ ಶರಣಪ್ಪ ಹೆರಕಲ್ ಸಂಗನಗೌಡ ಕೇರೇಗೌಡರ್ ಗಣೇಶ್ ಗೌಡ ಹನುಮ್ ಗೌಡ್ರು ಹನುಮಂತಗೌಡ ಭಗವಂತ ಗೌಡ ರಮೇಶ್ ಜಬ್ಬಲ್, ನಾಗಪ್ಪ ಭೀಮಪ್ಪ ಅನಗವಾಡಿ ವಿಜಯ್ ಕುಮಾರ ಹನೂರು ಯಮನಪ್ಪ ಬಡಿಗೇರ ಯಮನಪ್ಪ ಪೂಜಾರಿ ಮಾಂತೇಶ್ ಕೆಂಚನಗೌಡ್ ಬಸಪ್ಪ ಬಿಸನಾಳ್ ಶೇಖಪ್ಪ ಮುದುಕನ ಗೌಡ್ರು ಸಂಗಮೇಶ್ ವಾಲೀಕರ್ ಇತರರು ಭಾಗವಹಿಸಿದ್ದರು.
- ಕರುನಾಡ ಕಂದ



















