ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದುಕಿಗೆ ಬೆಳಕು ನೀಡಿದ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು- ಪಿ. ಡಿ. ಕುಂಬಾರ

ಮುಗಳಖೋಡದ ಪಿ.ಕೆ.ಪಿ.ಎಸ್.ಮಾಜಿ ಅಧ್ಯಕ್ಷ ಪಿ .ಡಿ.ಕುಂಬಾರ

ಬಾಗಲಕೋಟೆ/ ಮುಧೋಳ : ಸವ೯ರೂ ಸುಖವಾಗಿ ಬಾಳಲಿ ಎಂಬ ಧ್ಯೇಯೋದ್ದೇಶದಿಂದ ಪ್ರಾರಂಭಿಸಿದ ಧಮ೯ಸ್ಥಳದ ಪೂಜ್ಯರಾದ ವೀರೇಂದ್ರ ಹೆಗ್ಗಡೆಯವರ ಕನಸು ಇಂದು ಸಾಕಾರಗೊಳ್ಳುತ್ತಿದೆ ಎಂದು ಮುಗಳಖೋಡದ ಪಿ .ಕೆ. ಪಿ. ಎಸ್. ನ ಮಾಜಿ ಅಧ್ಯಕ್ಷ ಹಾಗೂ ಇಲ್ಲಿಯ ಶೌಯ೯ ವಿಪತ್ತು ಘಟಕದ ಹಾಲಿ ಅಧ್ಯಕ್ಷ ಪರಮಾನಂದ .ಡಿ.ಕುಂಬಾರ ಅವರು ಹೇಳಿದರು. ಅವರು ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ಜರುಗಿದ ಶೌರ್ಯ ವಿಪತ್ತು ಘಟಕದ 2 ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಧಮ೯ಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳು ಬಡವರಿಗೆ ಆಥಿ೯ಕ ಶಕ್ತಿಯನ್ನು ತುಂಬುತ್ತಿದೆ ಅಲ್ಲದೆ ವ್ಯಸನ ಮುಕ್ತ ಸಮಾಜ ರೂಪಿಸುವಲ್ಲಿ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ಹಿರಿದಾದದ್ದು ಎಂದರು. ಲೋಕ ನಾಯಕಿ ಸಂಸ್ಥೆಯ ಅಧ್ಯಕ್ಷೆ ಹಾಗೂ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಾದ ಎಲ್.ಶ್ಯಾಮಲಾ ಅವರು ಮಾತನಾಡಿ ಕಷ್ಟಕಾಲದಲ್ಲಿ ಬದುಕಿನ ಗೂಡು ಕಟ್ಟಿಕೊಳ್ಳಲು ಬಡವರಿಗೆ ಆಸರೆಯಾಗಿರುವ ಧಮ೯ಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಸಕಲರು ಸದುಪಯೋಗಪಡಿಸಿಕೊಳ್ಳಲು ಹೇಳಿದರು. ಪೂಜ್ಯರಾದ ಮುತ್ತಣ್ಣ ಪೂಜಾರಿ ಒಡೆಯರ್ ಅವರು ಸಭೆಯ ಸಾನ್ನಿಧ್ಯ ವಹಿಸಿದ್ದರು. ಹಣಮಂತ ನಾವ್ಹಿ, ಪ್ರಕಾಶ ಕುಂಬಾರ, ವಿಠಲ ಮೇತ್ರಿ, ಈರಪ್ಪ ಕುಂಬಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!