ಶಿವಮೊಗ್ಗ/ : ತೀರ್ಥಹಳ್ಳಿಯ ತುಂಗಾ ಕಾಲೇಜಿನ ಸುವರ್ಣ ಮಹಿಳಾ ವಸತಿ ನಿಲಯದಲ್ಲಿ
79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್, ತೀರ್ಥಹಳ್ಳಿ. ಇವರ ಸಹಯೋಗದಲ್ಲಿ ತುಂಗಾ ಮಹಾವಿದ್ಯಾಲಯದ, ಮಹಿಳಾ ವಸತಿ ನಿಲಯದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ ಕಾರ್ಯಕ್ರಮವಾದ
‘ಹದಿಹರೆಯದವರಲ್ಲಿ ಆರೋಗ್ಯ – ಅರಿವು’ ಇದರ ಕುರಿತಾಗಿ ತೀರ್ಥಹಳ್ಳಿಯ ಪ್ರಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸುಮಾ ರವರು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕವಾಗಿ ಆಗುವ ಬದಲಾವಣೆಗಳನ್ನು ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಿದರು. ಈ
ಸಮಾರಂಭದ ಅಧ್ಯಕ್ಷತೆಯನ್ನು ತುಂಗಾ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಮತ್ತು ತೀರ್ಥಹಳ್ಳಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಕಾಂತ್ ಎಸ್. ಭಟ್ ರವರು ವಹಿಸಿದ್ದರು. ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲ,ಪ್ರಶಾಂತ್ ಹೆಗ್ಗಾರ್, ಲಯನೆಸ್,ಸಹನ ಶ್ರೀಕಾಂತ್ ಭಟ್, ಲಯನ್ಸ್ ಕ್ಲಬ್ ಕಾರ್ಯದರ್ಶಿಯಾದ ಲ, ಲಿಂಗರಾಜು, ತುಂಗಾ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಲ,ಬಿ ಕೆ ಹರ್ಷ ರವರು ಉಪಸ್ಥಿತರಿದ್ದರು. ಸುವರ್ಣ ಮಹಿಳಾ ವಸತಿ ನಿಲಯದ ವಾರ್ಡನ್, ಉಪನ್ಯಾಸಕಿ ಕುಮಾರಿ ಸಿಂಧು ಪಿ ರವರು ಎಲ್ಲರನ್ನು ಸ್ವಾಗತಿಸಿದರು. ತುಂಗಾ ಮಹಾವಿದ್ಯಾಲಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರಸ್ವಾಮಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪ್ರಸನ್ನ ಎಲ್ ಕೆ ರವರು ಎಲ್ಲರಿಗೂ ವಂದಿಸಿದರು
ಈ ಕಾರ್ಯಕ್ರಮದ ಸಂಚಾಲಕರಾದ ಡಾ. ದೀಪ ಎಲ್ ಹಾಗೂ ಉಪನ್ಯಾಸಕಿಯರಾದ ಕುಮಾರಿ ಶ್ರೀ ಶಾಂತಿ, ಕುಮಾರಿ ಪೂರ್ಣಿಮಾ ಮತ್ತು ಕುಮಾರಿ ಭೂಮಿಕಾ ರವರು ಹಾಗೂ ಸುವರ್ಣ ಮಹಿಳಾ ವಸತಿ ನಿಲಯದ ವಿದ್ಯಾರ್ಥಿನಿಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರದಿ : ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.



















