ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹೊಸ ನೆಲ್ಲೂಡಿ ಶಾಲೆ ನಂ-1

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ನೆಲ್ಲೂಡಿ ಮಕ್ಕಳು ತ್ರೋಬಾಲ್ ಗುಂಪು ಆಟದ ಸ್ಪರ್ಧೆಯಲ್ಲಿ ಬಾಲಕ ಹಾಗೂ ಬಾಲಕಿಯರು 2011-12 ರಿಂದ ಸತತ ಜಯಿಸಿ ಸಾಧನೆಗೈದ ಏಕೈಕ ಕನ್ನಡ ಮಾಧ್ಯಮ ಶಾಲೆಯಾಗಿ ವಿಜೃಂಭಿಸುತ್ತಿದೆ.

ಈ ಸಂದರ್ಭದಲ್ಲಿ ಮುಖ್ಯ ಗುರು ಬಿ. ಚಂದ್ರಶೇಖರ್ ಮಾತನಾಡಿ ಎಮ್ಮಿಗನೂರು ಕ್ಲಸ್ಟರ್ ಹಾಗೂ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಶಾಲಾ ಮಕ್ಕಳು ವಿಜೇತರಾಗಿ ಬಳ್ಳಾರಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸತತವಾಗಿ 2011-12 ರಿಂದ ನಮ್ಮ ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡಗಳು ವಲಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯನ್ನು ಗೈದಿದ್ದು, ಈ ಹಿಂದೆ 2016-17-18 ನೇ ಸಾಲಿನಲ್ಲಿ ಸಹ ಜಿಲ್ಲಾ ಮಟ್ಟದ ಜಯಸಿ, ನಂತರ ವಿಭಾಗ ಮಟ್ಟದಲ್ಲೂ ಸಹ ದ್ವಿತೀಯ ಸ್ಥಾನತಂದು ಶಾಲೆಗೆ ಮತ್ತು ಊರಿಗೆ ಕೀರ್ತಿಯನ್ನು ತಂದ ಇತಿಹಾಸವು ಸಹ ಇದೆ ಎಂದು ತಿಳಿಸಿದರು.

ನಂತರ ಸಹ ಶಿಕ್ಷಕ ಹಾಗೂ ಟೀಮ್ ಮ್ಯಾನೇಜರ್ ಸರ್ವೇಶ್ ಮಾತಾನಾಡಿ ನಮ್ಮೂರ ಶಾಲೆಯಲ್ಲಿ ಆಟದ ಮೈದಾನದ ಕೊರತೆ ಜೊತೆಗೆ ಸಹ ಶಿಕ್ಷಕರ ಕೊರತೆ ಇದ್ದರೂ ಸಹ, ಮುಖ್ಯ ಗುರುಗಳ ಸಹಾಕಾರದಿಂದ ನಮ್ಮ ಮಕ್ಕಳಿಗೆಲ್ಲ ಆತ್ಮಸ್ಥೈರ್ಯ ತುಂಬಿತ್ತ, ಈ ಹಿಂದೆ ಇದ್ದ ಕ್ರೀಡಾ ಗುರುವೃದ್ಧ ಹಾಕಿಕೊಟ್ಟ ಅಡಿಪಾಯವನ್ನೇ ಮುಂದುವರಿಸುವ ಮೂಲಕ ಇಂಥಹಾ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಎಲ್ಲಾ ಮಕ್ಕಳಿಗೆ ಪಾಲಕ ಪೋಷಕರಿಗೂ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ಇದೇ ವೇಳೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಮಕ್ಕಳಿಗೆ ಸಿಬ್ಬಂದಿ ವರ್ಗದವರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕಿ ಟೀಮ್ ಕೋಚ್ ರಾಜೇಶ್ವರಿ, ಸುವರ್ಣ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.

ವರದಿ ಜಿಲಾನಸಾಬ್ ಬಡಿಗೇರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!