ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್.ಆರ್.ಕಂಠಿ ವೇದಿಕೆಯಿಂದ ಹಾಲು ಕುಡಿಯುವ ಹಬ್ಬ ಆಚರಣೆ

ಆಹಾರ ದೇವರ ಸ್ವರೂಪ:ಗುರು ಮಹಾಂತ ಶ್ರೀಗಳು

ಬಾಗಲಕೋಟೆ/ ಇಲಕಲ್ಲ:ಕಲ್ಲು ಮಣ್ಣಿಗೆ ಹಾಲು ಹಾಕಿ ವ್ಯರ್ಥ ಮಾಡಬಾರದು ಎಂದು ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಎಸ್.ಆರ್.ಕಂಠಿ ವೇದಿಕೆ ಕುಲಕರ್ಣಿ ಪೇಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1 ರಲ್ಲಿ ಆಯೋಜಿಸಿದ್ದ ಹಾಲು ಕುಡಿಯುವ ಹಬ್ಬದ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿ ಆಹಾರ ದೇವರ ಸ್ವರೂಪ, ಆಹಾರದಿಂದ ಮನುಷ್ಯನಿಗೆ ಚೈತನ್ಯದೊರಕುವದು, ಇಂತಹ ಅಮೂಲ್ಯವಾದ ಜೀವಸತ್ವ ಆಹಾರವನ್ನು ಮೌಢ್ಯ ಆಚರಣೆಗಳ ಮೂಲಕ ಹಾಳು
ಮಾಡಬಾರದು ಆಹಾರವನ್ನು ಹಾಳು ಮಾಡುವದರಿಂದ ಪಾಪ ಅಂಟಿಕೊಳ್ಳುವದು ಆಹಾರವನ್ನು ಗೌರವಿಸುವವರಿಗೆ ಬಡತನ ಬರುವದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿದ ಪಂಚ ಯೋಜನೆಗಳ ಅನುಷ್ಠಾನ ಸಮಿತಿಯ ಇಲಕಲ್ಲ ತಾಲೂಕ ಅಧ್ಯಕ್ಷ ಮಹಾಂತೇಶ ಹನಮನಾಳ, ಇಲಕಲ್ಲ ತಾಲೂಕ ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಹೊಸೂರ, ಇಲಕಲ್ಲ ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎಮ್.ಮಾಸರೆಡ್ಡಿ ಮಾತನಾಡಿದರು.

ಹಾಲು ಕುಡಿಯುವ ಹಬ್ಬದ ಅಂಗವಾಗಿ ಏರ್ಪಡಿಸಿದ ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಗುರುಮಾತೆ ಎ.ಎಸ್. ಕುರಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ‌ ಕಂಠಿ ವೇದಿಕೆಯ ಅಧ್ಯಕ್ಷೆ ಮಹಾದೇವಿ ತೊಂತನಾಳ, ಕರ್ನಾಟಕ‌ ರಕ್ಷಣಾ ವೇದಿಕೆಯ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ,ಕಂಠಿ ವೇದಿಕೆಯ ಹಿರಿಯ ಸದಸ್ಯೆ ಶೈಲಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಶಾಲೆಯ ಶಿಕ್ಷಕಿಯರಾದ ಸುಜಾತಾ ವನಕಿ,ಸುವರ್ಣಾ ಓತಗೇರಿ,ಲಲಿತಾ ಬಿಜ್ಜಲ,ಎಮ್ ಆರುಂಧತಿ ಕಂಠಿ ವೇದಿಕೆಯ ಅಮರೇಶ ಐಹೊಳ್ಳಿ,ಶಿವಬಸಪ್ಪ ತೊಂತನಾಳ,
ಬಸವರಾಜ ಚಳಗೇರಿ,ಬಸವರಾಜ ಅಂಗಡಿ ಐಟಿಐ,ಅಡಿವೆಪ್ಪ ಅಂಗಡಿ,ಭೀಮಣ್ಣ ಕೊಳ್ಳಿ,ವೀರಣ್ಣ ನಂದಾಪೂರ,ಮಹಾಂತೇಶ ಕಕ್ಕಸಗೇರಿ,ವೀರಣ್ಣ ಅಂಗಡಿ,ಕಳಕಪ್ಪ ಅಂಗಡಿ, ಅಮರೇಶ ಕಕ್ಕಸಗೇರಿ,ಸಿದ್ದು ಅಂಗಡಿ,ಮಹಾಂತೇಶ ಬಂಡಿ,ಸಂಗಮೇಶ ಬೆಲ್ಲದ,ಶೋಭಾ ಲವಳಸರ,ಕಮಲಾಕ್ಷಿ ಅಂಗಡಿ,ಜಯಶ್ರೀ ನೀರಲಕೇರಿ,ಶಿಲ್ಪಾ ಅಂಗಡಿ,ಜ್ಯೋತಿ ಮೈದರಗಿ,ನೇತ್ರಾವತಿ ಮರೋಳ ಮತ್ತಿತರರು ಭಾಗವಹಿಸಿದ್ದರು.

ವಿದ್ಯಾರ್ಥಿನಿಯರಾದ ದೀಕ್ಷಾ
ಗೋಟೂರ, ತ್ರಿವೇಣಿ ಗಟ್ಟಿಗುಂಡ, ಶ್ರೇಯಾ ಕಾಂಬಳೆ, ಸಮೀರನ್ ಆನೆಹೊಸೂರ ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷೀ ಲೆಕ್ಕಿಹಾಳ ಸ್ವಾಗತಿಸಿದರು.ಸಾವಿತ್ರಿ ಬೆಲ್ಲದ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಮ್. ಎಸ್. ತಳವಾರ ನಿರೂಪಿಸಿದರು. ನೀಲಾಂಬಿಕಾ ಬಾದಿಮನಾಳ ವಂದಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!