ಬಳ್ಳಾರಿ / ಕಂಪ್ಲಿ : ಕಳೆದ ಗುರುವಾರ ಮಧ್ಯಾಹ್ನದಿಂದ ತುಂಗಭದ್ರ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡ ಹಿನ್ನಲೆ ಇಲ್ಲಿನ ಕಂಪ್ಲಿ-ಕೋಟೆಯ ಸೇತುವೆ ಮೇಲೆ ಶುಕ್ರವಾರ ಬೆಳಿಗ್ಗೆಯಿಂದ ಪಾದಚಾರಿ ಮತ್ತು ಲಘು ವಾಹನ ಸಂಚಾರಕ್ಕೆ ಅವಕಾಶ ಸಿಕ್ಕಿದೆ.
ಹೌದು. ಇಲ್ಲಿನ ಕಂಪ್ಲಿ-ಗಂಗಾವತಿ ಸಂಸ್ಕಾರ ಕೊಂಡಿಯಾಗಿರುವ ತುಂಗಭದ್ರ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಅಧಿಕ ಪ್ರಮಾಣದ ನದಿ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿ, ಸಂಪರ್ಣವಾಗಿ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ನದಿ ಪ್ರವಾಹ ತಗ್ಗಿದ ಪರಿಣಾಮ ಒಂದು ದಿನದ ನಂತರ ಸೇತುವೆ ಮೇಲೆ ಜಮಾಯಿಸಿದ ಕಸ, ಕಡ್ಡಿಯನ್ನು ಸ್ವಚ್ಚಗೊಳಿಸಿ, ಗಂಗಾವತಿ ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ, ಜೆಇ ಇವರು ಸ್ಥಳಕ್ಕೆ ಭೇಟಿ ನೀಡಿ, ಸೇತುವೆ ಪರಿಶೀಲಿಸಿ, ತದನಂತರ ಪಾದಚಾರಿ ಮತ್ತು ಲಘು ವಾಹನಗಳ ಸಂಚಾರಕ್ಕೆ ಆದೇಶಿಸಿ, ಅನುಮತಿ ನೀಡಿದೆ.
ಕಳೆದ ನಾಲ್ಕು ದಿನ ಸತತವಾಗಿ ನದಿಯಲ್ಲಿ ಲಕ್ಷಾಂತರ ಕ್ಯೂಸೆಕ್ ನೀರು ಹರಿದು, ಇಲ್ಲಿನ ಸೇತುವೆ ಮುಳುಗಡೆಯಾಗಿತ್ತು. ಇದರಿಂದ ಎರಡು ತಾಲೂಕಿನ ಜನರು ದಿನನಿತ್ಯದ ಸಂರ್ಕಕ್ಕಾಗಿ ದೂರದ 35 ಕಿ.ಮೀ. ಕ್ರಮಿಸಿ ಕೆಲಸಗಳಿಗೆ ಹರಸಾಹಸದೊಂದಿಗೆ ತೆರಳುತ್ತಿದ್ದರು. ನದಿಯಲ್ಲಿ ಇಳಿಕೆ ಕಂಡ ದಿನದಿಂದಲೂ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಾರೆಂದು ಜನರು ಸೇತುವೆಯತ್ತ ಮುಖ ಮಾಡಿದ್ದರು. ಆದರೆ, ಸೇತುವೆ ಮೇಲಿನ ಸ್ವಚ್ಚತೆ ಹಾಗೂ ಪರಿಶೀಲನೆ ಹಿನ್ನಲೆ ಒಂದು ದಿನದ ಮಟ್ಟಿಗೆ ಜನರು ಕಾಯುವಂತಾಯಿತು. ಈಗ ಸೇತುವೆ ಮೇಲೆ ರ್ಕಾರಿ ಬಸ್ ಹಾಗೂ ಭಾರೀ ಗಾತ್ರದ ವಾಹನಗಳ ಸಂಚಾರ ಹೊರತುಪಡಿಸಿ, ಉಳಿದ ಲಘು ವಾಹನ ಮತ್ತು ಪಾದಚಾರಿಗಳು ಸಂಚರಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಪಾದಚಾರಿಗಳು, ಲಘು ವಾಹನ ಸವಾರರು ನಿಟ್ಟಿಸಿರುವ ಬಿಟ್ಟಿದ್ದು, ಮತ್ತೆ ಸೇತುವೆ ಮೇಲೆ ನೀರು ಬರುವಷ್ಟು ನದಿ ಪ್ರವಾಹ ಬರಬಾರದು ಎಂಬುದನ್ನು ಜನರು ಬೇಡಿಕೊಳ್ಳುವಂತಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















