ಬಾಗಲಕೋಟೆ ಜಿಲ್ಲೆಯ ಇಲಕಲ್ಲ ನಗರಕ್ಕೆ ನೂತನ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ ಪಾಟೀಲ ಇವರನ್ನು ಕರ್ನಾಟಕ ರಕ್ಷಣಾ (ಶಿವರಾಮೇಗೌಡ ಬಣ) ವೇದಿಕೆಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಮಾರ್ಗದರ್ಶಕರಾದ ಬಸವರಾಜ ನಾಲವಾಡದ ವಕೀಲರು, ಇಲಕಲ್ಲ ತಾಲೂಕ ಮಹಿಳಾ ಘಟಕದ ಗೌರವಾಧ್ಯಕ್ಷೆ ಕಸ್ತೂರಿಬಾಯಿ ಮೇರವಾಡೆ, ಇಲಕಲ್ಲ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಂಗಡಿ, ಇಲಕಲ್ಲ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಪದಾಧಿಕಾರಿಗಳಾದ ಶಭಾನಾ ಲಿಂಗಸೂರ, ಸುವರ್ಣಾ ಕಂಬಾರ, ಸದಸ್ಯರಾದ ಪ್ರಕಾಶ ಚವ್ಹಾಣ, ಅಶೋಕ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ



















