ವಿಜಯಪುರ/ ಮುದ್ದೇಬಿಹಾಳ: ಶ್ರೀ ಅಮರೇಶ್ವರ ಪಬ್ಲಿಕ್ ಶಾಲೆ ಜ್ಞಾನ ಸಮೃದ್ಧಿ ಗುರುಕುಲ ಕಲಿಯುವ ಮನೆ ನಾಲತವಾಡದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಕ್ಕಳಿಂದ ಚಿತ್ರಕಲೆ ಸ್ಪರ್ಧೆ ವೇದಿಕೆ ಟ್ರಿಕ್ಸ್ ಪ್ರದರ್ಶನ ಕಲಿತ ಕಲಿಕಾಂಶಗಳ ಪ್ರದರ್ಶನ ವೇದಿಕ್ ಟ್ರಿಕ್ಸ್ ಮೂಲಕ ಗಣಿತ ಕಲಿಕೆಯ ಪ್ರದರ್ಶನ ಮಕ್ಕಳಿಂದ ಸಾಕ್ಷರ ಗೀತೆಗಳು ನಾಟಕ ಪ್ರದರ್ಶನ ಪವಾಡ ರಹಸ್ಯ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಮಾತಾಜಿರವರಾದ ಶ್ರೀಮತಿ ಭಾಗ್ಯಶ್ರೀ ಸಂಗಮೇಶ ನವಲಿ ರವರು ಮಾತನಾಡುತ್ತಾ ನಮ್ಮ ಭಾರತೀಯ ವಿಜ್ಞಾನಿಗಳು ಮಾಡಿದ ಸಾಧನೆ ಅತಿ ಶ್ರೇಷ್ಠವಾದದ್ದು ಇಲ್ಲಿಯವರೆಗೂ ಯಾವ ದೇಶವು ಮಾಡಲಾರದ ಸಾಧನೆಯನ್ನು ನಮ್ಮ ದೇಶದ ವಿಜ್ಞಾನಿಗಳು ಮಾಡಿದ್ದಾರೆ ಅದೇನೆಂದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯನ್ನು 23 ಅಗಸ್ಟ್ 2023 ರಂದು ಮಾಡಿದೆ ಅದರ ಸವಿನೆನ್ಪಿಗಾಗಿ ಪ್ರತಿ ವರ್ಷ 23ನೇ ಆಗಸ್ಟನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸುತ್ತಿರುವುದಕ್ಕಾಗಿ ಹೇಳಿದರು. ಅದೇ ರೀತಿ ಮಕ್ಕಳು ಸಹ ನಮ್ಮ ಶಾಲೆಯ ಹಾಗೂ ದೇಶದ ಕೀರ್ತಿಯನ್ನು ತರುವ ನಿಟ್ಟಿನಲ್ಲಿ ಈ ಬಾಹ್ಯಾಕಾಶ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.ಮಕ್ಕಳಿಗೆ ಹಾಡು ಕಥೆ ಕವನ ಆಟದ ಮೂಲಕ ಪಾಠ ನಾಟಕ ಅಭಿನಯ ಸಂಗೀತ ನುಡಿಸುವುದು ನವೋದಯ ಮೊರಾರ್ಜಿ ಆರ್ ಎಂ ಎಸ್ ಎ ಸೈನಿಕ ಅಲ್ಪಸಂಖ್ಯಾತರು ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಗಳ ಪ್ರವೇಶಗಳಿಗೆ ತರಬೇತಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಕಾಳಜಿ ಅಕ್ಷರ ದುಂಡಾಗಿ ಬರೆಯುವುದು ಒಂದೇ ಎರಡೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದೇವೆ. ಧಾರವಾಡ ಹಾಗೂ ಬೆಂಗಳೂರು ಶೈಲಿಯ ಶಿಕ್ಷಣವನ್ನು ಇಲ್ಲಿ ಕೊಡ ಮಾಡಿರುವ ಸಂಸ್ಥೆಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳರವರಿಗೆ ಧನ್ಯವಾದಗಳು ಇಲ್ಲಿರುವಂತಹ ಶಿಕ್ಷಕರು ಹಣಕ್ಕಾಗಿ ಅಲ್ಲ ಹೆಸರಿಗಾಗಿ ದುಡಿಯುತ್ತಿದ್ದಾರೆ ಇಂತಹ ಶಿಕ್ಷಕರ ಸೇವೆ ನಮ್ಮ ನಾಲತವಾಡದ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಸಿಕ್ಕಿರುವುದು ಸೌಭಾಗ್ಯ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಲಕ್ಷ್ಮೀ ಶಿವಮೂರ್ತೆಪ್ಪ ಸಂಕೇಶ್ವರ ರೇಖಾ ಹೂಗಾರ ಶಾಂತಾ ಅಬ್ಜಲ್ಪುರ ರತ್ನಾ ಅಮರೇಶ ತಾಳಿಕೋಟಿ ಜ್ಯೋತಿ ಬಸನಗೌಡರ ಸಹಾಯಕಿಯರಾದ ಗುರುದೇವಿ ಬಿರಾದಾರ ಉಪಸ್ಥಿತರಿದ್ದರು.
- ಕರುನಾಡ ಕಂದ



















