ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಲಿಂ. ಡಾ. ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳ ಗದ್ದುಗೆ ಮತ್ತು ಮಂಟಪ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಬಾಗಲಕೋಟೆ: ಜಮಖಂಡಿಯ ಓಲೆಮಠದ ಲಿಂ. ಡಾ. ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳ ಗದ್ದುಗೆ ಮತ್ತು ಮಂಟಪ ನಿರ್ಮಾಣ ಕಾಮಗಾರಿಗೆ ಶಾಸಕ ಜಗದೀಶ ಗುಡಗುಂಟಿ ಭೂಮಿಪೂಜೆ ನೆರವೇರಿಸಿದರು. ಆನಂದ ದೇವರು ಇದ್ದರು.

ಓಲೆಮಠದ ಆವರಣದಲ್ಲಿ ಅಂದಾಜು ರೂ.೧೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗದ್ದುಗೆ ಮತ್ತು ಮಂಟಪ ನಿರ್ಮಾಣಕ್ಕೆ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಭೂಮಿಪೂಜೆ ನೆರವೇರಿಸಿದರು.
ಲಿಂ.ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಐದು ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದರು. ಕನ್ನಡ ಸಾರಸ್ವತ ಲೋಕಕ್ಕೆ ೮೭ ಕೃತಿಗಳನ್ನು ನೀಡಿದ್ದರು. ೨೦೨೪ರ ನವೆಂಬರ್ ೭ ರಂದು ಲಿಂಗ್ಯಕ್ಯರಾಗಿದ್ದರು.
ಲಿAಗೈಕ್ಯ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ವೇಳೆಗೆ ಗದ್ದುಗೆ ಮತ್ತು ಮಂಟಪದ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಓಲೆಮಠದ ಆನಂದ ದೇವರು ಶ್ರೀಗಳು ಮಾಹಿತಿ ನೀಡಿದರು.
ಮುಧೋಳ ತಾಲ್ಲೂಕಿನ ಶಿರೋಳ ಗ್ರಾಮದ ಉದ್ದಿಮೆದಾರ ರಾಜು ಗಸ್ತಿ ಗದ್ದುಗೆ ಮತ್ತು ಮಂಟಪ ನಿರ್ಮಾಣದ ಖರ್ಚು-ವೆಚ್ಚ ಭರಿಸುವ ಭಕ್ತಿಸೇವೆ ಸಲ್ಲಿಸುವ ವಾಗ್ದಾನ ಮಾಡಿದ್ದಾರೆ.
ರಾಯಲ್ ಪ್ಯಾಲೇಸ್ ಸ್ಕೂಲ್‌ನ ಆಡಳಿತಾಧಿಕಾರಿ ಬಸವರಾಜ ನ್ಯಾಮಗೌಡ, ಕಾಡಪ್ಪ ದೇಸಾಯಿ, ಮಲ್ಲಿಕಾರ್ಜುನ ಲಿಂಗನೂರ, ವಕೀಲ ರವಿ ಯಡಹಳ್ಳಿ, ಚನಬಸು ತೆಲಬಕ್ಕನವರ, ಮಲ್ಲಯ್ಯ ಮಠಪತಿ, ಶಿವಯ್ಯ ನಾಗರಾಳಮಠ, ಎಸ್.ವೈ. ಪಾಟೀಲ ಸದಾನಂದ ಬಾಗೇವಾಡಿ, ಎಸ್.ಎಚ್. ಮಠಪತಿ, ಕಾಡು ಮಾಳಿ, ರಾಜೇಶ್ವರಿ ಹಿರೇಮಠ, ಕಸ್ತೂರಿ ಜೈನಾಪುರ, ವಕೀಲ ಸಿ.ಎಸ್. ಬಾಂಗಿ, ಸಿದ್ರಾಮ ಗೊರನಾಳ, ಎ.ಆರ್. ಶಿಂಧೆ, ಸಿದ್ದಯ್ಯ ಕಲ್ಕತ್ತಿಮಠ, ಬಸವರಾಜ ಬಳಗಾರ, ಪ್ರೇಮ ಬಳೂಲಗಿಡದ, ಶಿವಾನಂದ ಕೊಣ್ಣೂರ, ಡಾ.ಟಿ.ಪಿ. ಗಿರಡ್ಡಿ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ಪ್ರದೀಪ ಮಹಾಲಿಂಗಪುರಮಠ, ಮಲ್ಲು ದಾನಗೌಡ, ರಾಚಯ್ಯ ಮಠಪತಿ, ಅಜಯ ಕಡಪಟ್ಟಿ ಮತ್ತಿತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!