ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅತ್ಯಂತ ವೈಭವದಿಂದ ಸಂಪನ್ನಗೊಂಡ ಶ್ರೀ ಸತ್ಯನಾರಾಯಣ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ

ಯಾದಗಿರಿ/ ಗುರುಮಠಕಲ್: ಪಟ್ಟಣದ ಉಪ್ಪರಗಡ್ಡ ಬಡಾವಣೆಯ ಸುಮಾರು ನೂರಕ್ಕಿಂತ ಹೆಚ್ಚು ಇತಿಹಾಸ ಉಳ್ಳ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಜಾತ್ರೆ ಇಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.

ನಿನ್ನೆ ರಾತ್ರಿಯಿಡೀ ದೇವಸ್ಥಾನದಲ್ಲಿ ಭಜನೆ ಜರುಗಿತು. ಇಂದು ಬೆಳಿಗ್ಗೆಯಿಂದಲೇ ಪೂಜಾ ಅಭಿಷೇಕ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕಿ ಸೇವಾ ಜರುಗಿತು.

ಜಾತ್ರೆಗೆ ತೆಲಂಗಾಣ ಮತ್ತು ಗುರುಮಠಕಲ್ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡರು, ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಜಾತ್ರೆಯ ವಿಶೇಷ ಆಕರ್ಷಣೆ ಕೈಕೈ ಕುಸ್ತಿ ಪಂದ್ಯ, ಗ್ರಾಮೀಣ ಭಾಗದ ರೈತರ ನೆಚ್ಚಿನ ಆಟ, ಕೈ ಕುಸ್ತಿ ಕ್ರಾರ್ಯಕ್ರಮ ಮುಂಜಾನೆಯಿಂದ ಸಾಯಂಕಾಲವರೆಗೆ ಜರುಗಿತು, ಪಂದ್ಯದಲ್ಲಿ ಗೆದ್ದವರಿಗೆ ಪ್ರ-ಪ್ರಥಮ ಕೈ ಕುಸ್ತಿಯಲ್ಲಿ ಕೈ ಕುಸ್ತಿಯಲ್ಲಿ 3 ಜನರನ್ನು ಸೋಲಿಸಿದವರಿಗೆ 5 ತೊಲಿಯ ಬೆಳ್ಳಿಯ ಕಡಗ, ನಂತರ ಎರಡನೇ ಬಾರಿ 3 ಜನರನ್ನು ಸೋಲಿಸಿದವರಿಗೆ ಟೆಂಗಿನ ಕಾಯಿ, 1/2 (ಅರ್ಧ) ತೊಲಿಯ ಬೆಳ್ಳಿಯ ಉಂಗುರ, ಹಾಗೂ 4 ಜನರನ್ನು ಸೋಲಿಸಿದವರಿಗೆ 5 ತೊಲಿ ಬೆಳ್ಳಿಯ ಕಡಗ ಬಹುಮಾನ ಕೊಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯವರು ತಿಳಿಸಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!