ಮುಂಡಗೋಡ : 2020 ರಲ್ಲಿ ಮುಂಡಗೋಡ ತಾಲೂಕಿನ ಲಕ್ಕೊಳ್ಳಿಯಲ್ಲಿ ಸಿನಿಮೀಯ ಶೈಲಿಯಲ್ಲಿ ನಡೆದ ಇಂದಿರಾನಗರದ ಮೆಹಬೂಬಅಲಿ ಜಮಖಂಡಿ ಮರ್ಡರ್ ಕೇಸ್ ನ ಆರೋಪಿಗಳಿಗೆ ಶಿಕ್ಷೆ ಪ್ರಕಟ ವಾಗಿದೆ.
ಏನಿದು ಪ್ರಕರಣ : ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಗ್ರಾಮದ ಇಬ್ರಾಹಿಂಸಾಬ್ ಮಹಮದ್ ಸಾಬ್ ಶಿಗ್ಗಾವಿ ಈತನು ಮೃತ ಮೆಹಬೂಬಲಿ ಜಮಖಂಡಿ ಬಳಿ ಬಿಸಿ ಚೀಟಿಯನ್ನು 50,000 ಕ್ಕೆ ತೆಗೆದುಕೊಂಡಿರುತ್ತಾನೆ. ಸರಿಯಾಗಿ ಹಣ ಕಟ್ಟದೆ ಹಣಕಾಸಿನ ಸಮಸ್ಯೆಯಾಗಿ ಹಣ ಮರುಪಾವತಿ ಮಾಡುವುದನ್ನು ಬಿಟ್ಟಿರುತ್ತಾನೆ. ಹಣ ನೀಡದ್ದಕ್ಕೆ ಆಕ್ರೋಶಗೊಂಡ ಮೆಹಬೂಬಲಿ ಜಮಖಂಡಿ ಆರೋಪಿ ಇಬ್ರಾಹಿಂ ಸಾಬ್ ಪತ್ನಿಯ ಮೊಬೈಲ್ ನಂಬರ್ ಪಡೆದು ಆಕೆಯೊಂದಿಗೆ ಸಲಿಗೆ ಬೆಳೆಸಿರುತ್ತಾನೆ. ಇದರಿಂದ ದಂಪತಿಗಳ ಮಧ್ಯೆ ಕಲಹ ಉಂಟಾಗಿರುತ್ತದೆ. ಮೆಹಬೂಬಲಿ ಜಮಖಂಡಿ ಹಾಗೂ ಆರೋಪಿ ಪತ್ನಿ ನಾಜಿಯ ಇಬ್ಬರು ಮನೆಯಲ್ಲಿದ್ದನ್ನ ಗಮನಿಸಿದ್ದ ಆರೋಪಿ ಇಬ್ರಾಹಿಂ ಸಾಬ್ ನಿಮ್ಮ ವರ್ತನೆಯಿಂದ ಊರಿನಲ್ಲಿ ನನ್ನ ಮಾನ ಮರ್ಯಾದೆ ಹಾಳಾಗುತ್ತಿದೆ ಎಂದು ಪತ್ನಿ ಜೊತೆ ಜಗಳ ಮಾಡಿಕೊಂಡಿರುತ್ತಾನೆ. ಬಳಿಕ ಹೇಗಾದರೂ ಮಾಡಿ ಮೆಹಬೂಬಲಿ ಜಮಖಂಡಿಯನ್ನು ಕೊಲೆ ಮಾಡಬೇಕು ಎಂಬ ಉದ್ದೇಶದಿಂದ ತನ್ನ ಪತ್ನಿ ನಾಜಿಯಾ ಹಾಗೂ
ಇನ್ನೋರ್ವ ಆರೋಪಿ ಶರೀಫ್ ಮೊಹಮ್ಮದ್ ಸಾಬ್ ಶಿಗ್ಗಾವಿ ಜೊತೆ ಸೇರಿ ಸಂಚು ಮಾಡುತ್ತಾನೆ. ತನ್ನ ಪತ್ನಿಯಿಂದ ಕರೆ ಮಾಡಿಸಿ ಮೆಹಬೂಬ್ ಅಲಿಯನ್ನು ಮನೆಗೆ ಬರುವಂತೆ ಪುಸಲಾಯಿಸುತ್ತಾನೆ. ಮನೆಗೆ ಬಂದ ಮೆಹಬೂಬಲಿ ತಲೆಗೆ ಹಾಗೂ ಹಣೆಗೆ ಸುತ್ತಿಗೆ ಯಿಂದ ಹೊಡೆದು ಹಾಕುತ್ತಾರೆ, ತೀವ್ರ ರಕ್ತಸ್ರಾವಗೊಂಡ ಮೆಹಬೂಬ್ ಅಲಿ ಜಮಖಂಡಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಳಿಕ ಸಾಕ್ಷ್ಯ ನಾಶ ಮಾಡಿ ಕೊಲೆಯನ್ನು ಸಿನಿಮೀಯ ರೀತಿಯಲ್ಲಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಪಟ್ಟು ಹನುಮಾಪುರ ಹಾಗೂ ಲಕ್ಕೊಳ್ಳಿ ಬಳಿಯ ಇರುವ ಬ್ರಿಡ್ಜ್ ಬಳಿಯ ಹಳ್ಳದಲ್ಲಿ ಮೋಟಾರ್ ಸೈಕಲ್ ದೂಡಿ ಬ್ರಿಡ್ಜ್ ಮೇಲಿನಿಂದ ಮೃತದೇಹವನ್ನು ಎಸೆದು ಮರಳಿ ಮನೆಗೆ ತೆರಳಿರುತ್ತಾರೆ. ಪ್ರಕರಣದ ಕುರಿತಾಗಿ ಎಫ್ಐಆರ್ ದಾಖಲಿಸಿಕೊಂಡಿದ್ದ ಮುಂಡಗೋಡ ಪೊಲೀಸರು ವಿಸ್ಕೃತ ತನಿಖೆ ನಡೆಸಿ , ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ.
ಪರ ಹಾಗೂ ವಿರುದ್ಧ ವಾದಗಳನ್ನು, ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿದ 1 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ.ಶಿರಸಿ ಪೀಠದ ನ್ಯಾಯಾಧೀಶರಾದ ಕಿರಣ್ ಕಿಣಿ ರವರು ಶಿಕ್ಷೆ ಕುರಿತು ಆದೇಶ ನೀಡಿದ್ದು ಆರೋಪಿತರ ಪೈಕಿ ಏ1 ಇಬ್ರಾಹಿಂ ಸಾಬ್ ಮಹಮದ್ ಸಾಬ್ ಶಿಗ್ಗಾವಿ ಈತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ದಂಡ ಏ2 ಆರೋಪಿ ಶರೀಫ್ ಮಹಮದ್ ಸಾಬ್ ಶಿಗ್ಗಾವಿ ಹಾಗೂ ಏ3 ಆರೋಪಿ ನಾಜಿಯಾ ಗೆ 3 ವರ್ಷಗಳ ಸಾಧಾರಣ ಶಿಕ್ಷೆ ಹಾಗೂ ಹಾಗೂ 3000 ಸಾವಿರ ದಂಡ ಮತ್ತು ಮೊದಲ ಆರೋಪಿ ಯು ಮೃತ ವ್ಯಕ್ತಿ ಮೆಹಬೂಬ್ ಅಲಿ ಜಮಖಂಡಿ ಯ ಪತ್ನಿ ಬಿಬಿ ಆಯಿಷಾಳಿಗೆ 25,000 ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು ಮತ್ತು ಬಿಬಿ ಆಯಿಷಾ ಇವರು ಜಿಲ್ಲಾ ಉಚಿತ ಕಾನೂನು ಸೇವಾ ಪ್ರಾಧಿಕಾರ ದಿಂದ ಪರಿಹಾರ ಪಡೆಯಬಹುದು ಎಂದು ತೀರ್ಪು ನೀಡಿದ್ದಾರೆ
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ಇವರು ಸಾಕ್ಷಿ ಹಾಗೂ ಪ್ರಕರಣದ ವಿದ್ಯಮಾನದ ಕುರಿತು ಸಮರ್ಥ ವಾದ ಮಂಡಿಸಿದ್ದರು ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕರಿಬಸಪ್ಪ ಇಂಗಳುಸೂರು ಅವರು ಸಾಕ್ಷಿಧಾರರನ್ನು ಸರಿಯಾದ ಕಾಲಕ್ಕೆ ಹಾಜರುಪಡಿಸಿ ಆರೋಪಿಗಳಿಗೆ ಶಿಕ್ಷೆ ಆಗಲು ಸಹಕರಿಸಿದ್ದಾರೆ.
- ಕರುನಾಡ ಕಂದ



















