ಬೆಂಗಳೂರಿನ : ರಾಜಧಾನಿ ನಗರದ ಶಿಕ್ಷಕರ ಸದನದಲ್ಲಿ ಜನ ಸಿರಿ ಫೌಂಡೇಶನ್ ವತಿಯಿಂದ ಜನ ಸಿರಿ ಸಾಹಿತ್ಯ ಸಮ್ಮೇಳನ ಹಾಗೂ 2025 ಅತ್ಯುತ್ತಮ ಶಿಕ್ಷಕರು ಪ್ರಶಸ್ತಿ ಪುರಸ್ಕೃತ ಸಮಾರಂಭದಲ್ಲಿ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ನಿರೂಪಕ ಸಂಪನ್ಮೂಲ ವ್ಯಕ್ತಿ ಎಸ್. ರಾಮಪ್ಪ ಅವರ ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ 2025 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಸೋಮಶೇಖರ ಜನಶ್ರೀ ಫೌಂಡೇಶನ್ ಅಧ್ಯಕ್ಷ ನಾಗಲೇಖ ಸೇರಿದಂತೆ ಸಾಹಿತಿಗಳು ಜನಪ್ರತಿನಿಧಿಗಳು ಕಲಾವಿದರು ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















