ಬೆಂಗಳೂರು: ಕರ್ನಾಟಕ ವಾಣಿಜ್ಯ ಉದ್ಯಮಿಗಳ ಮಹಾಸಂಘ ನಿನ್ನೆ ಎಫ್ ಕೆ ಸಿ ಸಿಯಲ್ಲಿರುವ ಸರ್ ಎಂ ವಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾ ಸತ್ಸಂಗ ಕಾರ್ಯಕ್ರಮವನ್ನು ಅಧ್ಯಕ್ಷ ಶ್ರೀ ಎಸ್ ಬಿ ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಉಮಾ ಮಹಾದೇವನ್ ಅವರು ಉದ್ಘಾಟಿಸಿದರು.
ಶ್ರೀ ಆದಿಚುಂಚನಗುರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷರ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸ್ವರಗಳಿಂದ ಮೇಳೈಸಿದ ಭಕ್ತಿ ಗೀತೆಗಳ ಸುಶ್ರಾವ್ಯ ನೆರೆದಿದ್ದ ಆಸ್ತಿಕರ ಮೈ ಮನಗಳಲ್ಲಿ ಭಕ್ತಿ ಸುಧೆಯನ್ನು ಎಳೆ ಎಳೆಯಾಗಿ ಬಡಿದೆಬ್ಬಿಸಿ ಭಕ್ತಿಭಾವಗಳ ಉತ್ತುಂಗತೆಯನ್ನು ಮೆರೆಯಿತು.
ಇದೇ ಸಂದರ್ಭದಲ್ಲಿ ಶ್ರೀ ನಿರ್ಮಲಾನಂದ, ಶ್ರೀ ಧರ್ಮೇಂದ್ರ ಅವರ ಅಮೃತ ಹಸ್ತದಿಂದ ಸ್ಕಿಲ್ ಡೆವಲಪ್ಮೆಂಟ್ ವಿಭಾಗವನ್ನು ಉದ್ಘಾಟಿಸಲಾಗಿದ್ದು ಮಹಿಳಾ ಉದ್ಯಮಿಗಳ ವಿಭಾಗದ ಅಧ್ಯಕ್ಷೆ ಡಾ. ಮಧುರಾಣಿ ಗೌಡ ಅವರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್



















