ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಯಾದಗಿರಿ/ ಗುರುಮಠಕಲ್: ಇಂದು ಜರುಗಿದ ಶ್ರೀ ವೀರಭದ್ರೇಶ್ವರನ ಜಯಂತೋತ್ಸವದಲ್ಲಿ ನೆರೆದಿದ್ದ ಭಕ್ತರು ಭಕ್ತಿಯ ಪರವಶದಲ್ಲಿ ತಮ್ಮನೇ ತಾವು ಮರೆತು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾದರು.

ಪಟ್ಟಣದ ನಾರಾಯಣಪೂರ ಬಡಾವಣೆಯಲ್ಲಿ ವೀರಭದ್ರೇಶ್ವರ ಅಗ್ಗಿ ಮಹೋತ್ಸವದ ಸಡಗರ, ಸಂಭ್ರಮದ ನಡುವೆ ನಮೋ ವೀರಭದ್ರ , ಮಾತಾ ಭದ್ರಕಾಳಿ ಎಂಬ ಜಯಘೋಷಣೆಯೊಂದಿಗೆ ಜರುಗಿತು.

ಭಕ್ತರ ಹರ್ಷೋದ್ಗಾರದ ನಡುವೆ ವೀರ ಪುರವಂತರು ಮತ್ತು ಭಕ್ತರು ಅಗ್ನಿ ಹಾಯುವಮೂಲಕ ವೀರಭದ್ರೇಶ್ವರನ ಕೃಪೆಗೆ ಪಾತ್ರರಾದರು.

ಬೆಳಿಗ್ಗೆ 7 ಗಂಟೆಗೆ ನಗರೇಶ್ವರದ ಬಾವಿಯಲ್ಲಿ ಗಂಗಸ್ಥಳಕ್ಕೆ ಹೋಗಿ ಪೂಜೆ ಮಾಡಿಕೊಂಡು, ಗಂಗೆಯನ್ನು ಹೊತ್ತು ತರಲಾಯಿತು ನಂತರ ದೇವರಿಗೆ ರುದ್ರಾಭಿಷೇಕ ಅನಂತರ ಪಲ್ಲಕಿಯಲ್ಲಿ ವೀರಭದ್ರೇಶ್ವರನ ಮೆರವಣಿಗೆ ಪುರವಂತರ ವೀರಗಾಸೆ ವೀರಭದ್ರನ ಜನನ ಮತ್ತು ದಕ್ಷಬಹ್ಮನನ್ನು ಸಂಹಾರ ಮಾಡಿದ ಸನ್ನಿವೇಶವನ್ನು ವಡಪುಗಳ ಮೂಲಕ ನೆರೆದ ಭಕ್ತ ಸಮೂಹಕ್ಕೆ ತಮ್ಮದೇ ಆದ ವೀರತೆಯ ಪ್ರತೀಕದಿಂದಯುದ್ಧ ಸನ್ನಿವೇಶಗಳಲ್ಲಿ ವೀರಭದ್ರನ ಆರ್ಭಟವನ್ನು ನಾಟ್ಯಗಳ ಮೂಲಕ ತೋರಿಸಿದರು. ಅನೇಕ ಶಸ್ತ್ರ ಪವಾಡಗಳು ಮನಸೂರೆಗೊಂಡವು. ನೆರೆದಂತ ಭಕ್ತರಿಗೆ ಪ್ರಸಾದ
ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಊರಿನ ಸದ್ಭಕ್ತರು ಹಾಗೂ ದೇವಸ್ಥಾನ ಸಮಿತಿಯ ಸರ್ವ ಸದಸ್ಯರೆಲ್ಲರೂ ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!