
ಕಲಬುರಗಿ ಜಿಲ್ಲೆಯ ಜೇವರ್ಗಿಯ ಶ್ರೀ ಮಹಾಲಕ್ಷ್ಮೀ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ, ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಬುಧವಾರದಂದು ಶ್ರೀ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಪ್ರತಿಷ್ಠಾಪನೆಗೂ ಮುನ್ನ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಸ್ವಚ್ಛಗೊಳಿಸಿ, ಅಲಂಕಾರಗೊಳಿಸಿದ ನಂತರ ಸಂಸ್ಥೆಯ ನಿರ್ದೇಶಕರಾದ ಸುಧೀಂದ್ರ ಜೀ ವಕೀಲ್ ಅವರು ಗಣೇಶನಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಕರ್ಪೂರ ಆರತಿ ಮಾಡಿ ಪ್ರತಿಷ್ಠಾಪನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ಸುಕತೆಯಿಂದ ಸಾಂಸ್ಕೃತಿಕ ಉಡುಗೆ ತೊಡೆಗೆ ತೊಟ್ಟು ಭಾಗವಹಿಸಿದ್ದರು.
ಗಣೇಶ ಪ್ರತಿಷ್ಠಾಪನೆಯ ಮೂರನೇ ದಿನವೂ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಶ್ರೀ ಮಹಾಲಕ್ಷ್ಮಿ ಕಂಪ್ಯೂಟರ್ ಕಿಯೋನಿಕ್ಸ್ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜಶೇಖರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವೀಂದ್ರ ಬೆಟಗೇರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಹನುಮಂತರಾಯ ಪಾಟೀಲ್, ಸುಧೀಂದ್ರ ಜೀ ವಕೀಲ್, ಉಪನ್ಯಾಸಕರಾದ ಸುರೇಶ್ ಕುಮಾರ್ ಹಿರೇಮಠ ಭಾಗವಹಿಸಿದ್ದರು. ಶ್ರೀ ಗಣೇಶ ಮೂರ್ತಿಯ ವಿಸರ್ಜನೆ ಯ ಐದನೇ ದಿನದ ಕಾರ್ಯಕ್ರಮದಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ಸಿಬ್ಬಂದಿ ಈಶ್ವರ್ ಮದರ್ಕಲ್ ರವರು ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಒಟ್ಟಾರೆಯಾಗಿ ಶ್ರೀ ಮಹಾಲಕ್ಷೀ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಗೌರಿ ಗಣೇಶ ಪ್ರತಿಷ್ಠಾಪನೆ, ಸಾಂಸ್ಕೃತಿಕ ಮನೋರಂಜನಾ ಮತ್ತು ವಿಸರ್ಜನೆ ಕಾರ್ಯಕ್ರಮವು ಬಹು ಅದ್ದೂರಿಯಿಂದ ಜರುಗಿತು. ಈ ಎಲ್ಲಾ ಕಾರ್ಯಕ್ರಮಗಳು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜಶೇಖರಯ್ಯ ಹಿರೇಮಠ್ ಅವರ ನೇತೃತ್ವ ಮತ್ತು ಮಾರ್ಗದರ್ಶನದೊಂದಿಗೆ ಅಚ್ಚು ಕಟ್ಟಾಗಿ ನೆರವೇರಿದವು.
ಸಂಸ್ಥೆಯ ಸಿಬ್ಬಂದಿಗಳಾದ ಭಾಗಣ್ಣ ಮಡಿವಾಳ್ಕರ್, ಭಾಗ್ಯ ಹಿರೇಮಠ, ಭಾಗ್ಯಶ್ರೀ ಕೊಂಬಿನ, ಪ್ರಿಯದರ್ಶಿನಿ ಬೆಣ್ಣೂರು, ಆಕಾಶ್ ಅಂಗಡಿ, ಆದರ್ಶ ಹೂಗಾರ್, ರಾಹುಲ್ ಮತ್ತಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಕರುನಾಡ ಕಂದ



















