ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಪಿಎಂಸಿಯಲ್ಲಿ ಕಾಯ್ದೆ ಉಲ್ಲಂಘನೆ; ತಡೆಯುವಂತೆ ನಾಗೇಶ್ ಗದ್ದಿಗಿ ಒತ್ತಾಯ

ಕಿರಾಣಿ ಗೋದಾಮು, ಜೂಜು ಅಡ್ಡೆಗಳಿಗಾಗಿ ಬಳಕೆ ಆಗುತ್ತಿವೆ ಕೃಷಿ ಮಾರುಕಟ್ಟೆ ಮಳಿಗೆಗಳು.

ಯಾದಗಿರಿ/ಗುರುಮಠಕಲ್ : ಪಟ್ಟಣದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿರುವ ಮಳಿಗೆಗಳನ್ನು ಕಿರಾಣಿ ಅಂಗಡಿಗಳ ಗೋದಮುಗಳಿಗೆ ಸಿಮೆಂಟ್ ಮತ್ತು ಇನ್ನಿತರ ಉದ್ದೇಶಗಳಿಗೆ ಮಳಿಗೆಗಳನ್ನು ನೀಡಿದ್ದು, ಇವುಗಳನ್ನು ತೆರವುಗೊಳಿಸಿ ಅರ್ಹ ದವಸ ಧಾನ್ಯ ಖರೀದಿದಾರರಿಗೆ ನೀಡಲು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಮಾನ್ಯ ತಹಶೀಲ್ದಾರರು ಗುರುಮಠಕಲ್ ರವರ ಮೂಲಕ ಮಾನ್ಯ ಸಹಾಯಕ ನಿರ್ದೇಶಕರು ಕೃಷಿ ಉತ್ಪನ್ನ ಮಾರುಕಟ್ಟೆ ಯಾದಗಿರಿ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಜಯಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಅಧ್ಯಕ್ಷರಾದ ನಾಗೇಶ್ ಗದ್ದಿಗಿ ರವರು ಮಾತನಾಡಿ, ಗುರುಮಠಕಲ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿರುವ ಮಳಿಗೆಗಳು ವ್ಯಾಪಾರದ ಉದ್ದೇಶಕ್ಕಾಗಿ ನೀಡಿದ್ದು, ಆದರೆ ಮಳಿಗೆ ಪಡೆದುಕೊಂಡ ವ್ಯಾಪಾರಸ್ಥರು ಇತರರಿಗೆ ಬಾಡಿಗೆ ನೀಡಿ ಅದರಿಂದ ಬರುವ ಕಮಿಷನ್ ಪಡೆದುಕೊಂಡು ಮಳಿಗೆಗಳನ್ನು ಕಿರಾಣಿ & ಸಿಮೆಂಟ್, ಇನ್ನಿತರೆ ಟ್ರೇಡರ್‌ಗಳಿಗೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ರೈತರಿಗೆ ಅನುಕೂಲವಾಗ ಬೇಕಾದ ವರ್ತಕರ ಟ್ರೇಡ್ ಅಂಗಡಿಗಳು ಕಿರಾಣಿ ಅಂಗಡಿಗಳ ಗೋದಮುಗಳಾಗಿ ಪರಿವರ್ತನೆ ಮಾಡಿಕೊಂಡಿರುವದು ಎಪಿಎಮ್ ಸಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ವ್ಯಾಪಾರಕ್ಕಾಗಿ ನೀಡಿದ ನಿವೇಶಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಾದ ಇಸ್ಟೆಟ್ ಜೂಜು ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ.

ಈ ಕೂಡಲೇ ಅಕ್ರಮವಾಗಿ ಎಪಿಎಮ್‌ಸಿ ಆವರಣದಲ್ಲಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವ ಮಳಿಗೆಗಳನ್ನು ತೆರವುಗೊಳಿಸಿ, ಕಾನೂನು ಬಾಹಿರವಾಗಿ ಗುರುಮಠಕಲ್ ಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ, ಅಂತಹ ಅಂಗಡಿ ಮಾಲೀಕರನ್ನು ಅನರ್ಹಗೊಳಿಸಿ ಅರ್ಹ ಎಪಿಎಮ್‌ಸಿ ವ್ಯಾಪರಸ್ಥರಿಗೆ ಅನುಕೂಲ ಮಾಡಿಕೊಡಬೇಕು. ಒಂದುವೇಳೆ ನಿರ್ಲಕ್ಷ ದೋರಣೆ ತೋರಿದಲ್ಲಿ ತಮ್ಮ ಕಛೇರಿಯ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಕಲವಾರ, ತಾ. ಪ್ರ ಕಾರ್ಯದರ್ಶಿ, ಗೋಪಾಲಕೃಷ್ಣ ಮೇಧಾ, ಕಾರ್ಯಾಧ್ಯಕ್ಷರಾದ ನರಸಿಂಹಲು ಗಂಗನೊಳ, ರೈತ ಮೋರ್ಚಾ ಅಧ್ಯಕ್ಷರಾದ ರಾಮುಲು ಕೊಡಗಂಟಿ, ಉದಯಕುಮಾರ ಕೊಂಕಲ್, ಜಗದೀಶ ಕೊಂಕಲ್, ವಿಜಯಕುಮಾರ್, ಬನ್ನು ಮಡುಗು, ಶ್ರೀಧರ್ ಕನ್ನಡಿಗ, ಆಯಾಝ್ ಅಲಿ, ಅನಿಲ್ ಕುಮಾರ, ರಾಮಚಂದ್ರ ಅನಪೂರ್, ಹಂಪೇಶ್ ಸೇರಿದಂತೆ ಇನ್ನೂ ಹಲವು ಮುಖಂಡರು ಸಂಘಟನೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!