ಅಂತರಂಗ ಶುದ್ಧಿಸಿ
ಬಹಿರಂಗ ಮುದ್ದಿಸಿ
ಬುದ್ಧಿಮಾತುಗಳ ಅನುಕರಿಸಿ
ಸಾಧನೆಯ ಸಿದ್ಧಿಸಿ.
ಒಳ ಹೊರಗಿನ ಮಾತೇಕೆ
ತಾಳಕೆ ಕುಣಿಯುವೆ ಏಕೆ
ಮನದಿಂಗಿತ ಅರಿ
ಗಮನದಿ ಸೇರಿ.
ಬಲ್ಲನೆಂಬ ಬೀಗೇಕೆ
ಗುಲ್ಲೆಬ್ಬಿಸುವರ ಕುಣಿಕೆ
ಮಲ್ಲನಂತೆ ದೃಷ್ಟಿ ಬೀರಿ
ಇಲ್ಲಸಲ್ಲದನು ಬೇರ್ಪಡಿಸಿ.
ಚಿತ್ತ ಕೊಟ್ಟು ನಡೆ
ಭಿತ್ತಿಯಾಗುವುದು ಸಾಧನೆ
ಮತ್ತೇರದಂತೆ ಇರಲಿ
ಹೊತ್ತು ಮುಳುಗುವ ಮುನ್ನ ಅರಿ.
- ರೇಷ್ಮಾ ಕಂದಕೂರ ,ಶಿಕ್ಷಕಿ ಸಿಂಧನೂರು.



















