
ಬಳ್ಳಾರಿ / ಕಂಪ್ಲಿ : ಪಟ್ಟಣದ 5ನೇ ವಾರ್ಡಿನ ಚಂದ್ರಕಲಾ ಚಿತ್ರಮಂದಿರ ಹಿಂಬದಿಯ ರಸ್ತೆ ಬಳಿಯಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಗಜಾನನ ಯುವ ಚೇತನ ಯುವಕರ ಮಂಡಳಿಯಿಂದ ಪ್ರತಿಷ್ಠಾಪಿಸಿದ್ದ ಕಂಪ್ಲಿ ಕಾ ಅಧಿಪತಿ ಪೂರಿ ಜಗನ್ನಾಥ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವ್ಯ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಇಲ್ಲಿನ ಪ್ರತಿಷ್ಠಾಪನೆಯ ಸ್ಥಳದಿಂದ ಆರಂಭಗೊಂಡ ವಿಸರ್ಜನಾ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಂಸ್ಕೃತಿಕ ಕಲಾ ತಂಡಗಳ ನಡುವೆ ಭವ್ಯ ಮೆರವಣಿಗೆಗೆ ಸಾಕ್ಷಿಯಾಯಿತು. ಮೆರವಣಿಗೆಯುದ್ದಕ್ಕೂ ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ನಿಂತು ಗಣೇಶನನ್ನು ವೀಕ್ಷಿಸಿದರು.
ಆಗಮಿಸಿದ ಇಲ್ಲಿನ ಮೆರವಣಿಗೆಯಲ್ಲಿ ಕೇರಳ ಹಾಗೂ ಕಾಸರಗೂಡಿನಿಂದ ಚಂಡೆವಾದ್ಯ ಮೇಳದ ಸದ್ದಿಗೆ ಜನರು ನಿಂತಲ್ಲೇ ಕುಣಿಯುವಂತಾಯಿತು. ಶಾಸಕ ಜೆ.ಎನ್.ಗಣೇಶ ಇವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ತದನಂತರ ಅಂಬೇಡ್ಕರ್ ವೃತ್ತ, ನಡುವಲ ಮ ಮೂಲಕ ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಣಪತಿಯನ್ನು ವಿಸರ್ಜಿಸಿ, ಮತ್ತೊಮ್ಮೆ ಹುಟ್ಟಿ ಬಾ ಎಂದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಗಜಾನನ ಯುವ ಚೇತನ ಯುವಕರ ಮಂಡಳಿಯವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















