ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳೆ ವಿಮೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಡ್ರೋಣ್ ಸಮೀಕ್ಷೆ ನಡೆಸಿ, ಸದ್ಯ ಮಧ್ಯಂತರ ಪರಿಹಾರ , ನೀಡಲು ರೈತರ ಆಗ್ರಹ

ಬಾಗಲಕೋಟೆ/ ಹುನಗುಂದ: ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಸಾವಿರಾರು ಹೆಕ್ಟರ ಪ್ರದೇಶದಲ್ಲಿನ ರೈತರ ಬೆಳೆಗಳು ಸಂಪೂಣ ಹಾನಿಯಾಗಿದ್ದು, ಸರ್ಕಾರ ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಮನ್ನಾ, ಬೆಳೆ ವಿಮೆಯನ್ನು ತಕ್ಷಣವೇ ಒದಗಿಸುವಂತೆ ಒತ್ತಾಯಿಸಿ ಶನಿವಾರ ಹುನಗುಂದದ ಗಚ್ಚಿನಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಪಟ್ಟಣದ ಗಚ್ಚಿನಮಠದಿಂದ ನೂರಾರು ರೈತ ಮುಖಂಡರ ಪ್ರತಿಭಟನೆ ರಾಲಿಯ ಮೂಲಕ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿಕೊಂಡ ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ, ಅತಿವೃಷ್ಟಿಯಿಂದ ಹಾಳಾಗಿರುವ ರೈತರ ಬೆಳೆಗಳಲ್ಲಿ ಕೇವಲ ತೊಗರಿ ಮತ್ತು ಹೆಸರುನ ಬೆಳೆಗಳನ್ನು ಮಾತ್ರ ಸಮೀಕ್ಷೆ ಮಾಡಲಾಗುತ್ತಿದ್ದು,ಉಳಿದ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ, ಸೇರಿದಂತೆ ಇತರ ಬೆಳೆಗಳು ಸಮೀಕ್ಷೆ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸರ್ಕಾರ ನಿರಂತರ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳ ಪೂರ್ಣ ಪ್ರಮಾಣದ ವೈಮಾನಿಕ ಸಮೀಕ್ಷೆಯನ್ನು ಮಾಡಿ, ಪ್ರತಿ ಎಕರೆಗೆ ಹಣವನ್ನು ನಿಗದಿಗೊಳಿಸಿ, ಯೋಗ್ಯ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು. ರೈತ ಮುಖಂಡ ಮಲ್ಲನಗೌಡ ತುಂಬದ, ಮಾತನಾಡಿ

18 ನಿರಂತರ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ರೈತರ ಬೆಳೆಗಳು ಹಾನಿಯಾಗಿದ್ದು, ತಕ್ಷಣವೇ ಸರ್ಕಾರ ಬೆಳೆ ಪರಿಹಾರ ಜೊತೆಗೆ ಬೆಳೆ ವಿಮೆಯನ್ನು ನೀಡಬೇಕು. 2024-235ನೇ ಸಾಲಿನ ರೈತರ ಸಾಲವನ್ನು ಮನ್ನಾ ಮಾಡಬೇಕು. ಸ್ವತಂತ್ರ್ಯ ಬಂದು ವರ್ಷವಾದರೂ ಕೂಡಾ ನಮ್ಮನ್ನು ಆಳುವ ಸರ್ಕಾರಗಳು ರೈತರ ಪರವಾದ ಒಂದು ಕಾನೂನುಗಳ ರಚಿಸಲಿಲ್ಲ, ಒಂದು ವಿಶೇಷ ಯೋಜನೆಗಳನ್ನು ತರಲಿಲ್ಲ, ಅತಿವೃಷ್ಟಿ ಅನಾವೃಷ್ಟಿ ಆದಾಗಲೂ ಕೂಡಾ ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಗಳು ಸಿಗುತ್ತಿಲ್ಲ, ರೈತ ಕುಲದ ಬಹು ದಿನದ ಬೇಡಿಕೆಯಾದ ಸ್ವಾಮಿನಾಥನ್ ವರದಿ ರಾಜ್ಯದಲ್ಲಿ ಜಾರಿಯಾಗಬೇಕು ರೈತರಿಗೆ ನ್ಯಾಯ ಸಿಗಬೇಕು. ಎಂದು ಒತ್ತಾಯಿಸಿದರು.

ವೇ.ಮೂ. ಮಹಾಂತಯ್ಯ ಗಚ್ಚಿನಮಠ, ಹಿರಿಯ ರೈತ ಮುಖಂಡ ಸಂಗಣ್ಣ ನಾಗರಾಳ, ಬಸಯ್ಯ ಹಿರೇಮಠ, ಮಾಜಿ ಸೈನಿಕ ವೆಂಕಣ್ಣ ಹಗೆದಾಳ ಮಾತನಾಡಿದರು. ಈ ಸಂದರ್ಭದಲ್ಲಿ ನವ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಇಳಕಲ್ನನಾಗರಾಜ ಹೊಂಗಲ್, ಮಾತನಾಡಿ ರಾಜ್ಯದ ಮಳೆ ಬಾರದ ಪ್ರದೇಶಕ್ಕೆ ಈ ಬಾರಿ ಕಳೆದ ನಾಲ್ಕು ತಿಂಗಳಿಂದ ದಾಖಲೆ ಮಳೆಯಾಗಿ ಅತಿವೃಷ್ಟಿ ಸಂಭವಿಸಿ ಹುನಗುಂದ ಮತ್ತು ಇಳಕಲ್‌ ತಾಲೂಕಿನ ರೈತರ ಬದುಕಿಗೆ ಆಧಾರವಾಗಿರುವ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಗಸ್ಟ್ ದವರಿಗೆ ನಮ್ಮ ರಾಜ್ಯದಲ್ಲಿ ಸತತ ಮಳೆಯಿಂದ ಸುಮಾರು 40 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಯಾಗಿದೆ ಅಂತ ಕಂದಾಯ ಇಲಾಖೆಯಲ್ಲಿ ವರದಿ ಇದೆ. ಇನ್ನು 10 ಸಾವಿರ ಎಕರೆಗೂ ಹೆಚ್ಚು ತೋಟಗಾರಿಕೆಯ ಬೆಳೆ ಹಾನಿಯಾಗಿದೆ ಎನ್ನುವ ಅಂದಾಜು ಕೂಡಾ ಇದೆ. ಆದರೆ ವಾಸ್ತವಾಗಿ ನೋಡಿದರೆ ಅಧಿಕೃತವಾಗಿ ಇದಕ್ಕಿಂತಲೂ ಎರಡು ಮೂರು ಪಟ್ಟು ರೈತರ ಬೆಳೆ ಹಾನಿಯಾಗಿದೆ. ಸರ್ಕಾರ ಕಂದಾಯ, ಕೃಷಿ, ತೋಟಗಾರಿಕೆ ಸಹಯೋಗದಲ್ಲಿ ಡೋನ್ ಆಧಾರಿತ ವೀಕ್ಷಣೆಯನ್ನು ನಡೆಸಿ, ವಾಸ್ತವ ಅಂಕಿ ಅಂಶಗಳನ್ನು ಪಡೆದುಕೊಂಡು ತಕ್ಷಣವೇ ರೈತರಿಗೆ ಮಧ್ಯಾಂತರ ಪರಿಹಾರವನ್ನು ಘೋಷಿಸಬೇಕು. ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರದ ಅಂಕಿ ಅಂಶಗಳ ಲೆಕ್ಕಾಚಾರದ ಮೇಲೆ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ಘೋಷಿಸಬೇಕು ಎಂದು ಆಗ್ರಹಿಸಿದರು.

ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ಶ್ರೀಕೃಷ್ಣ ಜಾಲಿಹಾಳ, ಶೇಖರಪ್ಪ ಬಾದವಾಡಗಿ, ಸುರೇಶ ಹಳಪೇಟೆ, ಬಿ.ವೈ.ಕೊಡಗಾನೂರ, ಚನ್ನಬಸಪ್ಪ, ಶಾಂತಪ್ಪ ,ವೆಂಕಣ್ಣ, ಗಿರಮಲ್ಲಪ್ಪ ಹಳಪೇಟೆ, ನಾರಾಯಣ ಇಳಕಲ್, ಶಂಕರಗೌಡ ಹೊಸಮನಿ, ನಾಗಪ್ಪ ಮಹಾಂತಯ್ಯ ಕುರಕುಂಟಾ, ಮಲ್ಲಪ್ಪ ಕಡಪಟ್ಟಿ, ಕಿಡಿಯಪ್ಪ ಹೊಲಗೇರಿ ಹುಚ್ಚಪ್ಪ ಮಾವಿನಮರದ, ಹನಮಂತ ನಡುವಿನಮನಿ, ತಿಮ್ಮಾಪುರ ಗ್ರಾಮದ ರೈತ ಮುಖಂಡರಾದ ಕೃಷಿಕ ಸಮಾಜದ ನಿರ್ದೇಶಕ ಸಂಗಣ್ಣ ಕೆಂಗಲ್ ಶಿವನಗೌಡ ಹನುಮ ಗೌಡ್ರು ಹನುಮಂತಗೌಡ ಭಗವಂತ ಗೌಡರ ಗುತ್ತಿಗೆದಾರ ಸಿಕ್ರೇಶ ಹನುಮಗೌಡ್ರ ಶೇಖಣ್ಣ ಮುದುಕನ ಗೌಡ್ರು ಬಸವರಾಜ್ ಹೂನೂರ್ ಪ್ರವೀಣ್ ತೋಳಮಟ್ಟಿ ಆನಂದ ಶಿರೋಳ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!