ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಕ್ತೋದ್ಧಾರಕ್ಕಾಗಿ ಅನ್ನದಾನೇಶ್ವರರ ಅವತಾರ – ಶರಣಬಸವ ಶಾಸ್ತ್ರಿಗಳ ಅಭಿಮತ

ಬಾಗಲಕೋಟೆ ಜಿಲ್ಲೆ ಮುಧೋಳ :
ಲೋಕದ ಕಲ್ಯಾಣಕ್ಕಾಗಿ ಅವತರಿಸಿದ ಮಹಾಪುರುಷ ಚಕ್ರವರ್ತಿ, ತ್ರಿವಿಧ ದಾಸೋಹಿ, ಬಂಡಿಗಣಿಪುರವಾಸಿ ಅನ್ನದಾನೇಶ್ವರರ ಲೀಲೆಗಳನ್ನು ಯಾರಿಂದಲೂ ವಣಿ೯ಸಲಾಗದು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪರಮ ಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಕೃಷ್ಣಾವತಾರಿ ಅನ್ನದಾನೇಶ್ವರರ 75 ನೇ ಹುಟ್ಟು ಹಬ್ಬದ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಭಕ್ತರ ಸಂಚಿತ ಕರ್ಮವನ್ನು ಕಳೆದು ವಾಂಚಿತವನ್ನು ಪೂಣ೯ಗೊಳಿಸುವ ಸಮಥ೯ಸದ್ಗುರು ದಾನೇಶ್ವರರು ಭಕ್ತೋದ್ಧಾರಕ್ಕಾಗಿಯೇ ಅವತಾರವೆತ್ತಿದ ಭಗವಂತ ಎಂದರು. ಇದೆ ಸಂದರ್ಭದಲ್ಲಿ ಸಮಾಜ ಸೇವಾಧುರೀಣ ಶಂಕರಗೌಡ ಪಾಟೀಲ ಅವರನ್ನು ಗೌರವಿಸಲಾಯಿತು. ಸೇರಿದ ಭಕ್ತಸ್ತೋಮಕ್ಕೆ ಸಿಹಿ ಹಂಚಲಾಯಿತು. ಕಂದಾಯ ಅಧಿಕಾರಿ ಶ್ರೀಶೈಲ ಪಾಟೀಲ ಉಪಸ್ಥಿತರಿದ್ದರು. ಮಹಾಲಿಂಗಯ್ಯ ಸ್ವಾಮೀಜಿ ಹಿರೇಮಠ ಅವರ ಸನ್ನಿಧಾನದಲ್ಲಿ ಸಿದ್ದಯ್ಯ ಸ್ವಾಮಿಗಳು ಹಿರೇಮಠ ಅವರ ನೇತೃತ್ವದಲ್ಲಿ, ಮಹಾಳಿಂಗೇಶ್ವರ ದೇವರ ಪೂಜಾರಿಗಳಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್. ಶ್ಯಾಮಲಾ ಅವರು ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!