ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸುಗೂರ ಎನ್. ಗ್ರಾಮದಲ್ಲಿ ಮಳೆಗೆ ಮನೆ ನೆಲಸಮ: ಪ್ರಾಣಾಪಾಯದಿಂದ ಪಾರಾದ ಕುಟುಂಬ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ನಾಲವಾರ ಹೋಬಳಿ ಸುಗೂರ ಎನ್ ಗ್ರಾಮ ಕಡಬೂರ ಪಂಚಾಯಿತಿ ವ್ಯಾಪ್ತಿಯ ಸುಗೂರ ಎನ್ ಗ್ರಾಮದ ಮನೆಯೊಂದು ಸಂಪೂರ್ಣವಾಗಿ ನೆಲಕ್ಕುರುಳಿರುವ ಘಟನೆ ವರದಿಯಾಗಿದೆ.
ಸೋಮುವಾರ ತಡರಾತ್ರಿಯಲ್ಲಿ ಈ ಘಟನೆ ನಡೆದಿದ್ದು ಉಮಾದೇವಿ ಗಂ.ದಿ ಗುರಯ್ಯಾ ಸ್ವಾಮಿ (ಮಠಪತಿ) ತಾಯಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಮೂವರು ಕುಟುಂಬದ ಸದಸ್ಯರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿಯಿಡೀ ಸುರಿಯುತ್ತಿದ್ದ ಮಳೆಯಲ್ಲಿಯೆ ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಯ ಜಗುಲಿಗೆ ಹೋಗಿ ಕಾಲ ಕಳೆದಿದ್ದಾರೆ.
ಮನೆಯ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದರಿಂದ ಈ ಕುಟುಂಬವು ಅಪಾಯದಿಂದ ಪಾರಾಗಿದೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮಸ್ಥರು ಭೇಟಿ ನೀಡಿ ಧೈರ್ಯ ಹೇಳಿ ಹೋಗಿದ್ದಾರೆ.

ಪರಿಹಾರಕ್ಕೆ ಒತ್ತಾಯ:
ಕಳೆದ ಒಂದು ವಾರದಿಂದ ತಾಲೂಕಿನಲ್ಲಿ ಮಳೆಯು ಎಡೆ ಬಿಡದೆ ಸುರಿಯುತ್ತಿದೆ. ಆದ್ದರಿಂದ ಮಣ್ಣಿನ ಗೋಡೆಯಿಂದ ಕಟ್ಟಿರುವ ಹೆಂಚಿನ ಮನೆಗಳು ಅಪಾಯವನ್ನು ಎದುರಿಸುತ್ತಿವೆ. ಇದರ ಬಗೆಗೆ ಕಂದಾಯ ಇಲಾಖೆಯು ಮನೆ ಮನೆ ಸಮೀಕ್ಷೆಯನ್ನು ನಡೆಸಿ ಎಚ್ಚರವನ್ನು ನೀಡಬೇಕು. ಹಾಗೂ ಇಂತಹ ಸಂಪೂರ್ಣ ಮನೆಯನ್ನು ಕಳೆದುಕೊಂಡ ಕುಟುಂಬಗಳಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರವನ್ನು ನೀಡಬೇಕು ಎಂದು ಊರಿನ ಪ್ರಮುಖರು ಆಗ್ರಹಿಸಿದರು. ಮಹೇಶ ಪಾಟೀಲ್ ಸುಗೂರ ಎನ್, ಶರಣಗೌಡ ಬೆನಕನಹಳ್ಳಿ, ಭೀಮರೆಡ್ಡಿಗೌಡ ಕುರಾಳ ಸುಗೂರ ಎನ್. ಬಸ್ಸುಗೌಡ ಮಾಲಿ ಪಾಟೀಲ್. ಕರಬಸಪ್ಪ ದಂಡಗಿ,ಬಸವರಾಜ ಹಡಪದ ಸುಗೂರ ಎನ್, ಸಿದ್ದು ಗೌಡ ಕುರಾಳ ಸುಗೂರ ಎನ್, ರಾಜೇಂದ್ರ ನಾಯ್ಕೊಡಿ. ಸಂಗಣ್ಣ ಮಂಡ್ನಳ್ಳಿ. ಹಾಗೂ ಸಿದ್ದು ಸಾಹು ಕುಂಬಾರ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ನೌಕರರಾಗಲಿ ಗ್ರಾಮಗಳಿಗೆ ಭೇಟಿಯನ್ನು ಕೊಡುತ್ತಿಲ್ಲ.
ತಾಲೂಕಿನ ಹಲವೆಡೆಗಳಲ್ಲಿ ಬೆಳೆ ಹಾನಿಯಾಗಿದೆ. ಇದರ ಬಗೆಗೆ ಸಮೀಕ್ಷೆಯನ್ನು ನಡೆಸುತ್ತಿಲ್ಲ. ತಾಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ.

ಗ್ರಾಮಗಳಲ್ಲಿ ಅನೇಕ ಮನೆಗಳು ಬಿದ್ದಿದ್ದು ಪೂರಕ ವ್ಯವಸ್ಥೆಗೆ ಮಹಿತಿಯನ್ನು ಒದಗಿಸುತ್ತಿಲ್ಲ. ಹಾಗಿದ್ದರೆ ತಾಲೂಕು ಆಡಳಿತ ಎಂದು ಇವರನ್ನು ಏಕೆ ಕರೆಯಬೇಕು? ಎಂದು ಪ್ರಶ್ನಿಸಿದ ಬಸವರಾಜ ಹಡಪದ ಸುಗೂರ ಎನ್ ಕಂದಾಯ ಇಲಾಖೆಯ ವಿರುದ್ದ ರೈತಸಂಘವು ಹಾಗೂ ಅನೇಕ ಗ್ರಾಮದ ರೈತರು ಸೇರಿದಂತೆ ಪ್ರತಿಭಟನೆಯನ್ನು ನಡೆಸಿ ಕಣ್ತೆರೆಸುವ ಪ್ರಯತ್ನವನ್ನು ಮಾಡಲಿದೆ ಎಂದು ಹೇಳಿದರು. ಆದಷ್ಟು ಬೇಗ ನಮ್ಮ ಭಾಗದ ಶಾಸಕರು ( ಜಿಲ್ಲಾ ಉಸ್ತುವಾರಿ ಸಚಿವರು ) ತಾಲೂಕು ತಹಶಿಲ್ದಾರರು, ಸಂಬಂಧ ಪಟ್ಟ ಅಧಿಕಾರಿಗಳು, ಅನೇಕ ಮನೆಗಳಿಗೆ ಭೇಟಿ ನೀಡಿ ಗ್ರಾಮದ ಜನತೆಯ ಬೇಡಿಕೆಗಳು ಆಹ್ವಾಲುಗಳು (ಅವರ ) ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!