ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪುರಾತನ ದೇವಸ್ಥಾನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ

ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ಅನುದಾನ ನೀಡುವೆ : ಬಸನಗೌಡ ಬಾದರ್ಲಿ

ರಾಯಚೂರು/ ಸಿಂಧನೂರು ನಗರದ ಜನಸ್ಪಂದನ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ ಬಾದರ್ಲಿ ಅವರನ್ನು ತಾಲೂಕ ವಿಶ್ವಕರ್ಮ ಸಮಾಜದ ಮುಖಂಡರು ಭೇಟಿ ಮಾಡಿ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ ಅವರು ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂಪಾಯಿಗಳ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಸಿಂಧನೂರಿನ ವಾರ್ಡ್ ನಂಬರ್ 4ರ ಶ್ರೀ ಕಾಳಿಕಾದೇವಿ ದೇವಸ್ಥಾನ ಅತ್ಯಂತ ಪುರಾತನ ಕಾಲದ್ದಾಗಿದ್ದಾಗಿದೆ. ಇದೀಗ ಶಿಥೀಲಾವಸ್ಥೆಗೆ ತಲುಪಿದೆ. ಬಹಳ ತೊಂದರೆಯಲ್ಲಿದೆ ಅದನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಸಮಾಜದ ಮುಖಂಡರ ಬಹುದಿನಗಳ ಕನಸಾಗಿದೆ, ಸಮಾಜದ ಮುಖಂಡರುಗಳು ಒಗ್ಗೂಡಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ ಬಾದರ್ಲಿ ಅವರನ್ನು ಸಿಂಧನೂರಿನ ಜನಸ್ಪಂದನ ಕಾರ್ಯಲದಲ್ಲಿ ಭೇಟಿ ಮಾಡಿ ಅತ್ಯಂತ ಪುರಾತನವಾದ ದೇವಸ್ಥಾನ ಉಳಿವಿಗಾಗಿ, ಜೀರ್ಣೋದ್ಧಾರದ ಬಗ್ಗೆ ಮಾಹಿತಿ ತಿಳಿಸಿ ಅನುದಾನ ಕೋರಿ ಮನವಿ ಸಲ್ಲಿಸಲಾಯಿತು. ಮುಖಂಡರ ಮನವಿ ಸ್ವೀಕರಿಸಿದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ ಬಾದರ್ಲಿ ಅವರು ತಕ್ಷಣ ಸ್ಪಂದನೆ ಮಾಡಿ ಪುರಾತನ ದೇವಸ್ಥಾನ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಜೊತೆಗೆ ವಿಶ್ವಕರ್ಮರ ಆರಾಧ್ಯ ಕುಲ ದೇವತೆ ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರ ಮಾಡುವ ಸೌಭಾಗ್ಯ ಇಂದು ನನ್ನದಾಗಿದೆ ಎಂಬುದು ನನಗೆ ತುಂಬಾ ಸಂತೋಷದಾಯಕ ವಿಷಯ. ಆ ತಾಯಿ ಕಾಳಿಕಾದೇವಿ ಆರ್ಶಿವಾದ ನಮ್ಮ ಮೇಲಿರಲಿ,ಶ್ರೀ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ನನ್ನ ಕಡೆಯಿಂದ 10 ಲಕ್ಷ ರೂಪಾಯಿಗಳ ಅನುದಾನ ನೀಡುತ್ತೇನೆ ಮತ್ತು ಯಾವತ್ತೂ ವಿಶ್ವಕರ್ಮ ಸಮಾಜದ ಕಷ್ಟ ಕರ್ಪೂಣ್ಯಗಳಿಗೆ ಯಾವಾಗಲೂ ಜೊತೆಗಿರುವೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ, ಮಾಜಿ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ, ಶ್ರೀ ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಬಡಿಗೇರ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಮತಗಿ, ನೂತನ ಕರ್ಪೆಂಟರ್ ಕ್ಷೇಮಭಿವೃದ್ಧಿ ಸಂಘದ ತಾಲೂಕ ಅಧ್ಯಕ್ಷ ರವೀಂದ್ರ ಗದ್ರಟಗಿ, ಮುಖಂಡರುಗಳಾದ ಪ್ರಭು ದೇವರಗುಡಿ, ಚನ್ನಪ್ಪ ಕೆ ಹೊಸಹಳ್ಳಿ, ಶಂಕರ ಪಗಡದಿನ್ನಿ ಇನ್ನಿತರರು ಇದ್ದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!