ಹಾನಗಲ್ ತಾಲೂಕ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಎರಡು ದಿನಗಳ ಕಾಲ ಕೊಪ್ಪರಸಿಕೊಪ್ಪ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಏರ್ಪಡಿಸಲಾಯಿತು ಈ ಹಬ್ಬವನ್ನು ಗ್ರಾಮದ ಸಾರ್ವಜನಿಕರು ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಕ್ಷಕ ವೃಂದದವರು ಕೊಪ್ಪಶಿಕೊಪ್ಪ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಲಿಕಾ ಹಬ್ಬವನ್ನು ಅತ್ಯಂತ ಯಶಸ್ವಿಗೊಳಿಸಿದರು ಕಲಿಕಾ ಹಬ್ಬದ ಪ್ರಯುಕ್ತ ಆಯುಷ್ ಇಲಾಖೆ ಹಾವೇರಿ ಸರ್ಕಾರಿ ಯುನಾನಿ ಚಿಕಿತ್ಸಾಲಯ ಕೊಪ್ಪರಸಿಕೊಪ್ಪ ಇವರ ಸಹಯೋಗದಲ್ಲಿ ಕಲಿಕಾ ಹಬ್ಬದಲ್ಲಿ ಭಾಗವಹಿಸಿದ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕಿಯರಿಗೂ ರಕ್ತ ಒತ್ತಡದ ಪರೀಕ್ಷೆ ಮತ್ತು ಮಧುಮೇಹ ತಪಾಸಣೆಯನ್ನು ಮಾಡಲಾಯಿತು ಅತೀ ಹೆಚ್ಚು ಪರೀಕ್ಷೆ ಒಳಪಟ್ಟ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಆಸ್ಪತ್ರೆಯಿಂದ ಉಚಿತವಾಗಿ ಆಯುರ್ವೇದಿಕ ಔಷಧಿಯನ್ನು ವಿತರಿಸಲಾಯಿತು. ವರದಿಗಾರರು:ರವಿ ಓಲೆಕಾರ,ಕೊಪ್ಪರಸಿಕೊಪ್ಪ




















