ಇಂಡಿ:ಝಳಕಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಟ್ಟಡದ ಉದ್ಘಾಟನ ಸಮಾರಂಭವನ್ನು ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ ನ ಅಧ್ಯಕ್ಷರು ಹಾಗೂ ಬಸವನ ಬಾಗೆವಾಡಿ ಶಾಸಕರದ ಶಿವಾನಂದ ಪಾಟೀಲರು ನೆರವೇರಿಸಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ 272 ಶಾಖೆಗಳಿದ್ದವು ಅದರಲ್ಲಿ 232 ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ ಇನ್ನುಳಿದ 40 ಶಾಖೆಗಳು ಮಾತ್ರ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತವೆ ಇದಕ್ಕೆ ಕಾರಣ ಅಲ್ಲಿನ ಅಧ್ಯಕ್ಷರು ಹಾಗೂ ಸೆಕ್ರೆಟರಿಗಳು. ಕೆಲವೊಂದು ಶಾಖೆಗಳಲ್ಲಿ ಅವ್ಯವಹಾರ ನಡೆದಿದ್ದು ಅವುಗಳ ತನಿಖೆ ಕಾರ್ಯೆ ಪ್ರಾರಂಭಗೊಂಡಿದೆ. ಸೊಸೈಟಿಗಳು ರೈತರಿಗೆ ದಾರಿ ದೀಪಗಳಾಗಿರಬೇಕು .ಕೇವಲ 0% ಬಡ್ಡಿ ದರದಲ್ಲಿ ರೈತರಿಗೆ ಸಾಲ ಕೊಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಶಾಸಕರದ ಯಶವಂತರಾಯ ಗೌಡ ಪಾಟೀಲ , ವೇದಮೂರ್ತಿ ಶ್ರೀ ಮಹಾಂತೇಶ ಶಾಸ್ತ್ರೀಗಳು ಮಾತನಾಡಿದರು ಗ್ರಾಮ ಪಂಚಾಯತ ಅಧ್ಯಕ್ಷ ಸಣ್ಣಪ್ಪ ತಳವಾರ, ಎಂ ಆರ್ ಪಾಟೀಲ್, ಅರವಿಂದ ಪೂಜಾರಿ, ಬಿ ಎಂ ಕೋರೆ, ಎಂ ಎಸ್ ದೇಸಾಯಿ,ಪ್ರಭಾಕರ್ ಬಿರಾದಾರ್ ನಾರಾಯಣ ಜಾಗಿರ್ದರ್, ಅರವಿಂದ ಜಾಗಿರ್ದರ್, ಅಶೋಕ ಕಾಪಸೆ, ಸುಭಾಷ ಗೌಡ ಬಿರಾದಾರ ಎಲ್ಲ ಸದಸ್ಯರು, ಗ್ರಾಮಸ್ಥರು ಮತ್ತು ರೈತರು ಉಪಸ್ಥಿತರಿದ್ದರು.
ವರದಿ:ಶ್ರೀಶೈಲ ಬಬಲಾದಿ




















