ಶಿವಮೊಗ್ಗ ನಗರದ ಸೋಗಾನೆ ವಿಮಾನ ನಿಲ್ದಾಣದಲ್ಲಿ ಕೆಲಸ ಏನಾದರೂ ಸಿಗಬಹುದೇ ಎಂದು ಯವ ಸಮೂಹ ತನ್ನದೇ ದಾರಿಯಲ್ಲಿ ಹುಡುಕಾಡುತ್ತಿದೆ. ಅಲ್ಲದೆ ಸ್ಥಳೀಯವಾಗಿಯೇ ಕೆಲಸ ನೀಡಬೇಕು ಎಂಬ ಅಭಿಯಾನವೂ ಈ ಸಂಬಂಧ ಜೋರಾಗಿ ನಡೆಯುತ್ತಿದೆ ಇದರ ಬೆನ್ನಲ್ಲೆ ಉದ್ಯೋಗ ಕೊಡಿಸುತ್ತೇವೆ ಎಂಬ ಜಾಹಿರಾತುಗಳು ಸಹ ಅಬ್ಬರಿಸುತ್ತಿವೆ ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ಉದ್ಯೋಗಾವಕಾಶದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ.
ಇದೀಗ ಇಂತಹ ಫೇಕ್ ಜಾಹಿರಾತುಗಳನ್ನು ನಂಬದಂತೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರು ಸಂದೇಶ ರವಾನಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕೊಡಿಸ್ತೇವೆ ಎಂಬಂತಹ ಫೇಕ್ ಜಾಹಿರಾತುಗಳು ಹರಿದಾಡುತ್ತಿದೆ ಎಂದು ನಕಲಿ ಜಾಹಿರಾತಿನ ಫೋಟೋವೊಂದನ್ನು ಷೇರ್ ಮಾಡಿದ್ದಾರೆ ಈ ಜಾಹಿರಾತು ಹಾಗೂ ಇದರಲ್ಲಿರುವ ಮಾಹಿತಿ ಸತ್ಯವಾದುದಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಫೇಕ್ ಜಾಹಿರಾತಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಂದೇಶ ರವಾನಿಸಿದ್ದಾರೆ.
ಇನ್ನು ಜಾಹಿರಾತಿನಲ್ಲಿ ಶಿವಮೊಗ್ಗ ಏರ್ಪೋರ್ಟ್ನ ಫೋಟೋ ಬಳಸಿ ವಿವಿಧ ವಿಭಾಗಗಳಲ್ಲಿ ಹುದ್ದೆ ಕೊಡಿಸುವುದಾಗಿ ಪ್ರಕಟಿಸಲಾಗಿತ್ತು ಸದ್ಯ ಇದು ನಕಲಿ(FAKE )ಎಂಬುದು ಗೊತ್ತಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-ಕರುನಾಡ ಕಂದ




















