ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಧ್ಯಕ್ಷ ಪಟ್ಟ ಶರಣಗೌಡ ದಳಪತಿ ಹಾಗೂ ಗುರಣ್ಣಗೌಡ ಪಾಟೀಲ್

ನಿನ್ನೆ ನಡೆದ ಕಾರ್ಯಕ್ರಮದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರ ಸಮ್ಮೂಖದಲ್ಲಿ ಗುಡೂರ ಎಸ್ ಎನ್ ಗ್ರಾಮದಲ್ಲಿ ನಡೆದ ರೈತ ಹಾಗೂ ಹೊಸ ಅಧ್ಯಕ್ಷರ ನೇಮಕ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಹಾಗೂ ಹಸಿರು ಸೇನೆಯ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿ ಪಾಟೀಲ್ ಹಾಗೂ ಜೇವರ್ಗಿ ತಾಲೂಕಿನ ರೈತ ಸಂಘದ ಅಧ್ಯಕ್ಷರಾದ ಪಂಚಾಕ್ಷರಿ ಸ್ವಾಮೀಜಿ ಅವರು ನೇತೃತ್ವದಲ್ಲಿ ನಿನ್ನೆಯ ದಿನಾಂಕ : 01-02-2023 ರಂದು ರೈತ ಕಾರ್ಯಕ್ರಮದಲ್ಲಿ ಹಲವಾರು ಪದಾಧಿಕಾರಿಗಳನ್ನು ಗ್ರಾಮ ಘಟಕದ ಅಧ್ಯಕ್ಷ ಹೋಬಳಿ ವಲಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಲಾಯಿತು. ಈ ಸಂದರ್ಭದಲ್ಲಿ ಯುವ ರೈತ ಹೋರಾಟಗಾರ ಚಂದ್ರಶೇಖರ ಪಾಟೀಲ್ ರವರು ರೈತ ಸಭೆಯ ಹಾಗೂ ಹೊಸ ಅತಿಥಿಗಳ ನೇಮಕ ಮಾಡಲು ಗ್ರಾಮಕ್ಕೆ ಆಗಮಿಸಿದ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷರಿಗೆ, ತಾಲೂಕ ಅಧ್ಯಕ್ಷರಾದ ಪಂಚಾಕ್ಷರಿ ಸ್ವಾಮಿಜಿಯವರಿಗೆ,ಪ್ರಧಾನ ಕಾರ್ಯದರ್ಶಿಗಳಿಗೆ,ಅಶೋಕ ಪಾಟೀಲ್,ಸತ್ಯಂ ಟಿ ವ್ಹಿ ಮಾಧ್ಯಮ ಮಿತ್ರರಾದ ಸಿದ್ದುಗೌಡರಗೆ ಮತ್ತು ಮುಖ್ಯ ಅತಿಥಿಗಳಿಗೆ ಸ್ವಾಗತ ಕೋರಿ ಸಮಸ್ತ ಗುಡೂರ ಎಸ್ ಎನ್ ಗ್ರಾಮದ ರೈತ ಬಾಂಧವರು ಶಾಲು ಹೊದಿಸಿ ಸನ್ಮಾನಿದರು. ಈ ಸಂದರ್ಭದಲ್ಲಿ ಗ್ರಾಮದ ಷಡಕ್ಷರಿ ಹಿರೇಮಠ ರವರು ರೈತರ ತೊಂದರೆ ಹಾಗೂ ಹೋರಾಟಗಾರರಾದ ಜಿಲ್ಲಾ ಮತ್ತು ತಾಲ್ಲೂಕು ಅಧ್ಯಕ್ಷರ ಬಗ್ಗೆ ಸವಿವರವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಪ್ರಶಾಂತಗೌಡ ಮಾಲಿ ಪಾಟೀಲ್ ರವರು ರೈತರ ಕಷ್ಟ-ಸುಃಖಗಳ ಬಗ್ಗೆ ಮತ್ತು ಸರ್ಕಾರದ ಹಲವಾರ ಯೋಜನೆಗಳು ತಲುಪಿಸುವ ಕೆಲಸ ನಮ್ಮ ರೈತ ಸಂಘಟನೆ ನಿಮ್ಮ ಬೆನ್ನೆಲುಬಾಗಿರುತ್ತದೆ ಎಂದು ಆಶಯ ನುಡಿ ಹೇಳಿದರು.
ಈ ರೈತ ಸಭೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಪ್ರಶಾಂತಗೌಡ ಪಾಟೀಲ್, ತಾಲ್ಲೂಕು ರೈತ ಸಂಘದ ಅಧ್ಯಕ್ಷರಾದ ಪಂಚಾಕ್ಷರಿ,ಪ್ರಧಾನ ಕಾರ್ಯದರ್ಶಿಗಳು,ಮಾಧ್ಯಮ ಮಿತ್ರರಾದ ಸಿದ್ದುಗೌಡ ಹಾಗೂ ಗ್ರಾಮದ ಹಿರಿಯರಾದ ರಾಜುಗೌಡ,ಕಾಳಪ್ಪ,ಮಾರುತಿ,ಶಿವಾನಂದ,ರುದ್ರಗೌಡ, ವಿಶ್ವರಾಧ್ಯ,ನಿಂಗಪ್ಪ,ನೀಲಕಂಠಯ್ಯ,ಮಲ್ಲಿಕಾರ್ಜುನ್,ಸಂಗು ಜಾಗಿರದಾರ್,ಬಸು,ಮಲ್ಲಿನಾಥ,ಗುರಪ್ಪ,ಮೋಹನ್ ಜಾಗಿರದಾರ ಸಮೀರ ಹಾಗೂ ಇನ್ನಿತರ ಹಲವಾರು ರೈತ ಮುಖಂಡರು ಹಾಜರಿದ್ದರು.

ವರದಿ: ಚಂದ್ರಶೇಖರ ಎಸ್ ಪಾಟೀಲ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!