ಕಲಬುರಗಿ ಜಿಲ್ಲೆಯ ಚಿಂಚೋಳಿ:ಚಂದಾಪುರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಿ+ಮಾನ್ಯತೆ ಲಭಿಸಿದೆ.ಕಾಲೇಜು ಪ್ರಾರಂಭವಾಗಿ ೧೫ ವರ್ಷಗಳಾಗಿದ್ದು ಇಷ್ಟು ಕಡಿಮೆ ಅವಧಿಯಲ್ಲಿ ನ್ಯಾಕ್ ತಂಡದಿಂದ ಬಿ+ ಪಡೆದಿದ್ದು ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿ ಗಳಿಗೆ ಹರ್ಷವನ್ನು ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಮಲಿಕಾರ್ಜುನ ಸಾವರ್ಕರ್ ತಿಳಿಸಿದರು.ನ್ಯಾಕ್ ಸಮೀತಿ ಭೆಟ್ಟಿ ವೇಳೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಕೈಲಾಸಪತಿ ವಿಶ್ವ ಕರ್ಮ ಕನ್ನಡ ವಿಭಾಗದ ಮುಖ್ಯಸ್ಥ ಮಲ್ಲಪ್ಪ ತೋಟ್ನಳಿ ಸಮಾಜ ಶಾಸ್ತ್ರದ ಮುಖ್ಯಸ್ಥರಾದ ಮಂಜುನಾಥ ದೇಶಪಾಂಡೆ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂಗಪ್ಪ .ವಿ.ಮಾಮನಶೆಟ್ಟಿ ರಾಜ್ಯ ಶಾಸ್ತ್ರದ ಮುಖ್ಯಸ್ಥರಾದ ಡಾ. ಬಸವರಾಜೇಶ್ವರಿ ಹಾಲು ವಾಣಿಜ್ಯ ವಿಭಾಗದ ಮುಖ್ಯಸ್ಥ ಸಂತೋಷ ಸಿಂಗ್ ಬಾಯ್ಸ್ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ರೇಶ್ಮಾ ಗಾಜರೆ ಡಾ.ಜೆ ಎಸ್ ಪಟಣಕರ್ ಸರ್ ಹಾಗೂ ಇನ್ನಿತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. ವರದಿಗಾರ:ಪ್ರಕಾಶ್ ಎಸ್ ಪೂಜಾರಿ ಕರುನಾಡ ಕಂದ




















