ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ಹಾಗೂ ವಚನ ಅಧ್ಯಯನ ಕುರಿತು ಭಾಗ -೨ ವರದಿ

ಕಲಬುರಗಿ – ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ಬಸವಕಲ್ಯಾಣದ ಮಹಾನ್ ವಚನಕಾರರಲ್ಲಿ ಒಬ್ಬರು. ಬಸವಕಲ್ಯಾಣದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ. ಕ್ರಾಂತಿಯಲ್ಲಿ ಅವರ ಪಾತ್ರ ಬಹಳ ದೊಡ್ಡದು. ಇವರು ಕಾಯಕದಿಂದ ‘ಹಡಪದ’ ಅಂದರೆ ವೀಳ್ಯದೆಲೆ ಮತ್ತು ( ಅಣ್ಣ ಬಸವಣ್ಣನವರ ಮಹತ್ವದ ಕಾರ್ಯಾಡಳಿತದ ಮಹತ್ವದ ದಾಖಲೆಗಳನ್ನು ) ಸಂಗ್ರಹಿಸಿಹಿಡುವ ಪೆಟ್ಟಿಗೆ ಅಥವಾ (ಚೀಲ) ಕಾರಣ ಇವರು ಕ್ಷೌರ ವೃತ್ತಿ ಮಾಡಿರುವ ಯಾವುದೇ ದಾಖಲೆಗಳು ಯಾವುದೇ ವಚನ ಮತ್ತು ಸಾಹಿತ್ಯ ದಾಖಲೆಗಳಲ್ಲಿ ಕಂಡುಬಂದಿಲ್ಲ, ‘ಹಡಪದ ಅಪ್ಪಣ್ಣ’ ಎಂದು ಪ್ರಸಿದ್ಧರಾಗಿದ್ದಾರೆ.

​ಬಸವಕಲ್ಯಾಣದಲ್ಲಿ ಅವರ ಪಾತ್ರ
​ಬಸವಣ್ಣನವರ ಆಪ್ತ ಕಾರ್ಯದರ್ಶಿ:

ಹಡಪದ ಅಪ್ಪಣ್ಣ ಅವರು ಬಸವಣ್ಣನವರ ನಿಕಟವರ್ತಿ ಹಾಗೂ ಅವರ ಆಪ್ತ ಕಾರ್ಯದರ್ಶಿಯಾಗಿ ಆಪ್ತ ಸಹಾಯಕರಾಗಿ , ಅವರ ರಕ್ಷಕರಾಗಿ ಕೆಲಸ ಮಾಡಿದರು. ಅವರು ಬಸವಣ್ಣನವರ ಜೊತೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಇರುತ್ತಿದ್ದರು, ಅವರ ಎಲ್ಲಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು.
​ಅನುಭವ ಮಂಟಪದ ಬಸವಕಲ್ಯಾಣದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಎಂದೇ ಹೆಸರಾಗಿದೆ. ಇಲ್ಲಿ ಎಲ್ಲ ಜಾತಿ, ಮತ, ವರ್ಗದ ಶರಣರು ಸೇರಿ ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಹಡಪದ ಅಪ್ಪಣ್ಣ ಈ ಅನುಭವ ಮಂಟಪದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಅದರ ಆಧಾರ ಸ್ತಂಭ ವಾಗಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

​ವಚನ ಸಾಹಿತ್ಯದ ಕೊಡುಗೆ:
ಅಪ್ಪಣ್ಣ ಅವರು ತಮ್ಮ ವಚನಗಳನ್ನು “ಬಸವಪ್ರಿಯ ಕೂಡಲ ಚೆನ್ನಬಸವಣ್ಣ” ಎಂಬ ಅಂಕಿತನಾಮದಲ್ಲಿ ರಚಿಸಿದ್ದಾರೆ. ಇವರ ವಚನಗಳು ಜಾತಿ ರಹಿತ, ವರ್ಗ ರಹಿತ, ವರ್ಣರಹಿತ, ಸಮಸಮಾಜ ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಎಲ್ಲರೂ ಸಮಾನರು ಎಂದು ಸಾರಿದವು. ಅವರ ವಚನಗಳು ಸರಳ ಭಾಷೆಯಲ್ಲಿ ಆಳವಾದ ತಾತ್ವಿಕ ಚಿಂತನೆಗಳನ್ನು ಒಳಗೊಂಡಿವೆ.

​ಹಡಪದ ಅಪ್ಪಣ್ಣನವರ ಇತಿಹಾಸದ ಮುಖ್ಯಾಂಶಗಳು
​ಜನನ:
ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದರು.
ಕಾಯಕದಲ್ಲಿ ನಿಷ್ಠರಾಗಿದ್ದ ಅವರು, ತಮ್ಮ ಕಾಯಕವೇ ಕೈಲಾಸ ಎಂದು ನಂಬಿದ್ದರು.
​ ಅವರ ಪತ್ನಿ ಶಿವಶರಣೆ ಲಿಂಗಮ್ಮ ಕೂಡ ವಚನಕಾರ್ತಿಯಾಗಿದ್ದರು ಮತ್ತು ದಾಸೋಹ ಮಹಾ ಮನೆಯ ನೀಲಾಂಭಿಕೆ ಮತ್ತು ಗಂಗಾಭಿಂಕೆಯವರ ಜೊತೆಯಲ್ಲಿ ಶಿವಯೋಗದಲ್ಲಿ ಅತಿ ಮಹತ್ತರದ ಎತ್ತರ ಸ್ಥಾನ ತಲುಪಿದರು ಎಂದು ಅವರ ವಚನಗಳಿಂದ ತಿಳಿದು ಬರುತ್ತದೆ. “ಅಪ್ಪಣ್ಣಪ್ರಿಯ ಚೆನ್ನಬಸವಣ್ಣ” ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ.
​ಕಲ್ಯಾಣ ಕ್ರಾಂತಿಯ ನಂತರ ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಹೊರಟಾಗ, ಅಪ್ಪಣ್ಣನವರು ಅವರನ್ನು ಹಿಂಬಾಲಿಸಿದರು. ಕೊನೆಯಲ್ಲಿ ಇವರು ತಂಗಡಗಿಯಲ್ಲಿ ಐಕ್ಯರಾದರು. ಅಲ್ಲಿಯೇ ಇವರ ಸಮಾಧಿ ಇದೆ.
​ದೃಷ್ಟಿ: ಅಪ್ಪಣ್ಣ ಅವರು ಕಾಯಕ, ದಾಸೋಹ ಮತ್ತು ಭಕ್ತಿ ತತ್ವಗಳಿಗೆ ಮಹತ್ವ ಕೊಟ್ಟರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿದ್ದು, ಸಮಾನತೆ ಮತ್ತು ಕಾಯಕ ನಿಷ್ಠೆಯ ಸಂದೇಶವನ್ನು ನೀಡುತ್ತವೆ.
​ನಿಜಸುಖಿ ಹಡಪದ ಅಪ್ಪಣ್ಣರ ಜೀವನ ಚರಿತ್ರೆಯ ಬಗ್ಗೆ ತಿಳಿಯಬಹುದಾಗಿದೆ. ಹಡಪದ ಅಪ್ಪಣ್ಣನವರ ಇತಿಹಾಸ ಕುರಿತು ಅನೇಕ ಸಾಹಿತಿಗಳು ಲೇಖಕರು ಡಾ.ಎಲ್ ಬಸವರಾಜ ಮತ್ತು ಡಾ‌. ಬಿ ಆರ್ ಅಣ್ಣೀಗೇರಿ ಅವರು ತಮ್ಮ ವಚನ ಸಾಹಿತ್ಯ ದಲ್ಲಿ ವಿಶ್ಲೇಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ.ಬಿ ಆರ್ ಅಣ್ಣೀಗೇರಿ ಅವರು ಶರಣ ನಿಜಸುಖಿ ಹಡಪದ ಅಪ್ಪಣ್ಣ ನಂತಹ ಶರಣರ ಬಗೆಗಿನ ತಮ್ಮ ಅಧ್ಯಯನ ಗಳನ್ನು ಪ್ರಕಟಿಸಿದ್ದಾರೆ. ಈ ರೀತಿಯ ಇತಿಹಾಸ ವನ್ನು ಬಗ್ಗೆ ತಿಳಿಸಿದ ವಚನ ಸಾಹಿತಿಗಳಿಗೆ -ಹಾಗೂ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧಗಳು ರಚಿಸಿದ ಲೇಖಕರಿಗೆ ಹೃತ್ಪೂರ್ವಕ ಅನಂತ ಧನ್ಯವಾದಗಳನ್ನು ತಿಳಿಸಿದರು. ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಡಪದ ಹಳ್ಳಿ. ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಮತ್ತು. ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ. ಮತ್ತು ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ. ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ. ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷ – ರುದ್ರಮಣಿ ಅಪ್ಪಣ್ಣ ಬಟಗೇರಾ. ಮಹಾಂತೇಶ ಇಸ್ಲಾಂಪೂರೆ. ಹಾಗೂ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಮತ್ತು ಆನಂದ ಖೇಳಗಿ. ಕಲಬುರಗಿ ಜಿಲ್ಲೆಯ ಸಹ ಕಾರ್ಯದರ್ಶಿ ಮಹಾದೇವ ರಾವೂರ ಮತ್ತು ನಿಂಗಣ್ಣಾ ಯಾತನೂರ . ಕಲಬುರಗಿ ಜಿಲ್ಲೆಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಬಗದುರಿ. ಮಲ್ಲಿಕಾರ್ಜುನ ಹಡಪದ ಬನ್ನೂರ. ಕಲಬುರಗಿ ಜಿಲ್ಲೆಯ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ. ಕಲಬುರಗಿ ಜಿಲ್ಲಾ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ. ಮತ್ತು ಕಾರ್ಯದರ್ಶಿ ವಿನೋದ ಅಂಬಲಗಾ. ಮತ್ತು ಬೀದರ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷರ ಪ್ರಭುರಾವ ತರಹನಹಳ್ಳಿ ನ್ಯಾಯವಾದಿಗಳು, ಬೀದರ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಹಿರಿಯ ಮುಖಂಡರು ಮಾಜಿ ಕಾರ್ಯದರ್ಶಿ ಶ್ರೀ ಶರಣಪ್ಪ ಚಂದನಹಳ್ಳಿ‌. ಮತ್ತು ಬೀದರ ಜಿಲ್ಲೆಯ ಅಧ್ಯಕ್ಷರು ದತ್ತಾತ್ರೇಯ ಹಡಪದ ಬಾಂದೇಕರ್ , ಬೀದರ ಜಿಲ್ಲೆಯ ಪ್ರ. ಕಾರ್ಯದರ್ಶಿ ಸುಭಾಷ್ ಅಣದೂರ , ಬೀದರ ಜಿಲ್ಲಾ ಸಹ ಕಾರ್ಯದರ್ಶಿ ರಾಜಕುಮಾರ ಹಡಪದ ಮಳಚಾಪೂರ, ಮತ್ತು ಕಲಬುರಗಿ ವಿಭಾಗೀಯ ಹಡಪದ ನೌಕರಸ್ಥರ ಸಂಘದ ಸಂಘಟನಾ ಕಾರ್ಯದರ್ಶಿಗಳು ರಮೇಶ್ ಹಡಪದ ಹುಮನಾಬಾದ, ಬಸವಕಲ್ಯಾಣ ತಾಲೂಕು ಅಧ್ಯಕ್ಷರು ರಾಚಪ್ಪ ಮಂಠಾಳ ,ರಾಜಕುಮಾರ ಹಡಪದ ಚಿಟ್ಟಗುಪ್ಪಾ.ಮತ್ತು ಜೇವರ್ಗಿ ತಾಲೂಕು ಅಧ್ಯಕ್ಷರು ಶ್ರೀ ತಿಪ್ಪಣ್ಣ ಹಡಪದ ನರಿಬೋಳ . ಮಹಾಂತೇಶ ಹಡಪದ ಹವಳಾಗಾ ಅಫಜಲಪುರ, ಚಿತ್ತಾಪುರ ತಾಲೂಕು ಅಧ್ಯಕ್ಷ ರಮೇಶ್ ಹಡಪದ ಕೊಲ್ಲೂರು, ಶ್ರೀಮಂತ ಹಡಪದ ಮಳಗ ಕಾಳಗಿ ತಾಲೂಕಾಧ್ಯಕ್ಷ. ಸಿದ್ರಾಮ ಹಡಪದ ಶಹಾಬಾದ ತಾಲೂಕಾಧ್ಯಕ್ಷ, ಹಾಗೂ ಉದಯಕುಮಾರ್ ಹಡಪದ ಕಮಲಾಪೂರ ತಾಲೂಕಾಧ್ಯಕ್ಷ , ಶಂಕರ ಹಡಪದ ಆಳಂದ ತಾಲೂಕಾಧ್ಯಕ್ಷ , ಹಾಗೂ ಸಮಾಜದ ಚಿಂತಕರು ಬಸವರಾಜ ಹಡಪದ ಗೆದ್ದಲಮರಿ. ಹಣಮಂತ ಹಡಪದ ನಿಡಗುಂದಿ. ದಶರಥ ನಾವಿ, ಹಾಗೂ ಸಮಾಜದ ಅನೇಕ ಮುಖಂಡರು ಈ ಇತಿಹಾಸದ ಬಗ್ಗೆ ರಚಿಸಿದ ಲೇಖಕರಿಗೆ ಅಭಿನಂದನೆಗಳನ್ನು ತಿಳಿಸಿದರು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!