ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಡಗರ ಸಂಭ್ರಮದೊoದಿಗೆ ಜರುಗಿದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರರ ಜಾತ್ರೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರುಗಳ ಜಾತ್ರೆಯ ಅಂಗವಾಗಿ ಕಳೆದ ದಿನಾಂಕ ೨೦ ರಂದು ಪ್ರಾರಂಭಗೊಂಡು ೨೧ ರಂದು ರವಿವಾರ ೨೨ ರಂದು ಸೋಮವಾರದವರೆಗೆ ಸಡಗರ ಸಂಭ್ರಮದೊoದಿಗೆ ಹತಾರ ಸೇವೆ ಹೇಳಿಕೆ ಸುತ್ತಗಾಯಿ ಹೊಡೆಯುವ ಕಾರ್ಯಗಳು ನೆರವೇರಿದವು.


ಕಳೆದ ದಿನಾಂಕ ೨೦ ರಂದು ಶನಿವಾರ ರಾತ್ರಿ ೮ ಗಂಟೆಯ ಸುಮಾರಿಗೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಿಂದ ತಿಮ್ಮಾಪುರದ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ ಕಿರುಸೂರ ಗ್ರಾಮಕ್ಕೆ ತೆರಳಿದವು ನಂತರ ಅಲ್ಲಿನ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಹಡಗಲಿ ಸಮೀಪದ ಮಲಪ್ರಭ ನದಿಗೆ ಹೋಗಿ ಸ್ನಾನ ಮಾಡಿದ ನಂತರ ನದಿಯಲ್ಲಿ ಪೂಜೆ ಪುನಸ್ಕಾರಗಳು ಜರುಗಿದವು ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ಅಲ್ಲಿಯ ಹನುಮಂತ ದೇವರಿಗೆ ಪೂಜೆ ಸಲ್ಲಿಸಿ ನಂತರ ಅಲ್ಲಿ ಮುಂಜಾನೆ ನಾಲ್ಕರ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಶ್ರೀ ಮಾರುತೇಶ್ವರ ಅರ್ಚಕ ಸಂಜೀವಪ್ಪ ಪೂಜಾರಿ ದೈವಾದೀನ ಕಾಲೋಚಿತ ಉತ್ತರಿ ಹಸ್ತ ಚಿತ್ತಿ ಕರೆ ಎತ್ತು ಕಾಲು ಕೆದರೈತಿ ಎಂಬ ಹೇಳಿಕೆಯನ್ನು ಹೇಳಿದರು ಇದರ ಅರ್ಥವನ್ನು ವಿವರಿಸಬಹುದು ಸ್ಥಳೀಯ ಮುಖಂಡ ಹುನಗುಂದ ತಾಲೂಕಾ ಪಂಚಾಯತ ಮಾಜಿ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮಾತನಾಡಿ ನಮ್ಮ ನಮ್ಮ ದೈವಕ ಅನುಸಾರ ಕಾಲಕ್ಕೆ ತಕ್ಕಂತೆ ಉತ್ತರಿ ಹಸ್ತ, ಚಿತ್ತಿ ಮಳೆಗಳು ಅವರ ದೈವಕ್ಕ ಅನುಸಾರವಾಗಿ ಮಳೆಗಳು ಬರಬಹುದೆಂದು ಹೇಳಿದ ಅವರು ಕರೆ ಎತ್ತು ಕಾಲಕೆದರೆತಿ ಎಂದರೆ ಎಣ್ಣೆ ಕಾಳುಗಳಾದ ಸೂರ್ಯಪಾನ, ಕುಸುಬಿ, ಸೇಂಗಾ ಬೆಳೆಗಳು ಹೆಚ್ಚು ಫಸಲುಗಳು ಬರುತ್ತದೆ ಎಂಬ ಅರ್ಥವನ್ನು ಹೇಳಬಹುದಾಗಿದೆ. ಈ ವರ್ಷ ಅತಿಯಾಗಿ ಮಳೆಯಾಗಿದ್ದರೂ ಸಹ ಎಣ್ಣೆ ಕಾಳುಗಳು ಫಸಲುಗಳು ಬರುತ್ತವೆ ಎಂದು ಹೇಳಬಹುದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ನಂತರ ಪಲ್ಲಕ್ಕಿ ಹಾಗೂ ಭಕ್ತರು ತಿಮ್ಮಾಪುರ ಗ್ರಾಮಕ್ಕೆ ಬಂದು ತಲುಪಿದರು.
ದಿನಾಂಕ: ೨೧ ರಂದು ರವಿವಾರ ಬೆಳಗ್ಗೆ ಎರಡು ದೇವರಿಗೆ ರುದ್ರಾಭಿಷೇಕ ಕಳಸದ ಮೆರವಣಿಗೆ ಗೋಪುರಕ್ಕೆ ಕಳಸಾರೋಹಣ ಹೊಳೆಯಿಂದ ತಂದ ನೀರನ್ನು ದೇವರಿಗೆ ಪೂಜೆ ಸಲ್ಲಿಸಲಾಯಿತು ನಂತರ ಪೂಜಾರಿಗಳಿಂದ ರೋಮಾಂಚನಗೊಳಿಸುವ ಹತಾರ ಸೇವೆ ನಡೆಯಿತು , ರಜತ ಮಹೋತ್ಸವದ ನಿಮಿತ್ಯ ಸುಮಂಗಲಿಯರಿಂದ ಕುಂಭಮೇಳ ಜರುಗಿತು. ಅಂದು ಸಾಯಂಕಾಲ ಪೂಜಾರಿ ಮನೆಯಿಂದ ಮಾವಿನ ಮರತಪ್ಪ ಎಂಬ (ಹನುಮಂತ ದೇವರ ಮೂರ್ತಿಯನ್ನು ಅರ್ಚಕರಿಂದ) ದೇವಸ್ಥಾನಕ್ಕೆ ತರಲಾಯಿತು. ನಂತರ ಐದು ಸುತ್ತು ಹತಾರ ಸೇವೆ ನಂತರ ಇದೆ ಸಂದರ್ಭದಲ್ಲಿ ಸುತ್ತುಗಾಯಿ ಒಡೆಯುವ ಕಾರ್ಯಗಳು ಯುವಕರಿಂದ ಜರುಗಿದವು, ನಂತರ ಕೊನೆಯ ಅರ್ಚಕ ಬಸವರಾಜ ಹನುಮಂತ ಪೂಜಾರಿ ಬರಮ ದೇವರ ಕಟ್ಟಯೆ ಮೇಲೆ ನಿಂತು ಉತ್ತರಿ, ಹಸ್ತ, ಚಿತ್ತಿ ಸಾಧಾರಣ ಅನ್ನ ಎಂಬ ಹೇಳಿಕೆಯನ್ನು ನುಡಿದರು.
ಇದರ ಅರ್ಥ ಬಗ್ಗೆ ಹುನಗುಂದದ ರೈತ ಈರಪ್ಪ ಲೋಕಾಪೂರ ಇವರು ವಿವರಿಸಿದ್ದು ಹೀಗೆ “ಉತ್ರಿ ಹಸ್ತ, ಚಿತ್ತಿ ಸಾಧಾರಣ ಅನ್ನ” ಎಂದರೆ ಮುಂಗಾರಿನಲ್ಲಿ ಸುರಿದ ಹೆಚ್ಚು ಮಳೆಗಳಿಂದ ಫಸಲುಗಳು ಅನ್ನದಾತನಿಗೆ ಬೆಳೆಗಳು ಕಡಿಮೆ ಬರುತ್ತವೆ
ಎಂಬ ಅರ್ಥ ಹೇಳಬಹುದಾಗಿದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ನಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರತಿ ಮನೆಮನೆಯವರು ಹಾಗೂ ಸುತ್ತಗಾಯಿಯನ್ನು ಒಡೆದು ತಮ್ಮ ಹರಕೆಯನ್ನು ಸಲ್ಲಿಸಿದರು. ಈ ಜಾತ್ರೆಯಲ್ಲಿ ಸಾವಿರಾರು ಕಾಯಿಗಳು ಮಾರಾಟವಾದವು ಎಂದು ವ್ಯಾಪಾರಸ್ಥರು ತಿಳಿಸಿದರು ಜಾತ್ರೆಯ ಅಂಗವಾಗಿ ಪ್ರತಿಯೊಂದು ಮನೆಗಳ ಮುಂದೆ ರಂಗೋಲಿ ಓಣಿಗಳಲ್ಲಿ ಕಳಸದ ಮೆರವಣಿಗೆ ಸಂಧರ್ಭದಲ್ಲಿ ಪೂಜೆ , ಕಾಯಿ ಒಡೆಯುವದು ಮುಂತಾದ ಸಂಪ್ರದಾಯ ಪದ್ದತಿಗಳು ಸಾಮಾನ್ಯವಾಗಿ ಕಂಡುಬ೦ದವು.

ಈ ವರ್ಷ ಮಾರುತೇಶ್ವರ ಮತ್ತು ಬಸವೇಶ್ವರ ಜಾತ್ರೆ ಹುಬ್ಬಿ ಮಳೆ ಕೊನೆಯ ವಾರದಲ್ಲಿ ಹಾಗೂ ಉತ್ರಿ ಮಳೆ ಪ್ರಾರಂಭವಾಗುವ ಸಮಯದಲ್ಲಿ ದೇವರಿಗೆ ನೀರು ಹಾಕುವುದರೊಂದಿಗೆ ಆರಂಭವಾಗುವ ಈ ಜಾತ್ರೆಯು ಹಲವು ವಿಧಿ ವಿಧಾನ ಮತ್ತು ಸಂಪ್ರದಾಯಗಳನ್ನು ಆಚರಿಸುವ ವಿಶೇಷತೆ ಇಲ್ಲಿದೆ ಜಾತ್ರೆಯ ವಿಶೇಷ ಯಾವ ಮಳೆಯು ಬಾರದಿದ್ದಕ್ಕೂ ಉತ್ರಿ ಮಳೆ ಮಾತ್ರ ಈ ಜಾತ್ರೆಯೊಂದಿಗೆ ಆರಂಭವಾಗುವುದು ವಿಶೇಷ ಬಹುಕಾಲದಿಂದ ರೈತರ ಹಾಗೂ ಭಕ್ತರ ನಂಬಿಕೆಯ೦ತೆ ಜಾತ್ರೆಯ ಮುಂದೆ ಹಿಂಗಾರು ಬಿತ್ತನೆಗೆ ಹಸಿಯಾಗುವಷ್ಟು ಮಳೆ ಬೀಳುವುದು ಈ ದೇವರ ಮಹಿಮೆಯಾಗಿದೆ ಎಂದು ಹೇಳಬಹುದಾಗಿದೆ. ಈ ಸಲ ಈ ವರ್ಷದ ಮುಂಗಾರು ಮಳೆಯ ಪ್ರಾರಂಭಕ್ಕಿ೦ತ ಮೊದಲೆ ಪ್ರಾರಂಭಗೊಂಡಿರುವ ಕಾರಣ ಇಲ್ಲಿವರೆಗೂ ಹೆಚ್ಚಿನ ಮಳೆಯಾಗಿದ್ದರಿಂದ ಜಾತ್ರೆಯ ದಿವಸದ ವೆರೆಗೂ ಮಳೆಗಳು ಸುರಿದಿದ್ದವು ಜಾತ್ರೆ ಪ್ರಾರಂಭಗೊ೦ಡ ದಿವಸದಿಂದ ಮುಕ್ತಾಯವಾಗಿರುವ ಮಳೆಯಾಗಲಿಲ್ಲಿ ಎಂದರೆ ಇಂದು ಮಾರುತೇಶ್ವರ ಹಾಗೂ ಬಸವಣ್ಣನ ಮಹಿಮೆ ಎಂದು ಹೇಳಬಹುದಾಗಿದೆ. ಒಟ್ಟಿನಲ್ಲಿ ಬರಗಾಲವಿದ್ದಾಗ ಮಳೆಯನ್ನು ಕೋಡುವ ಅತಿವೃಷ್ಟಿ ಆದಾಗ ಮಳೆಯನ್ನು ಕಡಿಮೆ ಮಾಡುವ ಆ ದೇವರುಗಳ ಮಹಿಮೆಗಳು ಕಾಲಗಟ್ಟಗಳಲ್ಲಿ ಜರುಗುತ್ತವೆ ಎಂದರೆ ದೇವರು, ಇಲ್ಲ ಎನ್ನುವ ನಾಸ್ತಿಕರಿಗೆ ಈ ದೇವಸ್ಥಾನಗಳು ಸವಾಲು ಎಂದು ಹೇಳಬಹುದು
ಈ ಜಾತ್ರೆ ಮಹೋತ್ಸವದಲ್ಲಿ ಚಿತ್ತರಗೆ ಕಿರಸೂರು ಹಡಗಲಿ, ಬೇವೂರ, ಹಳ್ಳೂರು, ಬಗವತಿ, ಹುನಗುಂದ ಇಲಕಲ್ಲ ಹಿರೆಮಾಗಿ, ಮೆಂದಾಪೂರು ಗಂಗೂರು ಹರೇ ಮಾಗಿ ಹಳ್ಳೂರು ,ಬೇವೂರು ಬಾಗಲಕೋಟೆ ಬಗವತಿ ಮುಂತಾದ ಸದ್ಬಕ್ತರು ದೇವಸ್ಥಾನಗಳಿಗೆ ತೆರಳಿ ಭಕ್ತಿಯ ನಮನೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು.
ಅಂದು ಸಂಜೆ ತಿಮ್ಮಾಪುರ ಗೆಳೆಯರ ಬಳಗದ ವತಿಯಿಂದ ಹುನಗುಂದ ತಾಲೂಕಿನ ಅಡಿವಾಳ ಗ್ರಾಮದ ಕಲಾಸಂಗಮ ಮೆಲೋಡಿಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!