ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶಿಷ್ಟ, ವೈವಿಧ್ಯಮಯ ಕವನಗಳ “ಮಾಸದ ದಿನಗಳು” ಕವನ ಸಂಕಲನ ಲೋಕಾರ್ಪಣೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಘಟಕ ಮತ್ತು ಪಾಟೀಲ್ ಪ್ರಕಾಶನ ಕುಷ್ಟಗಿ ಇವರು ಸಂಯುಕ್ತವಾಗಿ ಆಯೋಜಿಸಿದ ಸಾಹಿತಿ ಅಮರೇಗೌಡ ಪಾಟೀಲ್ ಜಾಲಿಹಾಳ, ಇವರ ದ್ವಿತೀಯ ಕವನ ಸಂಕಲನ ಮಾಸದ ದಿನಗಳು, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಕುಷ್ಟಗಿ ಪಟ್ಟಣದ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಜರುಗಿತು.
ಅಮರೇಗೌಡ ಪಾಟೀಲ್ ಅವರ ಈ ಮಾಸದ ದಿನಗಳು, ಕವನಸಂಕಲನವನ್ನು ಹಿರಿಯ ಸಾಹಿತಿಗಳಾದ ಹ. ಯ. ಈಟಿ ಯವರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೋರ್ವ ಹಿರಿಯ ಸಾಹಿತಿಗಳಾದ ಶೇಖರಗೌಡ ವಿ. ಸರನಾಡಗೌಡ್ರ, ವಹಿಸಿದ್ದರು.
ಮಾಸದ ದಿನಗಳು ಕವನ ಸಂಕಲನದ ಕವಿ, ಮತ್ತು ಕೃತಿಯ ಪರಿಚಯವನ್ನು ನಿವೃತ್ತ
ಪ್ರಾಧ್ಯಾಪಕ, ಶಿವಸಂಗನಗೌಡ ಶಿವನಗುತ್ತಿ ಅವರು ಸುಧೀರ್ಘವಾಗಿ ಮಾತನಾಡಿ, ಈ ಸಂಕಲನದ ಕವನಗಳೆಲ್ಲವೂ ಅಧ್ಭುತವಾಗಿ ಮೂಡಿ ಬಂದಿವೆ, ಎಂದರು.
ಕಾರ್ಯಕ್ರಮದ ಅತಿಥಿಗಳಲ್ಲಿ ಒಬ್ಬರಾಗಿದ್ದ ಕುಷ್ಟಗಿ ಪಟ್ಟಣದ ವಕೀಲರು, ಸಾಹಿತ್ಯಾಭಿಮಾನಿಗಳಾದ ಮಹಾಂತೇಶ ಬಾದಾಮಿಯವರು ಅಮರೇಗೌಡರ ಸಾಹಿತ್ಯ ಇನ್ನೂ ಅಮೋಘವಾಗಿ ಬೆಳೆಯಲಿ, ಇದಕ್ಕೆ ನಮ್ಮ ಸಂಪೂರ್ಣ ಸಹಕಾರ, ಬೆಂಬಲವಿದೆ, ಎಂದರು.
ಕಾರ್ಯಕ್ರಮದಲ್ಲಿ ರವೀಂದ್ರ ಬಾಕಳೆಯವರು ತಮ್ಮ ಕವನದ ಮೂಲಕ, ಅಮರೇಗೌಡ ಪಾಟೀಲರ ಕವನಗಳ, ಮತ್ತು ಅವರ ವ್ಯಕ್ತಿತ್ವದ ಪರಿಚಯ ಮಾಡಿದ್ದು ವಿಶೇಷ ವೆನಿಸಿತು.
ಮಾಸದ ದಿನಗಳು, ಕವನ ಸಂಕಲನ ಲೋಕಾರ್ಪಣೆ ಯ ಈ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಯಾಗಿ ಭಾಗವಹಿಸಿದ ಶಿವಪ್ರಸಾದ್ ಹಾದಿಮನಿಯವರು, ಅಮರ್ಜಾ ಕಾವ್ಯನಾಮದ ಅಮರೇಗೌಡ ಪಾಟೀಲ್ ಜಾಲಿಹಾಳ ಅವರನ್ನು ಕುರಿತು ಅಮರೇಗೌಡ ಪಾಟೀಲ್ ರು ವೃತ್ತಿಯಿಂದ ನಿವೃತ್ತಿಯಾದರೂ, ಪ್ರವೃತ್ತಿ ಯಿಂದ ಈ ಇಳಿವಯಸ್ಸಿನಲ್ಲೂ ಕ್ರಿಯಾಶೀಲತೆಯನ್ನು
ಮೈಗೂಡಿಸಿಕೊಂಡು, ಸೃಜನಶೀಲ ಸಾಹಿತ್ಯ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಿರುವ ಯುವ ಪೀಳಿಗೆಗೆ ಮಾದರಿಯಾಗಿದೆ,
ಅವರ 34 ಕವನಗಳುಳ್ಳ, ಈ ಮಾಸದ ದಿನಗಳು,ಕವನ ಸಂಕಲನದಲ್ಲಿನ, ಒಣಮರ,
ಭಿನ್ನ ರಾಶಿ, ಕೆಂಪುಪಟ್ಟಿ, ತಲೆ ತಿರುಕರು, ಅಚ್ಛೇ ದಿನಗಳು, ನೋವು ಉಳಿದಾವು, ಕವಿತೆಗಳು
ಸಾರ್ವಕಾಲಿಕ ಸತ್ಯವನ್ನು ಬಿಂಬಿಸುವ ಕವಿತೆಗಳಾಗಿ
ಸಹೃದಯರ ಗಮನ ಸೆಳೆಯುತ್ತವೆ ಎಂದು ಹೇಳುತ್ತಾ
ಅಮರೇಗೌಡ ಪಾಟೀಲರು, ಪರಿಸರ ಪ್ರೇಮಿ, ಪಕ್ಷಿ ಪ್ರೇಮಿ, ಎಲ್ಲಕ್ಕೂ ಮಿಗಿಲಾಗಿ ಸಾಹಿತ್ಯ ಪ್ರೇಮಿಯಾಗಿ,ವಿಶಿಷ್ಟ ಕವಿಯಾಗಿ, ಬಹುಮುಖ ಪ್ರತಿಭಾ ಸಂಪನ್ನರಾಗಿ ನಮ್ ನಡುವೆ ಇರುವುದೇ ನಮ್ಮ ಸೌಭಾಗ್ಯ, ಎಂದು ಹೇಳಿದರು.
ಕಾರ್ಯಕ್ರಮದ
ಅಧ್ಯಕ್ಷ ತೆಯನ್ನು ಹಿರಿಯ ಸಾಹಿತಿಗಳಾದ ಶೇಖರಗೌಡ್ರು ಮಾತನಾಡುತ್ತಾ, ಗೌಡರ ಮಾಸದ ದಿನಗಳು ಕವನ ಸಂಕಲನ ಕನ್ನಡ ಸಾರಸ್ವತ ಲೋಕದಲ್ಲಿ ಅಮರವಾಗಿ ನಿಲ್ಲು ವ ಕೃತಿಯಾಗಲಿದೆ, ಅಂತಹ ಸತ್ವಯುತ ಕವನಗಳು ಈ ಸಂಕಲನದಲ್ಲಿವೆ,ಅವರಿಗೆ ಶುಭವಾಗಲಿ, ಎಂದು ಹಾರೖಸುವೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಟರಾಜ ಸೋನಾರ್, ನಬೀಸಾಬ್,ಎಂ. ಪಾಷಾ, ಬಾಗೇವಾಡಿ, ಮೌನೇಶ ನವಲಹಳ್ಳಿ,
ಎಸ್. ಜಿ ಕಡೇಮನಿ,ಸಿದ್ರಾಮಪ್ಪ ಅಮರಾವತಿ,ಪ್ರಕಾಶ್ ಬೆದವಟ್ಟಿ, ಪ್ರಭುರಾಜ ಎಸ್ ಪಾಟೀಲ, ಮುಂತಾದವರು
ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡಾಂಬೆ, ಭುವನೇಶ್ವರಿ ಯ ಭಾವಚಿತ್ರಕ್ಕೆ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರಿಂದ ಪುಷ್ಪಗಳ ಅರ್ಪಣೆಯಾಗಿ,
ರಾಘವೇಂದ್ರ ಅವರಿಂದ ಪ್ರಾರ್ಥನೆ ನೆರವೇರಿತು,
ಕುಷ್ಟಗಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಶಿಕ್ಷಕ, ಮಹೇಶ ಹಡಪದ, ಅವರು ಸ್ವಾಗತಿಸಿದರು, ಸಾಹಿತಿ ಹನುಮೇಶ ಗುಮಗೇರಿಯವರು, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ, ನಿರೂಪಿಸಿದ ಮಹೇಶ ಹಡಪದ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!