ಗುರುಮಠಕಲ್: ತಾಲೂಕಿನ ರೈತರಿಗೆ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಹಿಂಗಾರು ಬಿತ್ತನೆಗೆ ಶೇಂಗಾ ಬೀಜಗಳನ್ನು ವಿತರಿಸಲಾಯಿತು.
ಬಿತ್ತನೆ ಬೀಜ ವಿತರಿಸಿದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ಮಾತನಾಡಿ, ತಾಲ್ಲೂಕಿನ ಹಿಂಗಾರು ಅವಧಿಗೆ ಬಿತ್ತನೆಗಾಗಿ ಶೇಂಗಾ ಬೀಜಗಳ ದಾಸ್ತಾನು 800 ಕ್ವಿಂಟಾಲ್ ಬಂದಿದ್ದು, ನಿನ್ನೆ ಶುಕ್ರವಾರ 300 ಕ್ವಿಂಟಾಲ್ ಹಾಗೂ ಶನಿವಾರ 150 ರೈತರು ರಿಯಾಯಿತಿ ದರದಲ್ಲಿ ಸುಮಾರು 500 ಜನ ರೈತರು ಬೀಜಗಳನ್ನು ಖರೀದಿಸಿದ್ದಾರೆ ಎಂದು ಹೇಳಿದರು.
ಸದ್ಯ ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜಗಳನ್ನು ಪರಿಶಿಷ್ಠ ಜಾತಿ ಮತ್ತು ಪಂಗಡದ ರೈತರಿಗೆ, 10650 ರೂ ಪ್ರತಿ ಕ್ವಿಂಟಾಲ್ ಗೆ ಮತ್ತು ಸಾಮಾನ್ಯ/ಇತರೆ ರೈತರಿಗೆ 11600 ರೂ. ರಿಯಾಯತಿ ದರದಲ್ಲಿ ನೀಡುತ್ತಿದ್ದು, ಇನ್ನೂ 350 ಕ್ವಿಂಟಲ್ ಶೇಂಗಾ ಬೀಜಗಳ ದಾಸ್ತಾನು ಇದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಲು ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ




















