ಬಾಗಲಕೋಟೆ : ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘಟನೆ ಪರವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೆಳೆ ಸಮೀಕ್ಷೆದಾರರಿಗೆ ಯಾವುದೇ ರೀತಿಯ ಸರಕಾರದಿಂದ ಸೌಲಭ್ಯವಿಲ್ಲ, ಕನಿಷ್ಠ ವೇತನ ಮಾಡಬೇಕು, ಗುರುತಿನ ಚೀಟಿ, ರೇನ್ ಕೋಟ್, ಶೂ ಹಾಗೂ ನಮ್ಮ ಕೆಲಸವನ್ನು ಖಾಯಂ ಗೊಳಿಸಬೇಕೆಂದು ಜಿಲ್ಲಾ ಅಧ್ಯಕ್ಷರಾದ ಬಸು ದಾಸರವರು ಮಾತನಾಡಿದರು. ಈ ಸಂದರ್ಭದಲ್ಲಿ ಪರಶುರಾಮ ಬಂಡಿ, ಮಂಜು ಪೂಜಾರ, ಠಾಕ್ರೆಪ್ಪ ಲಮಾಣಿ ಹಾಗೂ ಹುನಗುಂದ, ಬಾದಾಮಿ ಬೀಳಗಿ,ಮುಧೋಳ, ಜಮಖಂಡಿ , ಬಾಗಲಕೋಟೆ ಸೇರಿದಂತೆ ಎಲ್ಲಾ ತಾಲ್ಲೂಕಿನ ಪಿ ಆರ್ ಉಪಸ್ಥಿತರಿದ್ದರು.
- ಕರುನಾಡ ಕಂದ



















