ಗುರುಮಠಕಲ್: ಅ.8 ಶೇ. 5 ರ ಅನುದಾನ ಬಳಕೆಗೆ ಸಂಬಂಧಿಸಿದಂತೆ ಮತ್ತು ಅದರ ಲಭ್ಯತೆಯ ಕುರಿತು ಶಾಸಕ ಶರಣಗೌಡ ಕಂದಕೂರು ಅವರಲ್ಲಿ ಎಪಿಡಿ ಸಂಸ್ಥೆಯ ಅಧಿಕಾರಿಗಳು ಮತ್ತು ವಿಶೇಷಚೇತನರು ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಕೆ.ಡಿ.ಪಿ.ಮಾಸಿಕ ಹಾಗೂ ತ್ರೈಮಾಸಿಕ ಪರಿಶೀಲನಾ ಸಭೆಗಳಲ್ಲಿ ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗೆ ಸಂಬಂಧಿಸಿದ 5% ಅನುದಾನದ ಬಳಕೆ ಮತ್ತು ಸುಲಭ ಲಭ್ಯತೆಯ ಅನುಷ್ಠಾನದ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಲು ಅವರು ಮನವಿ ಮಾಡಿದರು.
ಶಾಸಕರ ಮೌಖಿಕ ಆದೇಶದ ಹಿನ್ನೆಲೆಯಲ್ಲಿ ಕಳೆದ ತಿಂಗಳು 19 ನೇ ತಾರೀಖಿನಂದು ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನಕ್ಕೆ ಯುಡಿಐಡಿ ಕಾರ್ಡ್ ಶಿಬಿರವನ್ನು ಆಯೋಜಿಸಲಾಗಿತ್ತು. ಇದರ ಪರಿಣಾಮವಾಗಿ ಒಟ್ಟಾರೆ 98 ಜನ ವಿಕಲಚೇತರನು ಇದರ ಸದುಪಯೋಗವನ್ನು ಪಡೆದ ಪರಿಣಾಮವಾಗಿ ಶಾಸಕರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಪಿಡಿ ಸಂಸ್ಥೆಯ ಸಂಯೋಜಕ ವಿರೂಪಾಕ್ಷ ಮಾಲಿಪಾಟೀಲ, ಜೀವನ ಉಪಯೋಗ ವಿಭಾಗದ ಶಿವಯೋಗಪ್ಪ, ಅರ್ ಪಿಡಿ ಸಂಸ್ಥೆಯ ಸಿದ್ದನಗೌಡ ನಜರಾಪುರ, ರಮೇಶ್ ಮಾನೆ,ಹಣಮಂತ, ಚಂದ್ರಪ್ಪ, ಸ್ವಾಮಿ ಆಯ್ಯಪ್ಪ, ಚನ್ನಪ್ಪ, ಗಂಗಪ್ಪ, ಮೋನಪ್ಪ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















