
ಯಾದಗಿರಿ :ಎಪಿಡಿ ಸಂಸ್ಥೆಯ ವತಿಯಿಂದ ಇಂದು ಯಾದಗಿರಿ ತಾಲೂಕಿನಲ್ಲಿ ವಿಕಲಚೇತನರ ಸಾಧನೆ ಸಲಕರಣೆ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು, ರಮೇಶ ಕಟ್ಟಿಮನಿ ಸ್ವಾಗತವನ್ನು ಕೋರಿದರು. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕರಾದ ಶ್ರೀ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ನಗರಸಭೆ ಅಧ್ಯಕ್ಷ ಕುಮಾರಿ ಲಲಿತಾ ಅನಪುರ್, ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀ ಶರಣಪ್ಪ ಪಾಟೀಲ್, ಸರಕಾರಿ ಆಸ್ಪತ್ರೆ ಡಾ. ಕುಮಾರ ಅಂಗಡಿ, ಎಪಿಡಿ ಸಂಸ್ಥೆಯ ನಿರ್ದೇಶಕ ಶ್ರೀ ರಮೇಶ್ ದುಂಡಪ್ಪ ಗೊಂಗಡಿ ಹಾಗೂ ಮ್ಯಾನೇಜರ್ ಶ್ರೀಮತಿ ಸಂಪ್ರೀತಾ ದೇವಪುತ್ರ ಅವರು ಭಾಗವಹಿಸಿದ್ದರು.

ಎಪಿಡಿಯ ನಿರ್ದೇಶಕರಾದ ರಮೇಶ ದುಂಡಪ್ಪ ಗೊಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಎಪಿಡಿ ಸಂಸ್ಥೆಯು 1959 ರಲ್ಲಿ ಸ್ಥಾಪನೆಯಾಯಿತು. ಯಾದಗಿರಿ ಜಿಲ್ಲೆಯಲ್ಲಿ 3 ವರ್ಷದಿಂದ ಕೆಲಸ ಮಾಡುತ್ತಿದೆ, ಕೇರಳ ತಮಿಳನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಎಪಿಡಿ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ, ವಿಕಲಚೇತನರ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ ಎಂದರು.
ನಗರ ಸಭೆ ಅಧ್ಯಕ್ಷರು ಮಾತನಾಡಿ ಎಪಿಡಿ ಸಂಸ್ಥೆಯು ಕಳೆದ 3 ವರ್ಷದಿಂದ ತುಂಬಾ ಒಳ್ಳೆಯ ಅವಕಾಶ ನೀಡುತ್ತಿದೆ ಸ್ವಯಂ ಉದೋಗ ಕಲ್ಪಿಸಿ ಕೊಡುವುದರ ಜೊತೆಗೆ ಹಲವಾರು ಜನರಿಗೆ ಆಸರೆ ಆಗಿದೆ ಸಾಧನೆ ಸಲಕರಣೆ ನೀಡುವುದು ಸಂತಸದ ವಿಚಾರ ಹಾಗೂ ನಗರ ಸಭೆಯಿಂದ ಸಿಗುವ ಸವಲತ್ತನ್ನು ಎಪಿಡಿ ಸಂಸ್ಥೆಗೆ ನೀಡುವ ಭರವಸೆಯನ್ನು ನೀಡಿದರು ಯಾದಗಿರಿ ಶಾಸಕರು ಮಾತನಾಡಿ ವಿಕಲಚೇತನರಿಗೆ ಸರಕಾರದಿಂದ ಹಲವಾರು ಯೋಜನೆಗಳು ಸಿಗುತ್ತಾ ಇದ್ದು ಅದನ್ನು ಎಲ್ಲರೂ ಸರ್ಮಪಕವಾಗಿ ಬಳಸಿಕೊಳ್ಳಬೇಕು ಮತ್ತು ಎಪಿಡಿ ಸಂಸ್ಥೆ ಸಂಸ್ಥಾಪಕರಾದ ಡಾ.ಹೇಮಾ ಮೇಡಂ ಅವರು ವಿಕಲಚೇನರಿದ್ದು ಒಂದು ಗುರಿ ಇಟ್ಟಿಕೊಂಡು ಇಂತಹ ಸಾಧನೆ ಮಾಡಿದ್ದಾರೆ ನೀವೂ ಸಾಧನೆ ಮಾಡಬೇಕು ಸಮಾಜದಲ್ಲಿ ಎಲ್ಲರಂತೆ ಬದುಕಬೇಕು ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಅಂತರಾಷ್ಟ್ರೀಯ ಹಾಸ್ಯ ನಟರಾದ ಬಸವರಾಜ ಮಹಾಮನಿ ಮಾತನಾಡಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದು ತುಂಬಾ ಶ್ಲಾಘನಿಯ ಎಂದರು ಹಾಗೂ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಅತಿಥಿಗಳಿಂದ ಫಲಾನುಭವಿಗಳಿಗೆ ಸಿಪಿ ಚೇರ್, ವಾಕರ್, ಸ್ಟಿಕ್, ಬ್ಲೈಂಡ್ ಸ್ಟಿಕ್, ಟಾಯ್ಲೆಟ್ ಕಮೋಡ್, ಸ್ಟ್ಯಾಂಡಿಂಗ್ ಫ್ರೇಮ್ ಅಕ್ಷಲರಿ ಕ್ಲಚಸ್ ಕೃತಕ ಕೈಕಾಲುಗಳನ್ನು ಸೇರಿದಂತೆ ವಿವಿಧ ಸಾಧನೆ ಸಲಕರಣೆಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಫಿಜಿಯೋಥೆರಪಿಸ್ಟ್ ವೈಷ್ಣವಿ ಪ್ರಿಯದರ್ಶನ, ಸಮುದಾಯ ಸಂಘಟಕರು ರಮೇಶ್, ಜ್ಯೋತಿ, ಮೋಹನ್, ಶರಣಮ್ಮ, ಶಿಲ್ಪಾ ಹಾಗೂ ಅನಿಮೇಟರಸ ಶೈಲಜಾ, ಶರಣಪ್ಪ, ಬಸವರಾಜ್, ಖಂಡಪ್ಪ, ಮನ್ನು, ಭಾಗ್ಯಲಕ್ಷ್ಮಿ, ಕೈಫ್, ರಮೇಶ್ ಬಿ , ಭೀಮರಾಜು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















